ವಿದ್ಯುತ್ ಲೈನ್ ಕಡಿತಗೊಳಿಸಿದ ಭೂಪ!

ಬೆಸ್ಕಾಂನ ನೌಕರನ ಆಧಾರ್ ಫೋಟೋ ತೆಗೆಯಲು ವಿಳಂಬ

157

Get real time updates directly on you device, subscribe now.


ಮಧುಗಿರಿ: ಪಟ್ಟಣದ ತಾಲೂಕು ಆಡಳಿತ ಸೌಧದ ಪಡಸಾಲೆಯಲ್ಲಿರುವ ಆಧಾರ್ ಕೇಂದ್ರದಲ್ಲಿನ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂನ ಗುತ್ತಿಗೆ ನೌಕರನೊಬ್ಬ ತನ್ನ ಆಧಾರ್ ಫೋಟೋ ತೆಗೆಯಲಿಲ್ಲ ಎಂಬ ಏಕೈಕ ಕಾರಣಕ್ಕೆ ಕುಪಿತಗೊಂಡು ವಿದ್ಯುತ್ ಕಡಿತಗೊಳಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಇದರಿಂದ ಸರದಿ ಸಾಲಿನಲ್ಲಿ ಆಧಾರ್ ತೆಗೆಸಿಕೊಳ್ಳಲು ಕಾಯುತ್ತಿದ್ದ ಸಾರ್ವಜನಿಕರಿಗೆ ಸಾಕಷ್ಟು ಅಡ್ಡಿ ಉಂಟಾಯಿತು.ಆಧಾರ್ ಗೆ ಫೋಟೋ ತೆಗೆಯುವ ನೌಕರರಿಗೂ ಮತ್ತು ಬೆಸ್ಕಾಂ ಗುತ್ತಿಗೆ ನೌಕರರ ನಡುವೆ ಮಾತಿನ ಜಟಾಪಟಿ ನಡೆದು ತಾರಕಕ್ಕೇರಿತ್ತು.

ಸಾರ್ವಜನಿಕರು ಬೆಸ್ಕಾಂ ಗುತ್ತಿಗೆ ನೌಕರನಿಗೆ ಬುದ್ಧಿ ಮಾತು ಹೇಳಿ ಕಳುಹಿಸಿದರು. ಸ್ಥಳಕ್ಕೆ ಅಗಮಿಸಿದ ಶಿರಸ್ತೇದಾರ್ ಬೆಸ್ಕಾಂ ಗುತ್ತಿಗೆ ನೌಕರರ ವಿರುದ್ದ ಕಾನೂನು ಕ್ರಮಕ್ಕೆ ಪೊಲೀಸರಿಗೆ ದೂರು ನೀಡುವುದಾಗಿ ಕಿಡಿ ಕಾರಿದರು.

ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರ ಚರ್ಚೆಗೆ ಕಾರಣವಾಯಿತು. ಏಕಾಯಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಪಡಸಾಲೆಯಲ್ಲಿದ್ದ ಸಾಕಷ್ಟು ಕಂಪ್ಯೂಟರ್ ಗಳು ನಿಷ್ಕ್ರಿಯಗೊಂಡವು. ಸರ್ಕಾರಿ ಡಾಟಗಳು ಮತ್ತು ಸಾರ್ವಜನಿಕರ ವಿವರಗಳು ನಾಶವಾಗಿದ್ದರೆ ಯಾರು ಹೊಣೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂತು.

Get real time updates directly on you device, subscribe now.

Comments are closed.

error: Content is protected !!