ಕುಣಿಗಲ್: ಬಾಲ್ಯದಿಂದಲೆ ದೇಶ ಪ್ರೇಮ ಅಳವಡಿಸಿಕೊಂಡು ಮಾತೃ ಭೂಮಿಯ ರಕ್ಷಣೆಗೆ ಎಂತಹ ತ್ಯಾಗಕ್ಕೂ ಸಿದ್ಧರಿರಬೇಕೆಂದು ಭಾರತೀಯ ಸೇನೆಯ ಮೇಜರ್ ಸತೀಶ್ ಹೇಳಿದರು.
ತಾಲೂಕಿನ ಹುಲಿಯೂರು ದುರ್ಗದಲ್ಲಿ ಭಾರತೀಯ ಸೇನೆ ಮತ್ತು ಶಿಕ್ಷಣ ಇಲಾಖೆ ಹಮ್ಮಿಕೊಳ್ಳಲಾದ ವೀರಗಾಥ 3.0 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಜನತೆ ಮನಸು ಮಾಡಿದರೆ ಏನುಬೇಕಾದರೂ ಸಾಧನೆ ಮಾಡುತ್ತಾರೆ, ದೇಶ ಸೇವೆ ನಿಟ್ಟಿನಲ್ಲಿ ಹಲವು ಅವಕಾಶಗಳಿವೆ, ಸೇನೆ ಸೇರುವ ಮೂಲಕ ತಾಯಿ ನಾಡಿನ ಸೇವೆಗೆ ಅರ್ಪಿಸಿಕೊಳ್ಳಬಹುದು, ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಅರೋಗ್ಯ ಕಾಪಾಡಿಕೊಂಡು ಅಗತ್ಯ ಬಿದ್ದಾಗ ದೇಶ ಸೇವೆಗೆ ಮುಂದಾಗುವ ಮೂಲಕ ಸಾರ್ಥಕತೆ ಹೊಂದಬಹುದು ಎಂದರು.
ಶೌರ್ಯ ಪ್ರಶಸ್ತಿ ವಿಜೇತ ಸುಬೇದಾರ್ ಗುರುಂಗ್, ಸುಬೆದಾರ್ ಜತೀನ್ಯಾದವ್, ಪಿಎಸೈ ಸುನಿಲ್ ಕುಮಾರ್, ಡಯಟ್ ಅಧಿಕಾರಿ ಉಮೇಶ, ರಂಗರಾಜು, ಕೃಷ್ಣಕುಮಾರ, ಪ್ರಸಾದ್, ಲಕ್ಷ್ಮೀನಾರಾಯಣ, ಗ್ರಾಪಂ ಸದಸ್ಯ ನಟರಾಜ್ ಇತರರು ಇದ್ದರು.
Comments are closed.