ಮಧುಗಿರಿ: ವಜ್ರದಹಳ್ಳಿ ಗ್ರಾಮದ ಮಹಿಳೆ ಮೇಲೆ ಚಿರತೆ ದಾಳಿ ಮಾಡಿದ್ದು, ಪ್ರಾಣಾಪಾಯಯದಿಂದ ಪಾರಾದ ಮಹಿಳೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ, ತಾಲೂಕಿನ ಕಸಬಾ ಹೋಬಳಿ ವಜ್ರದಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಜರುಗಿದೆ.
ವಜ್ರದಹಳ್ಳಿ ಗ್ರಾಮದ ಸುಮಾರು 35 ವರ್ಷದ ಸವಿತಾ ಎಂಬ ಮಹಿಳೆ ಬೆಳಗ್ಗೆ ಬಹಿರ್ದೆಸೆಗೆಂದು ಹೊಲದ ಕಡೆ ತೆರಳಿದಾಗ ಪೊದೆಯಲ್ಲಿದ್ದ ಚಿರತೆ ಮಹಿಳೆಯ ಮೇಲೆ ಹಠಾತ್ತನೆ ಎರಗಿ ಬಲಗೈಗೆ ಕಚ್ಚಿದ್ದು ತಲೆಯ ಭಾಗ ಹಾಗೂ ಬಲಗಣ್ಣಿನ ಮೇಲೆ ಚಿರತೆ ಪರಚಿದೆ, ಮಹಿಳೆಯ ಚೀರಾಟ ಕೇಳಿದ ಗ್ರಾಮಸ್ಥರು ತೆರಳಿ ಕೂಗಾಡಿದಾಗ ಚಿರತೆ ಹೆದರಿ ಓಡಿಹೋಗಿದ್ದು, ಗಂಭೀರ ಗಾಯಗೊಂಡ ಮಹಿಳೆಯನ್ನು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಸಿ.ರವಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸುವ ಜೊತೆಗೆ ಘಟನೆಯ ವಿವರ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments are closed.