ಜೆ.ಹೆಚ್.ಪಟೇಲ್ ರದ್ದು ಜನಪರ ಚಿಂತನೆ

80

Get real time updates directly on you device, subscribe now.


ತುಮಕೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ರ ಚಿಂತನೆಗಳು ಜನಪರವಾಗಿದ್ದು, ಯಾವುದೇ ಜಾತಿಗೆ ಸಿಮೀತವಾಗದೆ ಸಮಗ್ರ ಕರ್ನಾಟಕ ಹಿತ ಬಯಸುವ ಆಲೋಚನೆಗಳನ್ನು ಜಾರಿಗೆ ತಂದರೆ ಪರಿವರ್ತನೆ ಸಾಧ್ಯ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜ.ಪಟೇಲ್ ತಿಳಿಸಿದ್ದಾರೆ.
ನಗರದ ಜಯದೇವ ಹಾಸ್ಟೆಲ್ ಆವರಣದಲ್ಲಿರುವ ಶ್ರೀಮುರುಘಾ ಶರಣರ ಸಭಾಂಗಣದಲ್ಲಿ ಬಸವಕೇಂದ್ರ ತುಮಕೂರು, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್, ಸುವರ್ಣ ಕರ್ನಾಟಕ ವೀರಶೈವ, ಲಿಂಗಾಯಿತ ಮಹಾಸಭಾ, ಜಿ.ಹೆಚ್.ಪಟೇಲ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಜೆ.ಹೆಚ್.ಪಟೇಲ್- ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೆ.ಹೆಚ್.ಪಟೇಲ್ ರು ತಮ್ಮ ಜನರ ಚಿಂತನೆಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

ತಮ್ಮ ಆಡಳಿತದ ಅವಧಿಯಲ್ಲಿ ಜೆ.ಹೆಚ್.ಪಟೇಲರು ಹಲವರ ವಿರೋಧದ ನಡುವೆಯೂ ರಾಜ್ಯದಲ್ಲಿ ಹೊಸದಾಗಿ 7 ಜಿಲ್ಲೆಗಳನ್ನು ಹುಟ್ಟು ಹಾಕಿದರು, ಇದರಿಂದ ಆಡಳಿತ ಮತ್ತಷ್ಟು ಸುಸೂತ್ರವಾಗಿ ನಡೆಯಲು ಕಾರಣವಾಯಿತು, ಯಾವುದೇ ಸಮಸ್ಯೆ ಬಂದರೂ ತಕ್ಷಣವೇ ಸ್ಪಂದಿಸಿ ಬಗೆಹರಿಸುವ ಮೂಲಕ ಸಮಸ್ಯೆ ಮುಕ್ತ ಕರ್ನಾಟಕ ಅವರ ಆಡಳಿತದ ಭಾಗವಾಗಿತ್ತು ಎಂದು ಮಹಿಮ ಜ.ಪಟೇಲ್ ನುಡಿದರು.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ಜೆ.ಹೆಚ್.ಪಟೇಲ್ ರ ಚಿಂತನೆಗಳು ಇಂದಿಗೂ ಅಜರಾಮರವಾಗಿವೆ, ಲಿಂಗಾಯಿತ ಸಮಾಜದಲ್ಲಿ ಹುಟ್ಟಿದರೂ ಬೇರೆ ಸಮುದಾಯಗಳ ಏಳಿಗೆಗೆ ಹಗಲಿರುಳು ದುಡಿದವರು, ಕರ್ನಾಟಕದಲ್ಲಿ ಇವರ ಆಡಳಿತ ಕಾಲ ಸುವರ್ಣ ಯುಗ ಎಂದು ಬಣ್ಣಿಸಿದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ನೇರ, ನಿಷ್ಠೂರವಾದಿ ಸ್ವಾಭಾವದ ಜೆ.ಹೆಚ್.ಪಟೇಲ್ ರು ಹೃದಯ ಶ್ರೀಮಂತಿಕೆ ಉಳ್ಳ ವ್ಯಕ್ತಿಯಾಗಿದ್ದರು, ನನ್ನ 23ನೇ ವಯಸ್ಸಿನಲ್ಲಿಯೇ ಅವರನ್ನು ಭೇಟಿಯಾಗಿ ಮಾತನಾಡಿಸುವ ಅವಕಾಶ ಲಭಿಸಿತ್ತು, ಕಳೆದ ಐದುವರೆ ವರ್ಷಗಳ ಶಾಸಕ ಜೀವನದಲ್ಲಿ ಹಲವಾರು ಬಾರಿ ಆಡಳಿತ ಮತ್ತು ವಿರೋಧ ಪಕ್ಷಗಳು ಜೆ.ಹೆಚ್.ಪಟೇಲ್ ರ ಆಡಳಿತ ಉಲ್ಲೇಖಿಸಿ ಮಾತನಾಡಿರುವುದನ್ನ ನಾನು ಕಂಡಿದ್ದೇನೆ, ನಮ್ಮ ಕಿರಿಯರಿಗೆ ಅವರು ಮಾದರಿ ಎಂದರು.

ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಸುರೇಶ್ ಮಾತನಾಡಿ, ಪ್ರಸ್ತುತ ವೀರಶೈವ ಸಮಾಜಕ್ಕೆ ನಾಯಕರ ಕೊರತೆ ಇದ್ದು, ಮೌಲ್ಯಾಧಾರಿತ ರಾಜಕಾರಣ ಮಾಡಿದ ಕುಟುಂಬದಿಂದ ಬಂದಿರುವ ಮಹಿಮಾ ಜ.ಪಟೇಲ್ ಅವರನ್ನು ಸಮಾಜ ಬಳಸಿಕೊಳ್ಳಬೇಕು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಸೂಚನೆ ಬಂದಿದ್ದು, ಎಲ್ಲಾ ಸಮುದಾಯಗಳ ಬೆಂಬಲಿಸುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮದಲ್ಲಿ ಶತಾಯುಷಿ ಚನ್ನಬಸಪ್ಪ ಮತ್ತು ಸಿದ್ದಗಂಗಮ್ಮ ಅವರನ್ನು ಮಹಿಮ ಜೆ.ಪಟೇಲ್ ಸನ್ಮಾನಿಸಿದರು. ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್.ರವಿ, ಮುಖಂಡರಾದ ಡಿ.ವಿ.ಸದಾನಂದ್, ಡಾ.ಎಸ್.ಪಿ.ಮಲ್ಲಿಕಾರ್ಜುನ ಸ್ವಾಮಿ, ಶಶಿಧರ್, ಲೋಕೇಶ್ವರಪ್ಪ, ರಾಮಕೃಷ್ಣ, ಸುವರ್ಣ ಕರ್ನಾಟಕ ವೀರೈಶೈವ ಲಿಂಗಾಯಿತ ಮಹಾಸಭಾದ ಮೋಹನ್ ಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!