ಸಿದ್ದಗಂಗಾ ಎಂಬಿಬಿಎಸ್ ತರಗತಿಗಳಿಗೆ ಚಾಲನೆ ನಾಳೆ

106

Get real time updates directly on you device, subscribe now.


ತುಮಕೂರು: ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯದ 2023- 24 ನೇ ಸಾಲಿನ ಮೊದಲ ಎಂಬಿಬಿಎಸ್ ತರಗತಿಗಳಿಗೆ ಸೆ.6 ರಂದು ಚಾಲನೆ ನೀಡಲಾಗುತ್ತಿದ್ದು ನಮ್ಮ ಸಂಸ್ಥೆಯ ಮೇಲೆ ಭರವಸೆಯಿಟ್ಟ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದ ಎಂದು ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕಾರ್ಯಕ್ರಮದ ಕುರಿತು ವಿವರ ನೀಡಿ ಮಾತನಾಡಿ ಮೆಡಿಕಲ್ ಕಾಲೇಜು ಪ್ರಾಂಗಣದಲ್ಲಿ ಬೆ.10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ತರಗತಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಚಾಲನೆ ನೀಡಲಿದ್ದು, ತಮಿಳುನಾಡಿನ ಕೊಯಂಬತ್ತೂರು ಜೆಮ್ ಆಸ್ಪತ್ರೆ ಚೇರ್ಮನ್ ಡಾ.ಸಿ.ಪಳನಿವೇಲು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ, ನಮ್ಮ ರಾಜ್ಯದಲ್ಲೇ ಅಲ್ಲದೆ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳಿಗಳು ದಾಖಲಾಗಿರುವುದು ಸಂತಸ ತಂದಿದೆ ಎಂದರು.
ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ, ಉನ್ನತ ಭೋದನಾ ಕ್ರಮ, ಅತ್ಯಾಧುನಿಕ ಸೌಲಭ್ಯ, ನುರಿತ ಉಪನ್ಯಾಸಕರ ಶ್ರಮದಿಂದ 2022- 23 ಸಾಲಿನ ಮೊದಲ ವರ್ಷದ ತರಗತಿಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸಂಸ್ಥೆ ಬದ್ಧತೆಯುಳ್ಳ ವೈದ್ಯರನ್ನು ನೀಡಲಿದೆ ಎಂದರು.

ಮೆಡಿಕಲ್ ಕಾಲೇಜು ಅಧೀಕ್ಷಕ ಡಾ.ನಿರಂಜನ ಮೂರ್ತಿ, ಸಿಇಓ ಡಾ.ಸಂಜೀವಕುಮಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!