ಭವಾನಿ ಜುವೆಲರ್ಸ್ನಲ್ಲಿ ಬೆಳ್ಳಿ ಕಳ್ಳತನ

194

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಕೆಜಿ ಟೆಂಪಲ್ ಸಿರಿವರ ರಸ್ತೆಯಲ್ಲಿರುವ ಭವಾನಿ ಜ್ಯುವೆಲ್ಲರ್ಸ್ ಅಂಡ್ ಬ್ಯಾಂಕರ್ಸ್ ನಲ್ಲಿ ಬೆಳ್ಳಿ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಗುರುವಾರ ತಡರಾತ್ರಿ ಕೆ.ಜಿ.ಟೆಂಪಲ್, ಸಿರಿವರ ರಸ್ತೆಯ ಎಸ್ ಬಿ ಐ ಬ್ಯಾಂಕ್ ಪಕ್ಕದಲ್ಲಿರುವ ಭವಾನಿ ಜುವೆಲರ್ಸ್ ಅಂಡ್ ಬ್ಯಾಂಕರ್ಸ್ ನಲ್ಲಿ ಮಧ್ಯರಾತ್ರಿ ಅಂಗಡಿಗೆ ಕಳ್ಳರು ನುಗ್ಗಿ ಕಬ್ಬಿಣದ ಕೊಲಬ್ರೇಶನ್ ಗೇಟ್ ಮತ್ತು ರೋಲಿಂಗ್ ಶೆಟರ್ ನ್ನು ಗ್ಯಾಸ್ ಕಟರ್ ನಿಂದ ಚೌಕಾಕಾರವಾಗಿ ಕಟ್ ಮಾಡಿ ಒಳ ನುಗ್ಗಿ ಅಂದಾಜು 5 ಲಕ್ಷ ಮೌಲ್ಯದ ಬೆಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿದ್ದ ಬೆಳ್ಳಿಯ ಚೈನು, ಕೈಚೈನು, ಕಾಲುಂಗುರ, ತಟ್ಟೆಗಳು, ಚೊಂಬು, ದೀಪಾಲೆ ಕಂಬ, ಕುಂಕುಮ ಬಟ್ಟಲು, ಡಾಲರ್, ಕೈ ಕಡಗ, ಬಳೆಗಳು, ಗ್ಲಾಸುಗಳು ಮತ್ತು ದೇವರ ವಿಗ್ರಹ ಕಳ್ಳತನ ಮಾಡಿದ್ದಾರೆ, ಸುಮಾರು 5 ಲಕ್ಷ ಮೌಲ್ಯದ ಬೆಳ್ಳಿಯ ವಸ್ತು ಕಳ್ಳತನವಾಗಿದೆ, ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ಡಿವೈಎಸ್ಪಿ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!