ಕ್ರೀಡೆಯಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ

96

Get real time updates directly on you device, subscribe now.


ಗುಬ್ಬಿ: ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಲು ಕ್ರೀಡೆ ಬಹಳ ಮುಖ್ಯ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಫ್ರೆಂಡ್ಸ್ ಯೂನಿಯನ್ ಕ್ಲಬ್ನಲ್ಲಿ ಒಳಾಂಗಣ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಯುವಕರು ಮೊಬೈಲ್ ಗೀಳಿಗೆ ಬಿದ್ದಿದ್ದು ದೈಹಿಕವಾಗಿ ದಂಡಿಸುವಂತಹ ಆಟಗಳನ್ನೇ ಮರೆತಿದ್ದಾರೆ, ನಾನು ಸುಮಾರು 35 ವರ್ಷಗಳಿಂದಲೂ ನಿರಂತರವಾಗಿ ಶೆಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದು, ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿ ತುಂಬಿಕೊಂಡಿದ್ದು ಒತ್ತಡದಿಂದ ಹಿಮ್ಮುಖವಾಗಲು ಕ್ರೀಡೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ತಾಲೂಕು ಮಟ್ಟದಲ್ಲಿ ಇಂತಹ ವ್ಯವಸ್ಥಿತ ಕೋರ್ಟ್ ಮಾಡಿರುವುದು ಬಹಳ ವಿಶೇಷ ಎನಿಸಿದ್ದು, ಪ್ರತಿನಿತ್ಯ ಇಂತಹ ಆಟಗಳನ್ನು ಆಡುವುದರಿಂದ ಉತ್ತಮ ವ್ಯಾಯಾಮ ಆಗುತ್ತದೆ, ಇಲ್ಲಿನ ಕ್ಲಬ್ ಸುಮಾರು 113 ವರ್ಷಗಳ ಹಳೆಯದ್ದು ಎಂಬುದನ್ನು ಕೇಳಿ ಬಹಳ ವಿಶೇಷ ಎನಿಸಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ನ ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಬಿಜೆಪಿ ಮುಖಂಡ ಎಚ್.ಎ.ರವೀಶ್, ಕಾರ್ಯದರ್ಶಿ ಡಾ.ರಾಜೇಶ್, ಸದಸ್ಯರಾದ ಶರತ್ ಚಂದ್ರ ಬೋಸ್, ರೇಣುಕ ಪ್ರಸಾದ್, ಸುರೇಶ್, ದಕ್ಷಿಣ ಮೂರ್ತಿ, ಕೆ.ವಿ.ನಟರಾಜು, ಮೋಹನ್, ಕೃಷ್ಣಮೂರ್ತಿ, ಕುಮಾರ್, ಜಿ.ಆರ್.ಶಿವಕುಮಾರ್, ರಂಗಸ್ವಾಮಿ ಸೇರಿದಂತೆ ಕ್ಲಬ್ನ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!