ಕುಣಿಗಲ್: ನರೇಗ ಯೋಜನೆಯಡಿ ನಿಗದಿತ ಗುರಿ ಸಾಧಿಸದೆ ಕರ್ತವ್ಯ ಲೋಪ ಎಸಗಿದ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರಶಾಂತ್ನನ್ನು ಜಿಪಂ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ನರೇಗ ಯೋಜನೆಯಡಿ ಗ್ರಾಮೀಣ ಪ್ರದೇಶದ ಅಕುಶಲ ಕೂಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯಡಿಯಲ್ಲಿ ಬರಗಾಲ ಪ್ರಯುಕ್ತ ವಿಶೇಷ ಅಭಿಯಾನ ಹಮ್ಮಿಕೊಂಡು ಸೆಪ್ಟಂಬರ್ 11ರಿಂದ 22 ನೇ ತಾರಿಕಿನ ವರೆಗೂ ಅನುಮೋದನೆಗೊಂಡ ಕಾಮಗಾರಿಗಳಲ್ಲಿ ರೈತರಿಗೆ ಕೂಲಿ ಆಧರಿತ ಕಾಮಗಾರಿ ಕೈಗೊಳ್ಳುವಂತೆ ಹೇರೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರಶಾಂತ್ ಅವರಿಗೆ ಜಿಪಂ ಸಭೆಗಳು ಸೇರಿದಂತೆ ಹಲವಾರು ಬಾರಿ ಸೂಚಿಸಿದ್ದರೂ ಅಕ್ಟೋಬರ್ 3ರಂದು ವರದಿ ಪರಿಶೀಲಿಸಲಾಗಿ ಹೇರೂರು ಗ್ರಾಪಂನಲ್ಲಿ 313 ಕಾಮಗಾರಿ ಕ್ರಿಯಾ ಯೋಜನೆ ನೀಡಿ ಕೇವಲ 03 ಕಾಮಗಾರಿ ಆರಂಭಿಸಿದ್ದು 2023- 24ನೇ ಸಾಲಿಗೆ 3721 ಮಾನವ ದಿನ ಸೃಜನೆ ಗುರಿ ನೀಡಲಾಗಿದ್ದು, ಶೇ.61.11 ಮಾನವ ದಿನ ಸೃಜನೆ ಮಾಡಿದ್ದು, ಬರಗಲಾದ ದಿನದಲ್ಲಿ ಯೋಜನೆಯ ಅನುಷ್ಠಾನಕ್ಕೆ ದಿವ್ಯ ನಿರ್ಲಕ್ಷ್ಯ ತೋರಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಪಂ ಸಿಇಒ ಪ್ರಭು ಹೇರೂರು ಗ್ರಾಪಂ ಪಿಡಿಒ ಅವರನ್ನು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 5 ರಂದು ಪಿಡಿಒ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದಲೇ ಜಾರಿ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Comments are closed.