ಹುಳಿಯಾರಿನಲ್ಲಿ ಸೀಡ್ಲೆಸ್ ದ್ರಾಕ್ಷಿಗೆ ಸಖತ್ ಡಿಮ್ಯಾಂಡ್

ರಸ್ತೆಯಲ್ಲಿ ಎತ್ತ ನೋಡಿದರೂ ದ್ರಾಕ್ಷಿ ಅಂಗಡಿ ಸಾಲು

309

Get real time updates directly on you device, subscribe now.

ಹುಳಿಯಾರು: ಹುಳಿಯಾರು ಪಟ್ಟಣದಲ್ಲಿ ಎರಡ್ಮೂರು ವಾರಗಳಿಂದ ಬಾರಿ ಪ್ರಮಾಣದಲ್ಲಿ ದ್ರಾಕ್ಷಿ ಆವಕವಾಗುತ್ತಿದ್ದು, ಎಲ್ಲಿ ನೋಡಿದರಲ್ಲಿ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ದ್ರಾಕ್ಷಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಮಾರುಕಟ್ಟೆಯಲ್ಲಿ ಸೀಡ್ಲೆಸ್ ಬಿಳಿ ದ್ರಾಕ್ಷಿ ಮಾರಾಟವಾಗುತ್ತಿದ್ದು ಆಕಾರದಲ್ಲಿ ಸ್ವಲ್ಪ ಉದ್ದವಾಗಿರುವ ಸೋನಕಾ ತಳಿಯ ದ್ರಾಕ್ಷಿಗೆ ಕೆಜಿಗೆ 80 ರೂ. ಇದೆ. ಗಾತ್ರದಲ್ಲಿ ಚಿಕ್ಕದಾಗಿ ಗುಂಡಗಾಗಿರುವ ಸ್ಥಳೀಯ ತಳಿಯ ದ್ರಾಕ್ಷಿ ಕೆಜಿಗೆ 60 ರೂ.ನಿಂದ 80 ರೂ. ಇದೆ.
ದ್ರಾಕ್ಷಿ ಬೆಳೆಯ ಋತು ಆರಂಭವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ, ಪಟ್ಟಣದ ರಾಮಗೋಪಾಲ್ ಸರ್ಕಲ್, ಬಸ್ ನಿಲ್ದಾಣ ಮತ್ತು ರಾಜಕುಮಾರ್ ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ದ್ರಾಕ್ಷಿ ಮಾರಲಾಗುತ್ತಿದೆ. ಬೆಲೆ ಸ್ಪಲ್ಪ ದುಬಾರಿಯಾಗಿದ್ದರೂ ತಿನ್ನಲು ರುಚಿ ಮತ್ತು ಎರಡು ದಿನಕ್ಕೊಮ್ಮೆ ರೆಷ್ ದ್ರಾಕ್ಷಿ ಬರುತ್ತಿರುವುದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ.
ಈ ಹಿಂದೆ ಸೀಬೆ, ಸಪೋಟಾ, ಹಲಸಿನಹಣ್ಣು, ನೇರಳೆ ಹಣ್ಣುಗಳನ್ನು ತಳ್ಳುವ ಗಾಡಿಯಲ್ಲಿ ತುಂಬಿಕೊಂಡು ಮಾರುತ್ತಿದ್ದ ವ್ಯಾಪಾರಿಗಳೇ ಈಗ ದ್ರಾಕ್ಷಿಗೆ ಬದಲಾಗಿದ್ದು ನಿತ್ಯ ಐದಾರು ನೂರು ಹಣ ಸಂಪಾದಿಸುತ್ತಿದ್ದಾರೆ. ಇನ್ನೆರಡು ತಿಂಗಳು ದ್ರಾಕ್ಷಿ ಸೀಸನ್ ಇದ್ದು ಅಲ್ಲಿಯವರೆವಿಗೆ ದ್ರಾಕ್ಷಿ ವ್ಯಾಪಾರ ಮಾಡಿ ನಂತರ ಬರುವ ಮಾವಿನ ಸೀಸನ್ನಲ್ಲಿ ಮಾವು ಮಾರಾಟಕ್ಕೆ ಇಳಿಯುವುದಾಗಿ ವ್ಯಾಪಾರಿ ಮುಬಾರಕ್ ತಿಳಿಸುತ್ತಾರೆ.

Get real time updates directly on you device, subscribe now.

Comments are closed.

error: Content is protected !!