ಕುಣಿಗಲ್: ಮನೆ ಮುಂದೆ ಬಿದ್ದಿದ್ದ ವಿದ್ಯುತ್ತಂತಿ ತುಳಿದು ಅಸ್ವಸ್ಥಗೊಂಡ ಬಾಲಕ ಚಿಕಿತ್ಸೆಗೆ ಆಸ್ಪತ್ರೆಗೆ ತರುವಾಗ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತನ್ನು ಗಗನ್ (7) ವರ್ಷ ಎಂದು ಗುರುತಿಸಲಾಗಿದೆ, ಈತ ಕುಂದೂರು ಗ್ರಾಮದವನಾಗಿದ್ದು ಬೆಳಗ್ಗೆ ಮನೆ ಮುಂದೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಅಸ್ವಸ್ತಗೊಂಡ ಎನ್ನಲಾಗಿದೆ, ಕೂಡಲೆ ಆತನನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆ ಮುಂದೆ ಪೋಷಕರ, ಗ್ರಾಮಸ್ಥರ ಗೋಳಾಟ ಮನ ಕಲುಕುವಂತಿತ್ತು, ಒಂದು ವಾರದ ಹಿಂದೆಯೂ ಪಟ್ಟಣದ ಉಪ್ಪಾರರ ಬೀದಿಯಲ್ಲಿ ಎಂಟು ವರ್ಷದ ಬಾಲಕ ವಿದ್ಯುತ್ ಆಘಾತಕ್ಕೆ ಸಿಕ್ಕು ಮೃತಪಟ್ಟಿದ್ದು ಈ ಘಟನೆ ಮಾಸುವ ಮುನ್ನವೆ ಪುನಹ ಇನ್ನೊಂದು ಘಟನೆ ನಡೆದಿದೆ.
ಕರೆಂಟ್ ಶಾಕ್ಗೆ ಬಾಲಕ ಬಲಿ
Get real time updates directly on you device, subscribe now.
Prev Post
Comments are closed.