ಮುಂದುವರೆದ ಹೋರಾಟ ಗ್ರಾಮೀಣ ಭಾಗದ ಜನರ ಪರದಾಟ

ಬಿಕೋ ಎನ್ನುತ್ತಿದೆ.. ತಿಪಟೂರು ಬಸ್ ಸ್ಟ್ಯಾಂಡ್!

123

Get real time updates directly on you device, subscribe now.

ತಿಪಟೂರು: ಸಾರಿಗೆ ಬಸ್ ಚಾಲಕರು ಮತ್ತು ನಿರ್ವಾಹಕರೂ ತಮ್ಮ 6ನೇ ವೇತನ ಆಯೋಗಕ್ಕಾಗಿ ಹಾಗೂ ನಮ್ಮನು ಸರ್ಕಾರಿ ನೌಕರರಂತೆ ಪರಿಗಣಿಸಿ ಎಂದು ನಡೆಸುತ್ತಿರುವ ಮುಷ್ಕರ ಸತತ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಬಸ್ಗಳಿಲ್ಲದೆ ಪ್ರಯಾಣಿಕರು ಪರದಾಡುವ ದೃಶ್ಯ ಕಂಡು ಬಂದಿತು.
ಕೂಲಿ ಕೆಲಸಕ್ಕಾಗಿ ದಿನ ನಿತ್ಯ ಗ್ರಾಮೀಣ ಪ್ರದೇಶದಿಂದ ಬರುವ ನೂರಾರು ಕೆಲಸಗಾರು, ಕೊಬ್ಬರಿ ಅಂಗಡಿ ಅಮಾಲಿಗಳು, ಗಾರೆ ಕೆಲಸಗಾರರು, ದಿನಸಿ ಅಂಗಡಿಗೆ ಬರುವ ಕೆಲಸಗಾರರು ಒಂದು ದಿನದ ಮುಷ್ಕರ ಎಂದು ತಿಳಿದು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದದು ಸಾಮಾನ್ಯವಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶದ ಮಂದಿ ಬಸ್ ಸಂಚಾರದ ಅವ್ಯವಸ್ಥೆಯಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೋಷಕರ ಸಹಾಯ ಪಡೆದು ವಿದ್ಯಾರ್ಥಿಗಳು ಬೈಕ್ಗಳಲ್ಲಿ ಡ್ರಾಪ್ ಪಡೆದರು. ಇದು ಇನ್ನೆಷ್ಟು ದಿನ.. ಇನ್ನೂ ಮುಂದುವರೆಯುತ್ತಾ ಎಂಬ ಪ್ರಶ್ನೆ ಕೆಲವರಿಂದ ಕೇಳಿ ಬಂದಿತು.
ನಾನು ಚಿಂದೇನಹಳ್ಳಿಯಿಂದ ಪ್ರತಿನಿತ್ಯ ಬರುತ್ತಿದ್ದು ಹಿಂದಿನ ದಿನ ಮುಷ್ಕರ ಎಂದು ತಿಳಿದಿತ್ತು ಆದರೆ ಈದಿನವು ಇದೆ ಎಂದು ತಿಳಿಯಲಿಲ್ಲ ಖಾಸಗಿ ಬಸ್ಸಿನವರು ಜಾಸ್ತಿ ಕೇಳುತ್ತಿದ್ದಾರೆ ಕೂಲಿ ಕೆಲಸ ಮಾಡುವವರು ಎಲ್ಲಿಂದ ತರಬೇಕು ಎಂದು ಗಾರೆ ಕೆಲಸಗಾರ ಕೃಷ್ಣಮೂರ್ತಿ ತುಮಕೂರು ವಾರ್ತೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕೆಂದ್ರ ಹಾಗೂ ರಾಜ್ಯ ಸರ್ಕಾರ ಕೊವೀಡ್ನಿಂದ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಿದೆ. ಸಾರಿಗೆ ನೌಕರರ 9 ಬೇಡಿಕೆಯಲ್ಲಿ ಈಗಾಗಲೇ ಸರ್ಕಾರ 8 ಬೇಡಿಕೆಗಳು ಬಗೆ ಹರಿಸಿದೆ. ಸರ್ಕಾರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಚಾಲಕರು-ನಿರ್ವಾಹಕರು ಸರ್ಕಾರದ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಷ್ಕರ ಕೈಬಿಟ್ಟು, ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಲಿ.
ಬಿ.ಸಿ.ನಾಗೇಶ್, ಶಾಸಕ, ತಿಪಟೂರು.

Get real time updates directly on you device, subscribe now.

Comments are closed.

error: Content is protected !!