ಮಧುಗಿರಿ: ಬದಲಾದ ಬದುಕಿನಲ್ಲಿ ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮಿಜಿ ತಿಳಿಸಿದರು.
ತಾಲ್ಲೂಕಿನ ಗೂಬಲುಗುಟ್ಟೆ ಗ್ರಾಮದಲ್ಲಿ ಮಂಜುನಾಥ ಮತ್ತು ಸಂಗಡಿಗರು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯವಹಿಸಿ ಮಾತನಾಡಿ, ಬಹಳಷ್ಟು ಕುಟುಂಬಗಳು ಆಡಂಬರದ ವಿವಾಹಗಳಿಗೆ ಮಾರುಹೋಗಿ, ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಂಡ ಪರಿಸ್ಥಿತಿ ನಮಗೆ ತಿಳಿದಿದೆ, ಇಂತಹ ಸಂದರ್ಭಗಳಲ್ಲಿ ಸಾಮೂಹಿಕ ವಿವಾಹಗಳು ಮಾದರಿ ಆಗಬೇಕಾಗಿದೆ, ಸರಕಾರ ಸಾಮೂಹಿಕ ವಿವಾಹಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು.
ಕೋವಿಡ್ ನಿಂದಾಗಿ ಬಹುತೇಕ ಕುಟುಂಬಗಳು ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಿದ್ದಾರೆ, ಅದನ್ನು ತಪ್ಪಿಸಬೇಕು, ಕೋವಿಡ್ ನಿಂದಾಗಿ ಎಲ್ಲಾ ವರ್ಗದ ಜನರ ಸ್ಥಿತಿ ಅತಂತ್ರವಾಗಿದೆ. ಇದೀಗ ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು, ಸಾಮಾಜಿಕ ಅಂತರ ಜನರಲ್ಲಿ ದೂರ ಆಗುತ್ತಿರುವ ಬಗ್ಗೆ ವಿಷಾದಿಸಿದ ಅವರು, ಪ್ರತಿಯೊಬ್ಬರು ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಕೋವಿಡ್ ಲಸಿಕೆ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ, ಆಯೋಜಕ ಮಂಜುನಾಥ, ರಂಗಣ್ಣ, ಸುರೇಶ್, ರಾಮಚಂದ್ರ, ಮುನಿರಾಜು, ತಾಪಂ ಸದಸ್ಯ ದೊಡ್ಡಯ್ಯ ಬಾವಿಮನೆ ಕಾಂತಣ್ಣ ಹಾಜರಿದ್ದರು.
ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಿ: ಶ್ರೀ ಹನುಮಂತನಾಥ ಸ್ವಾಮಿಜಿ
Get real time updates directly on you device, subscribe now.
Prev Post
Next Post
Comments are closed.