ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

101

Get real time updates directly on you device, subscribe now.


ಕುಣಿಗಲ್: ವಿಶ್ವಕರ್ಮ ಜನಾಂಗವೂ ಸಮಾಜದ ಏಳಿಗೆಗೆ, ಪ್ರಗತಿಗೆ ತಮ್ಮದೆ ಆದ ರೀತಿಯಲ್ಲಿ ಕೊಡುಗೆ ನೀಡಿ ಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ ಎಂದು ಕಿತ್ತನಾಗಮಂಗಲ ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ತಾಲೂಕು ಅಡಳಿತ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಮಾಜದ ಏಳಿಗೆಗೆ ಎಲ್ಲಾ ಜನಾಂಗದವರ ಕೊಡುಗೆ ಅತ್ಯಗತ್ಯವಾಗಿದೆ, ವಿಶ್ವಕರ್ಮ ಜನಾಂಗವು ತಮ್ಮ ಕೌಶಲ್ಯಾಧರಿತ ಕೆಲಸಗಳಿಂದ ಎಲ್ಲಾ ರೀತಿಯಲ್ಲೂ ಉತ್ತಮ ಸೇವೆ ನೀಡುತ್ತಿದ್ದಾರೆ, ಬದಲಾದ ಕಾಲಘಟಕ್ಕೆ ತಕ್ಕಂತೆ ತಮ್ಮ ವೃತ್ತಿಯಲ್ಲೂ ಅತ್ಯಾಧುನಿಕ ಕೌಶಲ್ಯ ರೂಢಿಸಿಕೊಂಡು ಮತ್ತಷ್ಟು ಉತ್ತಮವಾಗಿ ಸಮಾಜಕ್ಕೆ ಸೇವೆ ನೀಡುತ್ತಿದ್ದಾರೆ, ಪ್ರಧಾನ ಮಂತ್ರಿಗಳು ಸಹ ವಿಶ್ವಕರ್ಮ ಜನಾಂಗದ ಏಳಿಗೆ ಮತ್ತು ಅವರ ಕೌಶಲ್ಯವೃದ್ಧಿಗಾಗಿ ಹಲವು ಜನಪರ ಯೋಜನೆ, ಆರ್ಥಿಕ ನೆರವಿನ ಘೋಷಣೆ ಮಾಡಿದ್ದು ಇವುಗಳ ಸದ್ಬಳಕೆ ಮಾಡಿಕೊಂಡು ಮುಂದುವರೆಯಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ವಿಶ್ವಕರ್ಮ ಜನಾಂಗದಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಉತ್ತಮ ಸಂಘಟನೆಯ ಮೂಲಕ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಶ್ರಮಿಸುತ್ತಾ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ, ಜಯಂತಿ ಆಚರಣೆ ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಯಾವುದೇ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿಲ್ಲ, ಆಯಕಟ್ಟಿನ ಅಧಿಕಾರಿಯು ಉದ್ಘಾಟನೆ ಮಾಡಿ ತೆರಳಿದ್ದು ಸರಿಯಲ್ಲ, ಜನಾಂಗದ ಸಂಘಟನೆ ಆಧಾರದ ಮೇಲೆ ಅಧಿಕಾರಿಗಳ ವರ್ತನೆ ಸರಿಯಲ್ಲ, ವಿಶ್ವಕರ್ಮ ಜನಾಂಗವೂ ಅಲ್ಪಸಂಖ್ಯಾತರಲ್ಲೂ ಅಲ್ಪಸಂಖ್ಯಾತರಾಗಿದ್ದು ಜನಾಂಗದವರು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಜನಾಂಗ ಎದುರಿಸುತ್ತಿಸುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜೊತೆಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ತಹಶೀಲ್ದಾರ್ ವಿಶ್ವನಾಥ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಕುಮಾರಾಚಾರ್, ಮೂರ್ತಾಚಾರ್, ವರದರಾಜು, ಕೃಷ್ಣರಾಜು, ನಾರಾಯಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!