ಮಧುಗಿರಿ: ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕ ಜೈಲು ಪಾಲಾಗಿದ್ದಾರೆ.
ಮಧುಗಿರಿ ತಾಲೂಕಿನ ಮೂರು ಶಾಲೆಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಶಿಕ್ಷಕರು ಲೈಂಗಿಕ ದೌರ್ಜನ್ಯ ವೆಸಗಿದ್ದು ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು ಕೂಡ ಕೆಲ ದಿನ ಅಮಾನತಾಗಿ ನಂತರ ದಿನಗಳಲ್ಲಿ ಆಯಾ ಕಟ್ಟಿನ ತಾಲೂಕುಗಳನ್ನು ಬದಲು ಮಾಡಿಕೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಮೂರು ಪ್ರಕರಣ ಇದ್ದು ಅವರಿಗೆ ಶಿಕ್ಷೆ ಯಾವಾಗ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಶಿಕ್ಷಕ ಜೈಲು ಸೆರಿದ್ದರ ಬಗ್ಗೆ: 10 ನೇ ತರಗತಿಯ ವಿದ್ಯಾರ್ಥಿನಿಗೆ ಐ ಲವ್ ಯೂ ಎಂದು ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನನ್ನು ಬಂಧಿಸಿ ನ್ಯಾಂಯಾಂಗದ ವಶಕ್ಕೆ ನೀಡಿರುವ ಘಟನೆ ನಡೆದಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ಸರ್ಕಾರಿ ಫ್ರೌಢಶಾಲೆಯ ಸಾಸಲುಕುಂಟೆಯ ಸಹ ಶಿಕ್ಷಕ ಪಿ.ನಾಗಭೂಷಣ್ ಬಂಧಿತ ಶಿಕ್ಷಕ.
ಇವರು ಈ ಹಿಂದೆ ಮಧುಗಿರಿ ತಾಲೂಕಿನ ಕೊಡಗಾರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಈ ಶಾಲೆಯ ವಿದ್ಯಾರ್ಥಿನಿಯೊಂದಿಗೆ ಗೌರವಯುತವಾಗಿ ವರ್ತಿಸದೆ, ವಿದ್ಯಾರ್ಥಿನಿಯು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಸದರಿ ಶಿಕ್ಷಕರು ಆಮಿಷ ತೋರಿ ಕೈ ಬಳೆ ತೊಡಿಸಿ, ಕೈ ಹಿಡಿದು ಎಳೆದು ಮುತ್ತು ನೀಡಿರುತ್ತಾರೆ, ಇದಲ್ಲದೇ ಇವರು ಮಧುಗಿರಿ ತಾಲೂಕಿನ ಬಡವನಹಳ್ಳಿಯಲ್ಲಿ ವಾಸವಿದ್ದಾಗ 2 ಬಾರಿ ಬಡವನಹಳ್ಳಿಯಲ್ಲಿ ಬೇರೆ ಕಡೆ ಕರೆದು ಐ ಲವ್ ಯು ಎಂದು ಒತ್ತಾಯ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದೇ ಕಾರಣಕ್ಕೆ ಅಮಾನತಾಗಿ ನಂತರ ಪಾವಗಡ ತಾಲೂಕಿನ ಸಾಸಲುಕುಂಟೆಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದರು, ಆದರೆ ಶಿಕ್ಷಕರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ, ಇವರು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರಿಂದ ಸದರಿ ಶಿಕ್ಷಕರ ವಿರುದ್ಧ ಏನು ಕ್ರಮ ಆಗಿಲ್ಲದೆ ಇರುವುದರಿಂದ ಗ್ರಾಮದ ಕೆಲವರು ನಿನ್ನ ಮಗಳನ್ನು ಎಷ್ಟು ಹಣಕ್ಕೆ ಮಾರಿದ್ದೀಯಾ ಎಂದು ಅವಹೇಳನ ಮಾಡುತ್ತಿದ್ದಾರೆ, ಆದ್ದರಿಂದ ಸದರಿ ಶಿಕ್ಷಕರ ವಿರುದ್ಧ ಪೋಕ್ಸೊ ಕಾಯ್ದೆ 2012 ರ ಅನ್ವಯ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ತಾಯಿ ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಹಾಕಲಾಗಿದೆ.
Comments are closed.