ದ್ವಿಚಕ್ರ ವಾಹನ ಕಳವು

59

Get real time updates directly on you device, subscribe now.


ಕುಣಿಗಲ್: ಅಂಗಡಿಯಲ್ಲಿ ವ್ಯಾಪಾರ ಕುದುರಿಸುವ ನೆಪದಲ್ಲಿ ಮಾಲೀಕನ ಬೈಕ್ ಕಿ ಎಗರಿಸಿ, ಬೈಕ್ ಕಳುವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ 18ನೇ ವಾರ್ಡ್ನಲ್ಲಿ ಪ್ಯಾಬ್ರಿಕೇಶನ್ ಅಂಗಡಿ ನಡೆಸುತ್ತಿದ್ದ ಮನ್ಸೂರ್ ಪಾಶ ಅಂಗಡಿಯಲ್ಲಿ ಇರುವಾಗ ಕೆಲ ದಿನದ ಹಿಂದೆ ವ್ಯಾಪಾರಕ್ಕೆಂದು ಬಂದ ವ್ಯಕ್ತಿಯೊಬ್ಬ ಮಾಲೀಕನ ಗಮನ ಬೇರೆಡೆ ಸೆಳೆದು ಟೇಬಲ್ ಮೇಲಿದ್ದ ಹೊಂಡಾ ಆಕ್ಸಿಸ್ ಬೈಕ್ ಕೀ ಎಗರಿಸಿ ಬೈಕ್ ಕಳವು ಮಾಡಿ ಪರಾರಿಯಾಗಿದ್ದು, ಮಾಲೀಕ ಹೊರಬಂದು ಕೂಗಿಕೊಳ್ಳುವಷ್ಟರಲ್ಲಿ ಅಪರಿಚಿತ ಬೈಕ್ನೊಂದಿಗೆ ಪರಾರಿಯಾಗಿದ್ದು ಬೈಕ್ ಮೌಲ್ಯ ಅಂದಾಜು 70 ಸಾವಿರ ರೂ. ಗಳಾಗಿದ್ದು, ಬೈಕ್ನಲ್ಲಿ ಹಲವು ಮೂಲ ದಾಖಲೆಗಳು ಸಹ ಇವೆ ಎಂದು ಮಾಲೀಕ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!