ಮುಖ್ಯಾಧಿಕಾರಿ ನಡೆಗೆ ಹಿಂದು ಕಾರ್ಯಕರ್ತರ ಕಿಡಿ

134

Get real time updates directly on you device, subscribe now.


ಕುಣಿಗಲ್: ಹಿಂದೂ ಮಹಾ ಗಣಪತಿ ವಿಸರ್ಜನೆ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಪಟ್ಟಣದಲ್ಲಿ ಮಾಡಲಾಗಿದ್ದ ಅಲಂಕಾರ ತೆಗೆಯುವಂತೆ ಪುರಸಭೆ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ನಡೆ ಖಂಡಿಸಿದರು.

ಪಟ್ಟಣದ ಪುರಸಭೆ ಬಸ್ನಿಲ್ದಾಣದಲ್ಲಿ ಬಜರಂಗದಳ- ವಿಶ್ವಹಿಂದೂ ಪರಿಷತ್ ವತಿಯಿಂದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪಿಸಲಾಗಿದ್ದು ಅ.8 ರಂದು ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಮೆರವಣಿಗೆ ಸಾಗುವ ಮಾರ್ಗವನ್ನು ಕೇಸರಿ ಬಟ್ಟೆಯಿಂದ ಅಲಂಕಾರ ಮಾಡಲಾಗುತ್ತಿದೆ, ಮಂಗಳವಾರ ಪುರಸಭೆ ಅಧಿಕಾರಿಗಳು, ಕಾರ್ಯಕರ್ತರು ಮಾಡಲಾಗಿರುವ ಅಲಂಕಾರ ತೆರವುಗೊಳಿಸುವಂತೆ ಮೌಖಿಕ ಸೂಚನೆ ನೀಡಿದ್ದರು. ಆಕ್ರೋಶಗೊಂಡ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಕೊಠಡಿಗೆ ಮುತ್ತಿಗೆ ಹಾಕಿ ಮುಖ್ಯಾಧಿಕಾರಿಯೊಂದಿಗೆ ವಾಗ್ವಾದಕ್ಕೆ ಇಳಿದರಲ್ಲದೆ, ಬೇರಯವರು ಮಾಡಿದರೆ ಏನು ಹೇಳೊಲ್ಲ, ನಮ್ಮನ್ನು ಗುರಿ ಮಾಡಿ ತೆರವುಗೊಳಿಸುವಂತೆ ಸೂಚನೆ ನೀಡುವ ಮೂಲಕ ಅಧಿಕಾರ ತಾರತಮ್ಯ ಮಾಡುತ್ತಿದ್ದಾರೆಂದು ವಾಗ್ವಾದ ನಡೆಸಿದರು.

ಮುಖ್ಯಾಧಿಕಾರಿ ಶಿವಪ್ರಸಾದ್ ಕಾರ್ಯಕರ್ತರಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗದ ಕಾರಣ ಪೊಲೀಸ್ ಅಧಿಕಾರಿಗಳ ಸೂಚನೆ ಎಂದು ಪೊಲೀಸ್ ಇಲಾಖೆ ಬರೆದಿದ್ದ ಆಂತರಿಕ ಪತ್ರ ತೋರಿಸಿದರು, ಪತ್ರದಲ್ಲಿ ಬ್ಯಾನರ್, ಫ್ಲೆಕ್ಸ್ ಎಂದು ಇದೆ, ಅಲಂಕಾರ ತೆರವುಗೊಳಿಸಲು ಸೂಚನೆ ಇಲ್ಲ ಎಂದು ಪಟ್ಟು ಹಿಡಿದ ಕಾರ್ಯಕರ್ತರು ಮುಖ್ಯಾಧಿಕಾರಿ ನಡೆ ಖಂಡಿಸಿ ಧಿಕ್ಕಾರ ಕೂಗಿ ಪೊಲೀಸ್ ಠಾಣೆವರೆಗೂ ಘೋಷಣೆ ಕೂಗುತ್ತಾ ಆಗಮಿಸಿದರು, ನಂತರ ಸಿಪಿಐ ನವೀನ್ ಗೌಡರೊಂದಿಗೆ ಚರ್ಚೆ ನಡೆಸಿದರು.

ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಅಗ್ರಹಿಸಿದರೂ ಯಾವುದೆ ಅಧಿಕಾರಿ ಆಗಮಿಸದ ಕಾರಣ ಶಾಂತಿಯುತವಾಗಿ ಕಾರ್ಯಕ್ರಮ ನಡೆಸುವ ಬಗ್ಗೆ ಮನವರಿಕೆ ಮಾಡಿಕೊಟ್ಟು ಪ್ರತಿಭಟನೆ ಮುಕ್ತಾಯಗೊಳಿಸಿದರು. ಪ್ರಮುಖರಾದ ಗಿರೀಶ್, ಹರೀಶ್, ಕಾರ್ತೀಕ್, ರವೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!