ನೀರು ಪೂರೈಕೆಗೆ ಆಗ್ರಹಿಸಿ ಗ್ರಾಪಂಗೆ ಮುತ್ತಿಗೆ

148

Get real time updates directly on you device, subscribe now.


ಕುಣಿಗಲ್: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ಬಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಗೇನಹಳ್ಳಿ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ, ಈ ಬಗ್ಗೆ ಗ್ರಾಮಸ್ಥರು ಗ್ರಾಪಂ ಪಿಡಿಒ, ಇಒ, ಅಧ್ಯಕ್ಷರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗದೆ ಸಿಬ್ಬಂದಿ ಮೋಟಾರ್ ಕೆಟ್ಟಿದೆ, ಸರಿಪಡಿಸುವ ಕುಂಟು ನೆಪ ಹೇಳುತ್ತಲೆ ಕಾಲ ನೂಕಿದ್ದರಿಂದ ಬೇಸತ್ತ ಬಾಗೇನಹಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಖಾಲಿ ಬಿಂದಿಗೆಗಳೊಂದಿಗೆ ಬುಧವಾರ ಗ್ರಾಮ ಪಂಚಾಯಿತಿ ಆರಂಭದ ವೇಳೆಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶನ ಮಾಡುತ್ತಾ ಗ್ರಾಪಂ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಮಹಿಳೆಯರು ಮಾತನಾಡಿ ದೊಡ್ಡ ಕೆರೆಯಲ್ಲಿ ತುಂಬಾ ನೀರಿದ್ದರೂ ಕೆಲವೆ ಅಡಿ ದೂರದಲ್ಲಿರುವ ನಮಗೆ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ, ಮೋಟಾರ್ ದುರಸ್ತಿ ಎಂದು ಸಿಬ್ಬಂದಿ ಕುಂಟು ನೆಪ ಹೇಳುತ್ತಲೆ ಇದ್ದಾರೆ, ಆದರೆ ದುರಸ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ, ಕುಡಿಯಲು ನೀರಿಗಾಗಿ ಕಂಡವರ ಬೋರ್ವೆಲ್ಗಳ ಬಳಿ ದೂರ ಪ್ರದೇಶದಿಂದ ನೀರು ತಂದು ಜೀವನ ಮಾಡುವ ಸ್ಥಿತಿ ಆಗಿದೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಾಗಿದ್ದು ತಾಪಂ ಇಒಗೆ ದೂರು ನೀಡಿದರೂ ಪ್ರಯೋಜನವಾಗದ ಕಾರಣ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆದರು, ಪ್ರತಿಭಟನೆಯಲ್ಲಿ ಶಾರದಮ್ಮ, ಭಾಗ್ಯ, ಪುನೀತ, ಗಂಗಲಕ್ಷ್ಮಮ್ಮ, ಚನ್ನಮ್ಮ, ಗುಂಡಮ್ಮ, ಗ್ರಾಪಂ ಮಾಜಿ ಸದಸ್ಯ ನಂಜೇಗೌಡ, ಕೃಷ್ಣಪ್ಪ, ಕುಮಾರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!