ಕಿಡಿಗೇಡಿಗಳಿಂದ ಹುಲ್ಲಿನ ಬಣವೆಗೆ ಬೆಂಕಿ

175

Get real time updates directly on you device, subscribe now.


ಪಾವಗಡ: ದನ ಕರುಗಳ ಹಾರೈಕೆಗಾಗಿ ರೈತ ಹೊಲದಲ್ಲಿ ಶೇಖರಿಸಿದ್ದ ಹುಲ್ಲಿನ ಬಣವೆಗೆ ಆಕಸ್ಮಿಕ ತಗುಲಿ ಹುಲ್ಲಿನ ಬಣವೆ ಸಂಪೂರ್ಣವಾಗಿ ಭಸ್ಮವಾಗಿದ್ದು ರೈತ ದಿಕ್ಕು ತೋಚದೆ ಕಂಗಾಲಾಗಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ರೈತ ರವಿ ಕುಮಾರ್ ಹಾಗೂ ಕುಟುಂಬ ಘಟನೆಯಿಂದ ಆತಂಕಕ್ಕೀಡಾಗಿದ್ದು ಪಟ್ಟಣದ ಅಗಸರಕುಂಟೆ ಬಳಿಯ ಸರ್ವೆ ನಂ.18/1 ರ ಜಮೀನಿನಲ್ಲಿ ಶೇಖರಿಸಿದ್ದ ಹುಲ್ಲಿನ ಬಣವೆಗೆ ಮಂಗಳವಾರ ತಡರಾತ್ರಿ ಬೆಂಕಿ ತಗುಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಸುಮಾರು 10 ಲೋಡುಗಳಷ್ಟು ಶೇಂಗಾ ಬಳ್ಳಿಯ ಮೇವಿನ ಬಣವೆ ಸಂಪೂರ್ಣವಾಗಿ ಭಸ್ಮವಾಗಿದೆ, ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ರೈತ ರವಿಕುಮಾರ್ ಸಂಶಯ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವಂತೆ ರೈತಪರ ಸಂಘಟನೆಗಳು ಒತ್ತಾಯಿಸಿವೆ.
ನಿರ್ಲಕ್ಷಕ್ಕೆ ಬೇಸರ: ಮಂಗಳವಾರ ತಡರಾತ್ರಿ ರೈತನ ಬಣವೆಗೆ ಬೆಂಕಿ ಬಿದ್ದಿರುವ ಘಟನೆ ಅಧಿಕಾರಿಗಳಿಗೂ ತಿಳಿದಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿಗಳಾಗಿವೆ, ಬುಧವಾರ ಸಂಜೆವರೆಗೂ ಅಧಿಕಾರಿಗಳ ಆಗಮದ ನಿರೀಕ್ಷೆಯಲ್ಲಿದ್ದ ರೈತರಿಗೆ ನೋವು ಆಲಿಸಲು ಕೃಷಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿಗಳ ದರ್ಶನ ಆಗಲೇ ಇಲ್ಲವಾದ್ದರಿಂದ ನಿರ್ಲಕ್ಷ ವಹಿಸಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!