ಅಪಘಾತದಲ್ಲಿ ಇಬ್ಬರ ಸಾವು

125

Get real time updates directly on you device, subscribe now.


ಕುಣಿಗಲ್: ವೇಗವಾಗಿ ಸಾಗುತ್ತಿದ್ದ ಕಾರು ಸರ್ವಿಸ್ ರಸ್ತೆಯಿಂದ ಎದುರಾದ ಸರಕು ಸಾಗಾಣೆ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೂರು ಗ್ರಾಮದ ಬಳಿ ನಡೆದಿದೆ.

ಮೃತರನ್ನು ಮಾದನಾಯಕನ ಹಳ್ಳಿಯ ಶೋಭಾ (35) ಇವರ ಪುತ್ರ ನಿಖಿಲ್ (13) ಎಂದು ಗುರುತಿಸಲಾಗಿದೆ, ಶೋಭಾ ಅವರ ಪತಿ ಗಂಗೇಶ್ ಹಾಗೂ ಪುತ್ರಿ ಭುವನಾ ಜೊತೆ ಸೀಗೆಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದು ಸರಕು ಸಾಗಾಣೆ ಲಾರಿ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ದಿಡೀರ್ ಬಂದಿದ್ದರಿಂದ ಅಪಘಾತ ಸಂಭವಿಸಿದೆ, ಸರಕು ಸಾಗಾಣೆ ಲಾರಿ ಪರಾರಿಯಾಗಿದೆ, ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!