ಮದ್ಯದಂಗಡಿ ಬೇಡ, ಅಸ್ವತ್ರೆ ಶಾಲೆ ಉದ್ಯೋಗ ನೀಡಿ

91

Get real time updates directly on you device, subscribe now.


ತುಮಕೂರು: ರಾಜ್ಯ ಸರ್ಕಾರ ಹೊಸದಾಗಿ 1000 ಮದ್ಯದಂಗಡಿ ಪ್ರಾರಂಭಿಸಲು ನಡೆಸಿರುವ ಪ್ರಯತ್ನ ಖಂಡಿಸಿ ಸರ್ವೋದಯ ಮಹಾ ಮಂಡಲ, ಸಿಐಟಿಯು, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮತ್ತು ಎಂಎಸ್ಎಸ್ ಮತ್ತಿತರೆ ಪ್ರಗತಿ ಪರ ಸಂಘಟನೆಗಳು ತುಮಕೂರಿನ ಬಿಎಸ್ಎನ್ ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದವು.

ಈ ವೇಳೆ ಹಿರಿಯ ಹೋರಾಟಗಾರ್ತಿ ಬಾ.ಹ.ರಮಾಕುಮಾರಿ ಮಾತನಾಡಿ, ಸರ್ಕಾರ ಮಹಿಳೆಯರ ಸಬಲಿಕರಣ ಮಾಡುತ್ತಲೆ ಮತ್ತೊಂದು ಕಡೆ ಇಂತಹ ತೀರ್ಮಾನ ಮಾಡುತ್ತಿರುವುದು ಸರಿಯಲ್ಲ, ಮದ್ಯಪಾನ ವಿರೋಧಿಸಿದ್ದ ಮಹಾತ್ಮ ಗಾಂಧಿ ಅವರ ನಡೆ ಅನುಸರಿಸಬೇಕಾದ ಸರ್ಕಾರ ಅದಕ್ಕೆ ತಿಲಾಂಜಲಿ ಇಟ್ಟು ಗಾಂಧೀಜಿ ಅವರ ಫೋಟೋಗೆ ಹಾರ ಹಾಕುವ, ಜಯಂತಿ ಆಚರಿಸುವ ಯಾವ ನೈತಿಕತೆಯು ಸರ್ಕಾರಗಳಿಗೆ ಇಲ್ಲ ಎಂದು ಕಿಡಿಕಾರಿದರು.

ಜಿಲ್ಲಾ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಕುಡಿತದಿಂದ ಯುವ ಜನತೆ ತಮ್ಮ ಬದುಕು ಹಾಳು ಮಾಡಿಕೊಳ್ಳುತ್ತಿವೆ, ಇದರಿಂದ ಸಮಾಜದಲ್ಲಿ ಅಪರಾಧಿ ಕೃತ್ಯ ಹೆಚ್ಚಳವಾಗುತ್ತವೆ, ಹಾಗಾಗಿ ಸರ್ಕಾರ ಈ ತೀರ್ಮಾನ ಹಿಂಪಡೆದು ನೈತಿಕತೆ ಎತ್ತಿಹಿಡಿಯಬೇಕು ಎಂದರು.
ಜನ ಸಂಖ್ಯೆಗೆ ಅನುಗುಣವಾಗಿ ಶಾಲಾ- ಕಾಲೇಜು, ಆಸ್ಪತ್ರೆ, ಉದ್ಯೋಗ ವ್ಯವಸ್ಥೆ ಮಾಡಬೇಕಾದ ಸರ್ಕಾರ ಈ ರೀತಿ ಮದ್ಯದಂಗಡಿ ತೆಗೆಯಲು ಹೊರಟಿರುವುದು ಅನಾಪೇಕ್ಷಿತ ಮತ್ತು ಅನೈತಿಕ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಕಲ್ಪನಾ, ರೈತ ಸಂಘದ ಚಂದ್ರಕಲಾ, ಮಹಿಳಾ ನಾಯಕಿ ಕಲ್ಯಾಣಿ, ಚಿಂತಕ ಸಿ.ಯತಿರಾಜು, ಗಾಂಧಿವಾದಿ ಬಾಪೂಜಿ ಸಂಸ್ಥೆಯ ಬಸವಯ್ಯ, ಪುಟ್ಟಕಾಮಣ್ಣ, ಪ್ರಾಂತ ರೈತ ಸಂಘದ ಬಿ.ಉಮೇಶ್, ಸಿಐಟಿಯುನ ಎನ್.ಕೆ.ಸುಬ್ರಮಣ್ಯ, ಸಿಐಟಯುನ ಸೈಯದ್ ಮುಜೀಬ್, ಎ.ಲೊಕೇಶ್, ವರದಕ್ಷಿಣೆ ವಿರೋಧಿ ವೇದಿಕೆಯ ಪಾರ್ವತಮ್ಮ, ರಾಣಿ ಚಂದ್ರಶೇಖರ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!