ಲೋಡ್ ಶೆಡ್ಡಿಂಗ್- ಮೊಬೈಲ್ ಬೆಳಕಲ್ಲಿ ಶಾಸಕರ ಸಭೆ

93

Get real time updates directly on you device, subscribe now.


ಕುಣಿಗಲ್: ರಾಜ್ಯದಾದ್ಯಂತ ಬರಗಾಲದ ಪರಿಣಾಮ ಅಘೋಷಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಯಾಗಿದ್ದು, ಲೋಡ್ ಶೆಡ್ಡಿಂಗ್ ಪರಿಣಾಮ ಶಾಸಕರು ಮೊಬೈಲ್ ಬೆಳಕಲ್ಲಿ ಸಭೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆಯಿತು.

ಸೋಮವಾರ ರಾತ್ರಿ ಪುರಸಭೆ ಸಭಾಂಗಣದಲ್ಲಿ ಅಮೃತ್ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಶಾಸಕರು, ಪುರಸಭೆ ಸದಸ್ಯರ ಸಭೆ ನಡೆಸಿದ್ದು ಸಭೆಯ ಆರಂಭಕ್ಕೆ ವಿದ್ಯುತ್ ಕೈ ಕೊಟ್ಟಿತ್ತು, ಪುರಸಭೆಯಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಪುರಸಭೆ ಸಿಬ್ಬಂದಿ ಮೊಬೈಲ್ ಟಾರ್ಚ್ ಆನ್ ಮಾಡಿ ಶಾಸಕರ ಮುಂದೆ ಹಿಡಿದು ಸಭೆ ನಡೆಸಿದರು.

ಸಭೆಯಲ್ಲಿ ಒಂದನೆ ವಾರ್ಡ್ ಸದಸ್ಯೆ ನಮ್ಮ ವಾರ್ಡ್ ನಲ್ಲಿ ಕುಡಿಯುವ ನೀರು ಪೂರೈಕೆಯು ಐದು ಬೋರ್ ವೆಲ್ ಮೂಲಕ ಆಗುತ್ತಿದೆ, ಆದರೆ ಕರೆಂಟ್ ಇಲ್ಲದ ಕಾರಣ ನೀರು ಪೂರೈಕೆ ಮಾಡಲಾಗುತ್ತಿಲ್ಲ, ಏನಾದರೂ ಮಾಡಿ ಎಂದರು.

ಶಾಸಕರು ಕರೆಂಟ್ ಸಮಸ್ಯೆ ಇಡೀ ರಾಜ್ಯದ್ದಾಗಿದೆ, ನಿರಂತರ ಯೋಜನೆಯಡಿಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಪಟ್ಟ ಬೆಸ್ಕಾಂ ಸಿಬ್ಬಂದಿಯೊಂದಿಗೆ ಚರ್ಚಿಸಿ ಕರೆಂಟ್ ಪೂರೈಕೆ ಮಾಡಲಾಗುವುದು, ಅಮೃತ್ ಯೋಜನೆ ಜಾರಿಗೊಂಡಲ್ಲಿ ನೀರು ಪೂರೈಕೆಗೆ ಕರೆಂಟ್ ಬೇಕಿಲ್ಲ, ನೀರು ಸಿಗುತ್ತದೆ ಅಲ್ಲಿಯ ವರೆಗೂ ಸಹಕರಿಸಿ ಎಂದರು.

Get real time updates directly on you device, subscribe now.

Comments are closed.

error: Content is protected !!