ತುಮಕೂರು: ಶಿಸ್ತಿಗೆ ಇನ್ನೊಂದು ಹೆಸರೇ ಪೊಲೀಸ್ ಇಲಾಖೆ, ಹೀಗೆ ಸಾರ್ವಜನಿಕರೊಂದಿಗೆ ಹೆಚ್ಚು ಆಪ್ತವಾಗಿ ನಡೆದುಕೊಳ್ಳುತ್ತಿದ್ದ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ಈಗಾಗಲೇ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಇದೀಗ ಅವರ ನೆಚ್ಚಿನ ಅಭಿಮಾನಿ ಬಳಗ ಹಾಗೂ ತುಮಕೂರು ಜಿಲ್ಲಾ ನಾಗರಿಕ ವೇದಿಕೆಯಿಂದ ಜನಸನ್ಮಾನ ಕಾರ್ಯಕ್ರಮ ಅ.7ಕ್ಕೆ ಹಮ್ಮಿಕೊಂಡಿದೆ.
ಇಲಾಖೆಯಲ್ಲಿದ್ದ ಹಲವು ಹುಳುಕುಗಳನ್ನು ಸರಿಪಡಿಸಿ ಪೊಲೀಸ್ ಇಲಾಖೆ ಮರ್ಯಾದೆ ಉಳಿಸಿ ಬೇರು ಬಿಟ್ಟುಕೊಂಡಿದ್ದ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರು, ಆಗಾಗ ಎರಗಿ ಬರುವ ಆರ್ ಟಿಐ ಅರ್ಜಿದಾರರಿಗೂ ಮೂಗುದಾರ ಹಾಕಿದ್ದರು, ದಂಡಿನಶಿವರ ಪ್ರಕರಣವೊಂದರಲ್ಲಿ ಖುದ್ದು ಎಸ್ಪಿ ಕಾರು ಕಳಿಸಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದ್ದರು.
ತುಮಕೂರು ಜಿಲ್ಲಾ ಜನ ಸಾಮಾನ್ಯರ ಎಸ್ಪಿ ಆಗಿದ್ದ ದಕ್ಷ ಅಧಿಕಾರಿ ಇದೀಗ ಬೆಂಗಳೂರು ದಕ್ಷಿಣ ವಲಯದ ಡಿಸಿಪಿಯಾಗಿ ರಾಹುಲ್ ಕುಮಾರ್ ಶಹಪುರ್ ವಾಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಜನ ಮೆಚ್ಚಿದ ಅಧಿಕಾರಿಗೆ ಅ.7 ಸಂಜೆ 5 ಗಂಟೆಗೆ ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಜನ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ನೆಚ್ಚಿನ ಅಧಿಕಾರಿಗೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕೆಂದು ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಕೊಟ್ಟ ಶಂಕರ್ ಮನವಿ ಮಾಡಿದ್ದಾರೆ
Comments are closed.