ಸಾರಿಗೆ ತೊಂದರೆ ತಪ್ಪಿಸಿ

486

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಸರ್ಕಾರ ಹಾಗೂ ಸಾರಿಗೆ ನೌಕರರ ಜಗಳದಲ್ಲಿ ಬಡ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ, ಕೊವಿಡ್ನಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಹುತೇಕ ಸಾರ್ವಜನಿಕರಿಗೆ ಸಾರಿಗೆ ಮುಷ್ಕರ ನೋವು ತಂದಿದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಮಾದಿಗ ದಂಡೋರ ಜಿಲ್ಲಾ ಕಾರ್ಯದರ್ಶಿ ಜೆ.ಸಿ.ಪುರ ಗೋವಿಂದರಾಜ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಕೊರೊನಾದಿಂದ ಕೆಲಸವಿಲ್ಲದೆ ಪರಿತಪಿಸಿದ ಜನರಿಗೆ ಮುಷ್ಕರ ಗಾಯದ ಮೇಲೆ ಬರೆ ಎಳೆದಂತಾಗಿದೆ, ದಿನಗೂಲಿ ಮಾಡಿಕೊಂಡು ಒಪ್ಪತ್ತಿನ ಊಟ ಮಾಡಲು ದೂರದ ಊರುಗಳಿಗೆ ಹೋಗುವ ಜನರಿಗೆ ಪ್ರಯಾಣಿಸಲು ದುಪ್ಪಟ್ಟು ಹಣ ನೀಡುವಂತಾಗಿದೆ, ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗಿದ್ದು ತುಮಕೂರು ತಿಪಟೂರು ಸೇರಿದಂತೆ ದೂರದ ಊರುಗಳಿಗೆ ಹೋಗಲು ಬಸ್ ಇಲ್ಲದಂತಾಗಿದೆ, ಶಾಲೆಗಳಿಗೆ ಮಕ್ಕಳು ಹೇಗೆ ಬರಬೇಕು, ಅಗತ್ಯ ಸೌಕರ್ಯವಾಗಿರುವ ಸಾರಿಗೆ ವ್ಯವಸ್ಥೆಯಲ್ಲಿ ಆಗಿರುವ ತೊಂದರೆಯಿಂದ ಹಲವರಿಗೆ ತೊಂದರೆಯಾಗುತ್ತಿದೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾದ ನಡುವೆಯೂ ಪ್ರಯಾಣಿಕರು ಯಾವುದೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿಲ್ಲ, ಇದರಿಂದ ಮುಂದಿನ ದಿನಗಳಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ, ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಕೂಡಲೇ ಸಾರಿಗೆ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!