ನೆನೆಗುದಿಗೆ ಬಿದ್ದಿದ್ದ ರಸ್ತೆಗೆ ಶಾಸಕರಿಂದ ಮುಕ್ತಿ

534

Get real time updates directly on you device, subscribe now.

ತುಮಕೂರು: ಗ್ರಾಮಾಂತರ ಕ್ಷೇತ್ರವ್ಯಾಪ್ತಿಯಲ್ಲಿ 40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಇತಿಹಾಸ ಪ್ರಸಿದ್ದ ವೈದ್ಯನಾಥೇಶ್ವರ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಕ್ಕೆ ಮುಕ್ತಿ ದೊರಕಿದೆ.
ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಗ್ರಾಮದ ಜನರಿಗೆ ನೀಡಿದ ಆಶ್ವಾಸನೆಯಂತೆ 1 ಕೋಟಿ 72 ಲಕ್ಷ ವೆಚ್ಚದಲ್ಲಿ ಟಾರ್ ರಸ್ತೆ ನಿರ್ಮಾಣವಾಗಿದ್ದು, ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕರು ನೂತನ ರಸ್ತೆ ಲೋಕಾರ್ಪಣೆ ಮಾಡಿದರು.
ರಸ್ತೆ ಲೋಕಾರ್ಪಣೆ ಬಳಿಕ ಅರೆಯೂರು ಗ್ರಾಮದಲ್ಲಿ ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬೇರೆ ಪಕ್ಷಗಳ ನೂರಾರು ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿದರು.
ಇತಿಹಾಸ ಪ್ರಸಿದ್ದ ವೈದ್ಯನಾಥೇಶ್ವರ ದೇವಾಲಯಕ್ಕೆ ಉತ್ತಮ ರಸ್ತೆ ಮಾರ್ಗವಿರಲಿಲ್ಲ, ಈ ದೇವಾಲಯಕ್ಕೆ ಉತ್ತಮ ರಸ್ತೆ ಮಾರ್ಗ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದೆ, ನೀಡಿದ್ದ ಭರವಸೆ ಈಡೇರಿಸಿದ್ದೇನೆ, ದೇವರ ಆಶೀರ್ವಾದ, ತಂದೆ ತಾಯಿಗಳ ಆಶೀರ್ವಾದದ ಜೊತೆಗೆ ಕ್ಷೇತ್ರದ ಜನರ ಆಶೀರ್ವಾದ ಸಿಕ್ಕಿದೆ ಕ್ಷೇತ್ರದ ಜನಗಳ ಸಮಸ್ಯೆಗೆ ಹಗಲು ರಾತ್ರಿ ಸ್ಪಂದಿಸಿ ಅವರ ಋಣ ತೀರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು, ಅಧಿಕಾರಿಗಳು ರೈತರು ಹಾಗೂ ಬಡವರನ್ನು ವಿನಾಕಾರಣ ಕಚೇರಿಗೆ ಅಲೆಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಶಾಸಕರ ಅಭಿವೃದ್ಧಿ ಕಾರ್ಯ ಮೆಚ್ಚಿ ನೂರಾರು ಮಂದಿ ಬಿಜೆಪಿ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ತಡರಾತ್ರಿಯಾದರೂ ಸಹ ಶಾಸಕರು ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಹಾಲಿ ವಿಎಸ್ಎಸ್ಎನ್ ಸದಸ್ಯೆ ಸುಜಾತಮ್ಮ, ಶಿವಮ್ಮ, ಪಾರ್ವತಮ್ಮ, ಕಲಾವತಿ, ಪೂಜಾರಪ್ಪ, ಪ್ರಕಾಶ್, ಶಂಕ್ರಯ್ಯ, ಚಿಕ್ಕಮ್ಮ, ರವಿಕುಮಾರ್, ಮಧು, ಮಂಜು, ಕರಡಿಗೆರೆ ಬೆಟ್ಟೇಗೌಡ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು, ಗ್ರಾಮಸ್ಥರು ಇದ್ದರು.

Get real time updates directly on you device, subscribe now.

Comments are closed.

error: Content is protected !!