ಇಂದ್ರಧನುಶ್ ಲಸಿಕೆ ಕಾರ್ಯಕ್ರಮದಲ್ಲಿ ಇದೆಂಥಾ ಅಧ್ವಾನ?

133

Get real time updates directly on you device, subscribe now.


ಕುಣಿಗಲ್: ಇಂದ್ರಧನುಶ್ ಮೂರನೆ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆಗೆ ಗಣ್ಯರ ಆಗಮನಕ್ಕೆ ಬಾಣಂತಿ, ನವಜಾತ ಮಕ್ಕಳು ಸುಮಾರು ಐದುವರೆ ಗಂಟೆ ಕಾಯ್ದ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು.

ಆರೋಗ್ಯ ಇಲಾಖೆ ವತಿಯಿಂದ ಪರಿಣಾಮಕಾರಿ ಇಂದ್ರಧನುಶ್ ಅಭಿಯಾನ ಹಮ್ಮಿಕೊಂಡಿದ್ದರು, ಈ ಕಾರ್ಯಮದಲ್ಲಿ ಅರ್ಹ ಮಕ್ಕಳಿಗೆ ನಿಗದಿತ ಅವಧಿಗೆ ಲಸಿಕೆ ನೀಡಲಾಗುತ್ತಿದೆ, ಮೂರನೆ ಹಂತದ ಲಸಿಕೆ ಕಾರ್ಯಕ್ರಮವನ್ನು ಆ.9 ರಿಂದ 14ರ ವರೆಗೂ ನಡೆಸಲಾಗುತ್ತಿದೆ, ಜಿಲ್ಲಾಧಿಕಾರಿಗಳು ಸೋಮವಾರ ಪಟ್ಟಣಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದ್ದುದರಿಂದ ಅವರಿಂದ ಚಾಲನೆ ಕೊಡಿಸಲು ಆರೋಗ್ಯ ಇಲಾಖಾಧಿಕಾರಿಗಳು ಸಿದ್ಧತೆ ಮಾಡಿಕೊಂಡು ಬೆಳಗ್ಗೆ 9 ಗಂಟೆಗೆ ಸುಮಾರು ಹತ್ತಕ್ಕೂ ಹೆಚ್ಚು ಅರ್ಹ ನವಜಾತ ಶಿಶುಗಳನ್ನು ಅವರ ತಾಯಿಯರೊಂದಿಗೆ ಕರೆಸಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ವೇದಿಕೆ ಹಾಕಿ ಕೂರಿಸಲಾಗಿತ್ತು, ಪಟ್ಟಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಕಚೇರಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ನಿರತರಾದರಲ್ಲದೆ ಶಾಸಕರೂ ಸಹ ತಡವಾಗಿ ಆಗಮಿಸಿದ ಕಾರಣ ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಯಾದರೂ ಆರಂಭವಾಗುವ ಲಕ್ಷಣ ಕಾಣಲಿಲ್ಲ, ಈ ಮಧ್ಯೆ ಕೆಲ ತಾಯಿಯಂದಿರು ಶಿಶುಗಳೊಂದಿಗೆ ಲಸಿಕೆ ಹಾಕಿಸದೆಯೆ ಅಧಿಕಾರಿಗಳ ಕ್ರಮ ಖಂಡಿಸಿ ಗೊಣಗಿಕೊಂಡೆ ತೆರಳಿದರು.

ಕೊನೆಗೂ ಮಧ್ಯಾಹ್ನ ಎರಡು ಗಂಟೆಗೆ ಆಗಮಿಸಿದ ಶಾಸಕ ಡಾ.ರಂಗನಾಥ್, ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಸಿಇಒ ಪ್ರಭು, ಡಿಎಚ್ ಒ ಮಂಜುನಾಥ, ಟಿಎಚ್ಒ ಮರಿಯಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಗಣೇಶ ಬಾಬು ಇತರರು ಆಶಾ ಕಾರ್ಯಕರ್ತೆಯರ ಒತ್ತಾಯಕ್ಕೆ ಕುಳಿತಿದ್ದ ಇಬ್ಬರು ತಾಯಿಯರೊಂದಿಗಿದ್ದ ನವಜಾತ ಶಿಶುವಿಗೆ ಲಸಿಕೆ ಹಾಕಿ ಯಾವುದೇ ಮಾತನಾಡದೆಯೇ ತೆರಳಿದರು.

Get real time updates directly on you device, subscribe now.

Comments are closed.

error: Content is protected !!