ಜನಸ್ನೇಹಿ ಸೇವೆ ನೀಡೊದು ಪೊಲೀಸರ ಕರ್ತವ್ಯ

182

Get real time updates directly on you device, subscribe now.


ಕೊರಟಗೆರೆ: ಜನಸ್ನೇಹಿ ಸೇವೆ ನೀಡೊದು ಪೊಲೀಸರ ಪ್ರಮುಖ ಕರ್ತವ್ಯ, ಜನಸಾಮಾನ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ತಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಬೇಕು, ಇಲ್ಲವಾದ್ರೆ ಪ್ರಕರಣ ದಾಖಲಿಸಲು ನಿರ್ಲಕ್ಷ್ಯ ವಹಿಸಿದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ತುಮಕೂರು ಎಸ್ಪಿ ಕೆ.ವಿ.ಅಶೋಕ್ ತಿಳಿಸಿದರು.

ಕೊರಟಗೆರೆ ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿದರು.
ಗೃಹ ಸಚಿವರ ತವರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪಘಾತ ತಡೆಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ, ತುಮಕೂರು ಜಿಲ್ಲೆಯ 42 ಪೊಲೀಸ್ ಠಾಣೆಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿ ಅಪರಾಧ ಮತ್ತು ಅಪಘಾತ ಪ್ರಕರಣಗಳ ಮಾಹಿತಿ ಪಡೆಯುತ್ತೇನೆ, ಜನಸ್ನೇಹಿ ಸೇವೆ ನೀಡದ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಕೊರಟಗೆರೆ ಠಾಣೆಗೆ ಅಗತ್ಯ ಇರುವ ಮಹಿಳಾ ಸಿಬ್ಬಂದಿ ನಿಯೋಜನೆ ಬಗ್ಗೆ ನಮ್ಮ ಇಲಾಖೆಯ ಜೊತೆ ಮಾತನಾಡಿ ಅನುಕೂಲ ಕಲ್ಪಿಸುತ್ತೇನೆ, ತುರ್ತು ವೇಳೆ ಏನೇ ಸಮಸ್ಯೆಇದ್ರು 112 ಕ್ಕೆ ಸಾರ್ವಜನಿಕರು ಕರೆ ಮಾಡಿ ಇಲ್ಲವಾದ್ರೆ, ನನ್ನನ್ನೇ ನೇರವಾಗಿ ಸಂಪರ್ಕಿಸಿ, ಜನಸ್ನೇಹಿ ಸೇವೆ ನೀಡೋದು ಪೊಲೀಸ್ ಇಲಾಖೆಯ ಮುಖ್ಯ ಉದ್ದೇಶ ಆಗಿದೆ ಎಂದು ತಿಳಿಸಿದರು.

ಶಾಂತಿ ಕಾಪಾಡಲು ಎಸ್ಪಿ ಸಲಹೆ
ಗಣೇಶ ಪ್ರತಿಷ್ಠಾಪನೆಗೆ ಸರಕಾರದ ಆದೇಶ ಪಾಲನೆ ಮತ್ತು ವಿಸರ್ಜನೆಗೆ ಪೊಲೀಸರ ಭದ್ರತೆ ಪಡೆಯೋದು ಕಡ್ಡಾಯ, ಪ್ರತಿವರ್ಷ ಇರುವ ಆದೇಶವೇ ಪ್ರಸ್ತುತ ವರ್ಷವು ಇರಲಿದೆ, ಕಾನೂನು ಪಾಲನೆ ಮತ್ತು ಶಾಂತಿಯುತ ಸಡಗರ ಹಬ್ಬದ ಆಚರಣೆ ಎಲ್ಲರ ಜವಾಬ್ದಾರಿ, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಲಿದೆ ಎಂದು ಎಸ್ಪಿ ಭರವಸೆ ನೀಡಿದರು.

ಭೇಟಿಯ ವೇಳೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ಪಿಎಸೈ ಚೇತನಗೌಡ, ಕೋಳಾಲ ಪಿಎಸೈ ರೇಣುಕಾ, ಎಎಸೈ ಯೋಗೀಶ್, ಮಂಜುನಾಥ, ಧರ್ಮೇಗೌಡ,ಗೋವಿಂದನಾಯ್ಕ ಸೇರಿದಂತೆ ಸಿಬಂದಿ ವರ್ಗ ಇದ್ದರು.

Get real time updates directly on you device, subscribe now.

Comments are closed.

error: Content is protected !!