ಗುಬ್ಬಿ: ತಾಲೂಕಿನ ಚೇಳೂರು ವಿದ್ಯುತ್ ಸ್ಥಾವರದಿಂದ ಕಳೆದು 15 ದಿನಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡದೆ ವಾರಕ್ಕೆ ಕೇವಲ ಒಂದರಿಂದ ಎರಡು ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ಗ್ರಾಮೀಣ ಭಾಗದ ತೋಟದ ಮನೆಗಳು, ವಾಸಿಗಳು ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಚೇಳೂರು ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿ ರೈತರು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ನಮಗೆ ರಾತ್ರಿ 6 ರಿಂದ 10 ಗಂಟೆಯ ವರೆಗೆ ಗ್ರಾಮೀಣ ಭಾಗದ ರೈತರಿಗೆ ವಿದ್ಯುತ್ ನೀಡದೆ ಕತ್ತಲೆಯಲ್ಲಿ ಇರುವಂತೆ ಮಾಡಿದ್ದಾರೆ, ಓದುವ ಮಕ್ಕಳಿಗೂ ವಿದ್ಯುತ್ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಇದು ಹೀಗೆ ಮುಂದುವರಿದರೆ ನಾಡಿದ್ದು ಬುಧವಾರ ಬೆಳಗ್ಗೆ 10 ಗಂಟೆಗೆ ಚೇಳೂರು ಬಂದು ಮಾಡಿ ಉಗ್ರ ಪ್ರತಿಭಟನೆ ಮಾಡಲು ಎಲ್ಲಾ ರೈತ ಸಂಘದವರು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಂಜುನಾಥ್, ಬಸವರಾಜು, ಕರೇಗೌಡ, ಕೆಂಪರಾಜು, ಜಗದೀಶ್, ರೇಣುಕಪ್ಪ, ಲೋಕೇಶ್,
ಗುರುಲಿಂಗಯ್ಯ,ಶಿವಣ್ಣ, ಬಸವರಾಜು ಭಾಗವಹಿಸಿದ್ದರು.
Comments are closed.