ವೆಂಕಟಾಚಲಯ್ಯಗೆ ರಮಣ ಮಹರ್ಷಿ ಪ್ರಶಸ್ತಿ ಪ್ರದಾನ

162

Get real time updates directly on you device, subscribe now.


ತುಮಕೂರು: ಹಿಂಸೆ ತಡೆದು ಸತ್ಯ, ಶಾಂತಿ ಸ್ಥಾಪನೆ ಮಾಡುವ ಬದಲು, ಧರ್ಮದ ಹೆಸರು ಬಳಸಿಕೊಂಡು ಹಿಂಸೆ ನಡೆಯುತ್ತಿರುವುದು ಅತ್ಯಂತ ದುರಂತದ ಸಂಗತಿ ಎಂದು ಶಾಸಕ ಬಸವರಾಜ ಬೊಮ್ಮಾಯಿ ವಿಷಾದಿಸಿದರು.

ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆ ಮತ್ತು ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರಿಗೆ ಶ್ರೀದೇವಿ ರಮಣ ಮಹರ್ಷಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಚರಿತ್ರೆ ಜೊತೆಗೆ ಚಾರಿತ್ರ್ಯ ತುಂಬಾ ಮುಖ್ಯ, ಪ್ರಸ್ತುತ ಹಿಂಸೆಗಳ ಮುಖಾಂತರ ಧರ್ಮ ಪ್ರತಿಪಾದಿಸುವುದನ್ನು ನೋಡುತ್ತಿದ್ದೇವೆ, ಹಲವು ಧರ್ಮಗಳಲ್ಲಿ ಮಾನವೀಯತೆಗೆ ಗೌರವವಿಲ್ಲ, ಒಂದೇ ಧರ್ಮ ಇರುವ ರಾಷ್ಟ್ರಗಳಲ್ಲಿ ಹಿಂಸೆ ಹೆಚ್ಚಾಗುತ್ತಿದೆ, ಹಲವು ಧರ್ಮಗಳ ನಾಡಾಗಿರುವ ಭಾರತದಲ್ಲಿ ಜನರು ಸಹಿಷ್ಣುತೆಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ಜೀವನದಲ್ಲಿ ಸಕಾರಾತ್ಮಕ ಆಲೋಚನೆ ಮೈಗೂಡಿಸಿಕೊಳ್ಳಬೇಕು, ಇಂದಿನ ಯುವಕರಿಗೆ ಉತ್ತಮ ಭವಿಷ್ಯ ಇದೆ, ರಾಜಕೀಯ, ಆರೋಗ್ಯ ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಮಾನವೀಯತೆ, ಸರಳತೆ, ಶಿಸ್ತು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ರಾಜಕೀಯ ಅಧಿಕಾರದಿಂದ ಸಾಮಾಜಿಕ ಬದಲಾವಣೆ ಸಾಧ್ಯ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ರಾಜಕೀಯ ಸ್ಥಾನಮಾನ ಪಡೆದು ಸಮಾಜದಲ್ಲಿ ಮುನ್ನೆಲೆಗೆ ಬರಬೇಕು, ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು, ತಪ್ಪುಗಳನ್ನು ತಿದ್ದಿಕೊಂಡು ಸರಿಯಾದ ಹಾದಿಯಲ್ಲಿ ಮುಂದೆ ಸಾಗಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಇಂದಿನ ಯುವಕರು ಭಾರತದ ಭವಿಷ್ಯ ರೂಪಿಸಲಿದ್ದಾರೆ, ಯುವ ಸಮೂಹ ತಮ್ಮ ಪ್ರತಿಭೆ ಅನಾವರಣಕ್ಕೆ ಸಿಕ್ಕ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು, ಪ್ರತಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸಬೇಕು, ವೆಂಕಟಾಚಲಯ್ಯ ಅವರಂತಹ ಚಿಂತಕರು ಮತ್ತೊಬ್ಬರು ಇಲ್ಲ, ಸಮಾಜದ ಅಭಿವೃದ್ಧಿಗೆ ಅವರ ಶ್ರಮ ಅಪಾರ ಎಂದರು.

ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ರಾಜಕೀಯ ವ್ಯವಸ್ಥೆ ಸುಧಾರಣೆಯಾಗಬೇಕು, ಪ್ರಸ್ತುತ ಇರುವ ಪರಿಸ್ಥಿತಿ ಬದಲಾಗಿ ಜನಸಾಮಾನ್ಯರು ರಾಜಕೀಯದಲ್ಲಿ ಭಾಗವಹಿಸಬೇಕು, ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ವೈದ್ಯಕೀಯ ನಿರ್ದೇಶಕ ಡಾ.ಎಂ.ರಮಣ್, ಡಾ.ಅಂಬಿಕಾ ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!