ತುರುವೇಕೆರೆ: ಕ್ಷೇತ್ರದ ಜನತೆ ಜನ ಸೇವಕನ ಸೋಗಿನಲ್ಲಿರುವ ರೌಡಿಸಂ ಹಿನ್ನಲೆಯ್ಳು ಬೆಮೆಲ್ ಕಾಂತರಾಜ್ ಬಗ್ಗೆ ಎಚ್ಚರ ವಹಿಸಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜ ಸೇವಕ ಕೃಷ್ಣಪ್ಪ ಎಂಬುವರಿಗೆ ಧಮ್ಕಿ ಹಾಕಿ ಮೂರು ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದಾರೆ, ತುರುವೇಕೆರೆ ತಾಲೂಕಿನಲ್ಲೂ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ, ತುರುವೇಕೆರೆಗೆ ಜನಸೇವೆ ಮಾಡಲು ಬಂದವರಲ್ಲ, ದಂಧೆ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದ ಅವರು ರೋಲ್ಕಾಲ್ ಹಾಗೂ ಚೀಟಿಂಗ್ ದಂಧೆ ನಡೆಸುತ್ತಿರುವವರ ಬಗ್ಗೆ ಕ್ಷೇತ್ರದ ಜನತೆ ಎಚ್ಚರದಿಂದ ಇರುವಂತೆ ಮನವಿ ಮಾಡಿದ ಅವರು ಬೆಮೆಲ್ ಕಾಂತರಾಜ್ ಕೆಲವೇ ದಿನಗಳಲ್ಲಿ ಅವರಿಗೆ ತಕ್ಕ ಪ್ರಾಯಶ್ಚಿತ್ತವಾಗಲಿದೆ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸರಕಾರದಿಂದ 1500 ಮನೆ ಮಂಜೂರಾತಿ ತಂದಿದ್ದೇನೆ, ಈ ಹಿಂದೆ ಸುಮಾರು 3 ಸಾವಿರ ಮನೆಗಳು ಮಾಜಿ ಶಾಸಕರಿಂದ ಕುಣಿಗಲ್ ಕ್ಷೇತ್ರಕ್ಕೆ ಹೋಗಿದ್ದವು, ಮತ್ತೆ ಆ ಮನೆಗಳ ಪೈಕಿ 1500 ಮನೆಗಳನ್ನು ವಾಪಸ್ ತಂದಿದ್ದೇನೆ, ಪಂಚಾಯಿತಿವಾರು ಅರ್ಹರಿಗೆ ಮನೆಗಳನ್ನು ನೀಡುವುದಾಗಿ ತಿಳಿಸಿದ ಅವರು ನವೆಂಬರ್ನಲ್ಲಿ ಮತ್ತೆ 2 ಸಾವಿರ ಮನೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಸರಕಾರ ಆಡಳಿತಕ್ಕೆ ಬಂದು 5 ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ, ಸಾರ್ವಜನಿಕರ ಹಣವನ್ನು ಗ್ಯಾರೆಂಟಿ ಯೋಜನೆಯ ತೆವಲಿಗೆ ಬಳಸಿಕೊಳ್ಳುತ್ತಿದೆ, ವಸತಿ ಶಾಲೆ ನಿರ್ಮಾಣಕ್ಕಾಗಲಿ, ರಸ್ತೆ ನಿರ್ಮಾಣಕ್ಕಾಗಲಿ ಹಣ ಬಿಡುಗಡೆ ಮಾಡಿಲ್ಲ, ಕ್ಷೇತ್ರ ವ್ಯಾಪ್ತಿಯ ವೈ.ಟಿ.ರಸ್ತೆ ಹದಗೆಟ್ಟಿದ್ದರೂ ಇಲ್ಲಿನ ಭ್ರಷ್ಟ ಎಇಇ ಪ್ರಭಾಕರ್ ಕಾಮಗಾರಿ ಆರಂಭಿಸುತ್ತಿಲ್ಲ, ಶೀಘ್ರ ಭ್ರಷ್ಟ ಎಇಇ ಪ್ರಭಾಕರ್ ಅಮಾನತು ಮಾಡುವಂತೆ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಪ್ರತಿ ಬಾರಿಯೂ ಹಾಸನದಲ್ಲಿ ದೇವೇಗೌಡರ ಕುಟುಂಬ ಅಧಿಕಾರದಲ್ಲಿದೆ, ತುಮಕೂರಿಗೆ ಹೇಮೆ ನೀರು ಹರಿಸುತ್ತಿಲ್ಲ ಎಂದು ಕಾರಣ ಹೇಳಲಾಗುತ್ತಿತ್ತು, ಇದೀಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ತುಮಕೂರಿಗೆ ಹೇಮಾವತಿ ನೀರು ಹರಿಯುತ್ತಿಲ್ಲ ಎಂಬುದಕ್ಕೆ ಜನತೆ ಸರಕಾರ ಉತ್ತರ ನೀಡಬೇಕಿದೆ ಎಂದರು.
ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ವಕ್ತಾರ ಯೋಗೀಶ್, ಜಿಪಂ ಮಾಜಿ ಸದಸ್ಯೆ ಲೀಲಾವತಿ, ಹೆಡಗೀಹಳ್ಳಿ ವಿಶ್ವನಾಥ್ ಇದ್ದರು.
Comments are closed.