ಬಂದ್ಗೆ ಬೆಂಬಲಿಸಲು ಕನ್ನಡಪರ ಸಂಘಟನೆ ಒಕ್ಕೂಟ ಮನವಿ

95

Get real time updates directly on you device, subscribe now.


ಕುಣಿಗಲ್: ಕಾವೇರಿ ನೀರು ನ್ಯಾಯಾಧೀಕರಣದ ತೀರ್ಪು ಖಂಡಿಸಿ ಸೆ.29ರ ಶುಕ್ರವಾರ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಅಂಗವಾಗಿ ಕುಣಿಗಲ್ ಬಂದ್ ನಡೆಸಲಾಗುತ್ತಿದ್ದು ಸಾರ್ವಜನಿಕರು, ವರ್ತಕರು, ಹೋಟೆಲ್ ಮಾಲೀಕರು ಸಹಕಾರ ನೀಡಬೇಕೆಂದು ಕನ್ನಡಪರ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು.

ಬಂದ್ ಪೂರ್ವಭಾವಿಯಾಗಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖ, ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ರಂಗಸ್ವಾಮಿ, ಕಾವೇರಿ ಜಲಾನಯನ ಪ್ರದೇಶಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಕಾವೇರಿ ನದಿ ಪಾತ್ರ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಬೆಳೆ ಸೇರಿದಂತೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಇಲ್ಲದೆ ಇರುವಾಗ ಪ್ರಾಧಿಕಾರವೂ ಕರ್ನಾಟಕ ರಾಜ್ಯದ ಮನವಿ ಆಲಿಸದೆ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆ ಇತರೆ ಅಂಶಗಳ ಅವಲೋಕಿಸದೆ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ, ಕಾವೇರಿ ಜಲವಿವಾದ ಆರಂಭಗೊಂಡಾಗಿ ನಿಂದಲೂ ಬರ ಸಂದಭರ್ರ್ದಲ್ಲಿ ಅನುಸರಿಸಬೇಕಾದ ಸಂಕಷ್ಟ ಸ್ಥಿತಿಯ ಸೂತ್ರಗಳ ಬಗ್ಗೆ ಸಮರ್ಪಕ ನಿರ್ಣಯ ಇಲ್ಲದೆ ಇರುವಾಗ ಇಂತಹ ಅದೇಶಗಳು ಎರಡೂ ರಾಜ್ಯದ ನಡುವೆ ಕಂದಕ ಸೃಷ್ಟಿಯಾಗುವಂತೆ ಮಾಡುವಂತಾಗಿದೆ, ರಾಜ್ಯದ ಜಲಸಂಪನ್ಮೂಲ ರಕ್ಷಣೆ ನಿಟ್ಟಿನಲ್ಲಿ ಶುಕ್ರವಾರ ಬಂದ್ ಅತ್ಯಗತ್ಯವಾಗಿದ್ದು ಎಲ್ಲರೂ ಸಹಕಾರ ನೀಡಬೇಕು. ಬೀದಿ ಬದಿ ವ್ಯಾಪಾರಿ, ಹೋಟೆಲ್ ಮಾಲೀಕರು, ಸಾರ್ವಜನಿಕರು, ಶಾಲಾ ಕಾಲೇಜು ಮಂಡಳಿಯವರು ನೀರಿನ ವಿಷಯಕ್ಕೆ ಬೆಂಬಲಿಸಿ ಬಂದ್ಗೆ ಸಹಕಾರ ನೀಡಬೇಕೆಂದರು, ಶುಕ್ರವಾರ ಬಂದ್ ಆಚರಿಸಿ ಹನ್ನೊಂದು ಗಂಟೆಗೆ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಸಂಘಟನೆಗೊಂಡು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ವರ್ತಕರ ಸಂಘದ ಪೈಕಿ ಮುಖಂಡ ಸಂತೋಶ್ ಕುಮಾರ್ ವರ್ತಕರು ಬಂದ್ಗೆ ಬೆಂಬಲಿಸಲಿದ್ದಾರೆ ಎಂದರು. ಡಾ.ಅಂಬರೀಶ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೋಟೆ ನಾಗಣ್ಣ, ತಾಲೂಕು ಅಧ್ಯಕ್ಷೆ ವೆಂಕಟೇಶ್, ಕರವೇ ಅಧ್ಯಕ್ಷ ಮಂಜುನಾಥ್, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ, ಕಸಾಪ ಅಧ್ಯಕ್ಷ ಡಾ.ಕಪಿನಿಪಾಳ್ಯ ರಮೇಶ್, ಮಾಜಿ ಅಧ್ಯಕ್ಷ ದಿನೇಶ್ಕುಮಾರ್, ಬಜರಂಗದಳ ಸಂಚಾಲಕ ಗಿರೀಶ್, ಕಾರ್ತೀಕ್, ಶಿವರಾಜಕುಮಾರ್ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಟೈಲರ್ ಸಂಘದ ಅಧ್ಯಕ್ಷ ಶಿವಕುಮಾರ್, ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಸಂಘದ ಅಧ್ಯಕ್ಷ ನಿಖಿಲ್ಗೌಡ, ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!