ಕ್ರೀಡೆ ಮಕ್ಕಳ ಉಜ್ವಲ ಭವಿಷ್ಯದ ದಾರಿ

ಖೋಖೋ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಜ್ಯೋತಿಗಣೇಶ್

113

Get real time updates directly on you device, subscribe now.


ತುಮಕೂರು: ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಉಜ್ವಲ ಭವಿಷ್ಯವಿದ್ದು, ಸೋಲು, ಗೆಲುವಿನ ಜೊತೆಗೆ ತಮ್ಮ ಕೆರಿಯರ್ ಗಟ್ಟಿ ಮಾಡಿಕೊಳ್ಳುವಂತೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಕ್ರೀಡಾಪಟುಗಳಿಗೆ ಸಲಹೆ ನೀಡಿದ್ದಾರೆ.

ತುಮಕೂರಿನ ವಿಜಯ ನಗರದಲ್ಲಿರುವ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ 14 ಮತ್ತು 17ನೇ ವರ್ಷದೊಳಗಿನ ಶಾಲಾ ಮಕ್ಕಳ ಖೋಖೋ ಕ್ರೀಡಾಕೂಟವನ್ನು ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿ, ತಮ್ಮ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರೂ ಶಕ್ತಿ ಮೀರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದರು.

ಇಂತಹ ಕ್ರೀಡಾಕೂಟವನ್ನು ಸರಕಾರ ನಡೆಸುವುದು ಕಷ್ಟ, ಹಾಗಾಗಿ ಶಿಕ್ಷಕರೇ ಕಟ್ಟಿದ ಸರ್ವೋದಯ ಶಿಕ್ಷಣ ಸಂಸ್ಥೆ ಈ ರೀತಿಯ ಕ್ರೀಡಾಕೂಟ ಆಯೋಜಿಸಿ ಅನುಭವ ಇರುವ ಕಾರಣ ಅವರ ಸಹಯೋಗ ಪಡೆಯಲಾಗಿದೆ, ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ನಡೆಸಿ ಅನುಭವ ಇರುವ ಸರ್ವೋದಯ ಶಿಕ್ಷಣ ಸಂಸ್ಥೆ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ ಎಂಬ ನಂಬಿಕೆ ನಮ್ಮದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಬ್ಬರಾಯ ಮಾತನಾಡಿ, ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ, ನಿಮ್ಮ ದೈಹಿಕ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ, ಕಳೆದ ಒಂದುವರೆ ತಿಂಗಳಿನಿಂದ ಈ ಕ್ರೀಡಾಕೂಟಕ್ಕೆ ತಯಾರಿಯನ್ನು ನಮ್ಮ ಸಂಸ್ಥೆಯ ಶಿಕ್ಷಕರು ಮಾಡಿದ್ದಾರೆ, ಈ ಹಿಂದೆ ನಮ್ಮ ಸಂಸ್ಥೆ ಎರಡು ರಾಷ್ಟ್ರೀಯ ಕ್ರೀಡಾಕೂಟ ನಡೆಸಿ ಅನುಭವ ಹೊಂದಿದ್ದು, ಈ ಕ್ರೀಡಾಕೂಟವನ್ನು ಯಾವುದೇ ಲೋಪ ದೋಷವಿಲ್ಲದೆ ನಡೆಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕ್ರೀಡಾಕೂಟದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ಮಾತನಾಡಿ, ರಾಜ್ಯದ 11 ಜಿಲ್ಲೆಗಳ ತಲಾ ನಾಲ್ಕು ತಂಡಗಳಂತೆ 44 ತಂಡಗಳ ಒಟ್ಟು 700 ಕ್ರೀಡಾಪಟುಗಳು ಹಾಗೂ 100 ಜನ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುತಿದ್ದು, ಸರ್ವೋದಯ ಶಿಕ್ಷಣ ಸಂಸ್ಥೆಯ ಸಹಕಾರದಲ್ಲಿ ಎಲ್ಲರೂ ಕ್ರೀಡಾ ಸ್ಪೂರ್ತಿ ಮೆರೆದು ಒಳ್ಳೆಯ ಫಲಿತಾಂಶದೊಂದಿಗೆ ಮುಂದಿನ ಹಂತಕ್ಕೆ ಮುನ್ನೆಡೆಯೋಣ ಎಂದು ಶುಭ ಹಾರೈಸಿದರು.
ಕ್ರೀಡಾಕೂಟದಲ್ಲಿ ದಾವಣಗೆರೆ, ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಧುಗಿರಿ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ, ಬಾಲಕಿಯರ ತಲಾ 4 ತಂಡ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಇಲ್ಲಿ ಸ್ಥಾನ ಪಡೆಯುವ ಮಕ್ಕಳು ಅಕ್ಟೋಬರ್ 12 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಾಲಿಕೆ ವಿರೋಧಪಕ್ಷದ ನಾಯಕ ವಿಷ್ಣುವರ್ಧನ್ ಕ್ರೀಡಾ ಧ್ವಜಾರೋಹಣ ಮಾಡಿದರು, ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಸೀತಾರಾಂ, ಡಯಟ್ ಪ್ರಾಂಶುಪಾಲ ಮಂಜುನಾಥ್.ಕೆ, ಡಿಡಿಪಿಐ ರಂಗಧಾಮಯ್ಯ.ಸಿ, ಸರ್ವೋದಯ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ.ಎಂ.ಬಿ, ಪರಮೇಶ್ವರಪ್ಪ, ಪಾಲಿಕೆಯ ಸದಸ್ಯ ಶಿವರಾಂ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮೇಗೌಡ, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಲೋಕೇಶ್ ರೆಡ್ಡಿ, ಮಂಜುನಾಥ್, ಗಂಗಾಧರಯ್ಯ, ಷಡಕ್ಷರಯ್ಯ, ದೈಹಿಕ ಶಿಕ್ಷಕ ರಮೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!