ತುಮಕೂರು: ಮಾಸ್ಕ್ ಧರಿಸುವುದು, ಗುಂಪುಗಳಲ್ಲಿ ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಆರೋಗ್ಯಕ್ಕಾಗಿ ಮತ್ತು ನಮಗಾಗಿಯೇ ವಿನಃ ಬೇರೆಯವರ ಒತ್ತಾಯಕ್ಕಾಗಿ ಆಗಬಾರದು ಎಂದು ಪ್ರಾಧ್ಯಾಪಕಿ ಅಹಲ್ಯ ಮಕ್ಕಳಿಗೆ ಕರೆ ನೀಡಿದರು.
ನಗರದ ಉಪ್ಪಾರಹಳ್ಳಿಯ ವಿಜ್ಞಾನ ಬಿಂದು ಸಂಸ್ಥೆಯಲ್ಲಿ ನವದೆಹಲಿಯ ವಿಗ್ಯಾನ್ ಪ್ರಸಾರ್ ವಿಪ್ನೆಟ್ ಕ್ಲಬ್, ವಿಜ್ಞಾನ ಬಿಂದು ಚಿಲ್ಡ್ರನ್ಸ್ ಕ್ಲಬ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕಗಳ ಸಹಯೋಗದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಎಲ್ಲರಿಗೂ ನ್ಯಾಯ ನೀಡುವ, ಆರೋಗ್ಯಕರ ಜಗತ್ತನ್ನು ನಿರ್ಮಿಸೋಣ ಎಂಬ ವಿಷಯ ಕುರಿತು ಮಾತನಾಡಿದರು. ಆರೋಗ್ಯ ಪ್ರತಿಯೊಬ್ಬರ ಹಕ್ಕು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೆ ಇರುವುದರಿಂದ ಕೊರೊನಾ ಸಂದರ್ಭದಲ್ಲಿ ಅತ್ಯಂತ ಜಾಗರೂಕತೆಯಿಂದ ಇರುವುದು ನಮ್ಮೆಲ್ಲರ ಸಾಮಾಜಿಕ ಕರ್ತವ್ಯವಾಗಿದೆ ಎಂದರು.
ರವಿಕುಮಾರ್ ಮಾತನಾಡಿ, 1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ನೆನಪಿಗಾಗಿ ವಿಶ್ವದೆಲ್ಲೆಡೆ ಆರೋಗ್ಯ ಜಾಗೃತಿ ಮೂಡಿಸಲು ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ, ಯುವ ಪೀಳಿಗೆ ಪ್ರಾಥಮಿಕ ಆರೋಗ್ಯದ ಅರಿವಿನೊಂದಿಗೆ ಪ್ರಗತಿಯಲ್ಲಿ ವ್ಯವಹರಿಸಬೇಕು. ವೈಯಕ್ತಿಕ ಸ್ವಚ್ಛತೆ ನೈರ್ಮಲ್ಯ, ನಿಯಮಿತ ಆಹಾರ, ವ್ಯಾಯಾಮ, ವಿಶ್ರಾಂತಿಯೊಂದಿಗೆ ದೈಹಿಕ, ಮಾನಸಿಕ ಆರೋಗ್ಯ ಹೊಂದಬೇಕು ಎಂದು ವಿವರಿಸಿದರು.
ವಿಜ್ಞಾನ ಬಿಂದು ಚಿಲ್ಡ್ರನ್ಸ್ ಕ್ಲಬ್ ಅಧ್ಯಕ್ಷೆ ಚಿನ್ಮಯಿ ಸ್ವಾಮಿ, ಶಿರೀಶ್, ಚರಣ್ ಗೌಡ, ಅಚ್ಯುತ, ವಿವೇಕ್, ಲಿಖಿತ್ ಆಚಾರ್ಯ ನಿತ್ಯಶ್ರೀ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳು, ಪೋಷಕರು ಕೋವಿಡ್ ಮಾರ್ಗಸೂಚಿ ಪ್ರಕಾರ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.
ಸಾರ್ವಜನಿಕರು ಆರೋಗ್ಯ ಕಾಳಜಿ ಹೊಂದಲಿ
Get real time updates directly on you device, subscribe now.
Prev Post
Next Post
Comments are closed.