ಸಂಭ್ರಮದಿಂದ ಈದ್ ಮಿಲಾದ್ ಹಬ್ಬ ಆಚರಣೆ

109

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆಯಲ್ಲಿ ಹಿಂದು, ಮುಸ್ಲಿಂರೂ ಹತ್ತಾರು ವರ್ಷಗಳಿಂದ ಸಹೋದರರಂತೆ ಬದುಕುತ್ತಿದ್ದು, ಇದು ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.

ನಗರದ ಬಾರ್ಲೈನ್ ರಸ್ತೆಯ ಮಕ್ಕಾ ಮಸೀದಿಯಲ್ಲಿ ಮುಸ್ಲಿಂ ಭಾಂದವರು ಹಮ್ಮಿಕೊಂಡಿದ್ದ ಈದ್ ಮಿಲಾದ್ ಪ್ರಾರ್ಥನೆ ಯಲ್ಲಿ ಪಾಲ್ಗೊಂಡು ಮಾತನಾಡಿ, ಯಾವುದೇ ಹಬ್ಬ, ಹರಿದಿನ, ಉರುಸ್ಗಳನ್ನು ಇಬ್ಬರು ಅತ್ಯಂತ ತಾಳ್ಮೆಯಿಂದ ಆಚರಿಸುತ್ತಿರುವುದನ್ನು ನಾವು ಜಿಲ್ಲೆಯಲ್ಲಿ ಕಾಣಬಹುದಾಗಿದೆ ಎಂದರು.

ನಮ್ಮ ತಂದೆ ಕೆ.ಎನ್.ರಾಜಣ್ಣ ಅವರೊಂದಿಗೆ ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ, ನಾವು ರಾಜಕೀಯವಾಗಿ ಮಧುಗಿರಿ ಕ್ಷೇತ್ರದಲ್ಲಿ ಇದ್ದರೂ ತುಮಕೂರು ನಗರದ ಮುಸ್ಲಿಂ ಭಾಂದವರು ಪ್ರೀತಿ ಮತ್ತು ಸಹೋದರ ಭಾವನೆಯಿಂದ ಕಾಣುತ್ತಾರೆ, ಹಾಗಾಗಿ ಪ್ರತಿವರ್ಷ ನಮ್ಮ ತಂದೆ ತಪ್ಪದೆ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಾಡಿಕೆ, ಈ ಬಾರಿ ಅನ್ಯ ಕಾರಣಗಳಿಂದ ಇಲ್ಲಿಗೆ ಬರಲಾಗಲಿಲ್ಲ, ಹಾಗಾಗಿ ಅವರ ಪರವಾಗಿ ನಾನು ನಿಮ್ಮೊಂದಿಗೆ ಹಬ್ಬದ ಸಂತೋಷ ಹಂಚಿಕೊಳ್ಳಲು ಬಂದಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ.ಮಾತನಾಡಿ, ಮಕ್ಕಾ ಮಸೀದಿ ಪೊಲೀಸ್ ಇಲಾಖೆ ಕಟ್ಟಿದ ಮಸೀದಿ ಎಂದು ತಿಳಿದು ಸಂತೋಷವಾಯಿತು, ಇದರ ನಿರ್ವಹಣೆಯನ್ನು ಇಂದು ಮುಸ್ಲಿಂ ಭಾಂದವರು ಮಾಡುತ್ತಿರುವುದು ಸಂತೋಷದ ವಿಚಾರ, ಈ ಬಾರಿ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡು ಒಟ್ಟಿಗೆ ಬಂದಿರುವುದು ನಮ್ಮಲ್ಲಿರುವ ಸಹೋದರ ಭಾವನೆ ವ್ಯಕ್ತಪಡಿಸಲು ಸಿಕ್ಕ ಅವಕಾಶ ಎಂದು ಭಾವಿಸಿ ಪ್ರೀತಿ ಮತ್ತು ಸೌಹಾರ್ಧತೆಯಿಂದ ಹಬ್ಬ ಆಚರಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ, ಮಹಮದ್ ಪೈಗಂಬರರ ಹುಟ್ಟು ಹಬ್ಬವಾದ ಇಂದು ಎಲ್ಲಾ ಸಮುದಾಯದವರು ಸೇರಿ ಹಬ್ಬ ಆಚರಿಸುತ್ತಿರುವುದು ಸಂತೋಷ ಮೂಡಿಸಿದೆ, ಈ ಭಾಂದವ್ಯ ಹೀಗೆಯೇ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಹಿಂದು, ಮುಸ್ಲಿಂರು ಅನಾದಿ ಕಾಲದಿಂದ ಪರಸ್ವರ ಸಹೋದರರಂತೆ ಶಾಂತಿ, ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ, ಎರಡು ಸಮುದಾಯಗಳ ಹಬ್ಬಗಳಲ್ಲಿ ಪರಸ್ವರ ಭಾಗಿಯಾಗಿ ಸೌಹಾರ್ದತೆ ಸಾರುತಿದ್ದೇವೆ, ಇದು ಹೀಗೆಯ ಮುಂದುವರೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಈ ವೇಳೆ ಮುಖಂಡರಾದ ವೇಣುಗೋಪಾಲ್, ದೇವೇಗೌಡ, ಸಿಮೆಂಟ್ ಮಂಜಣ್ಣ, ಶರೀಫ್, ಮೆಹಬೂಬ್ಪಾಷ, ಪ್ರಕಾಶ್, ಆದಿಲ್, ಅಫ್ತಾಬ್ ಅಹಮದ್, ಅನ್ವರ್ ಪಾಷ, ಪ್ರಕಾಶ್, ಮೆಹಬೂಬ್, ಮಹಮದ್ ಇಸ್ಮಾಯಿಲ್, ಡಾ.ನಯಾಜ್ ಅಹಮದ್, ತಾಜುದ್ದೀನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!