ಅಂತ್ಯ ಸಂಸ್ಕಾರಕ್ಕೆ ಜಮೀನು ವಿವಾದ ಅಡ್ಡಿ

ಪೊಲೀಸರ ಮಧ್ಯ ಪ್ರವೇಶದಿಂದ ಅಂತ್ಯಸಂಸ್ಕಾರ

125

Get real time updates directly on you device, subscribe now.


ಕುಣಿಗಲ್: ಜಮೀನು ವಿವಾದ ಅಂತ್ಯಸಂಸ್ಕಾರಕ್ಕೆ ಅಡ್ಡಿಯಾಗಿದ್ದು ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದ ಅಂತ್ಯ ಸಂಸ್ಕಾರ ಸುಸೂತ್ರವಾಗಿ ನೆರವೇರಿದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ 17ನೇ ವಾರ್ಡ್ ಪ್ರದೇಶಕ್ಕೆ ಬರುವ ಮಿಷನ್ ಕಾಂಪೌಂಡ್ ನ ಸರ್ವೇ ನಂ.5ರ 9.10 ಎಕರೆ ಜಮೀನು ವಿವಾದ ಇದ್ದು, ಸದರಿ ಜಮೀನಿನಲ್ಲಿ ಸಿಎಸ್ ಐ ಚರ್ಚ್, ಕ್ರಿಸ್ತ ಕೃಪಾಲಯ ಇದೆ, ಚರ್ಚ್ ಸಭಾದ ನೋಂದಾಯಿತ ಸದಸ್ಯೆ ಸತ್ಯ ಪ್ರೇಮಕುಮಾರಿ (85) ಶುಕ್ರವಾರ ನಿಧನರಾಗಿದ್ದು, ಸದರಿ ಸರ್ವೆ ನಂಬರಲ್ಲೆ ಚರ್ಚ್ಗೆ ಸೇರಿದ ಸ್ಮಶಾನ ಇದೆ, ಜಮೀನು ವಿವಾದದಿಂದಾಗಿ ವ್ಯಕ್ತಿಯೊಬ್ಬರು ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿ ಗುಂಡಿ ತೋಡಿ ಬೇಲಿ ನಿರ್ಮಿಸಿದ್ದರು, ಮೃತರ ಅಂತ್ಯಕ್ರಿಯೆಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಚರ್ಚ್ನ ಕಾರ್ಯದರ್ಶಿ ಜೇಮ್ ಸ್, ಚರ್ಚ್ನ ತುಮಕೂರು ಕ್ಷೇತ್ರಾಧ್ಯಕ್ಷ ರೆ.ಮನೋಜ್ ಕುಮಾರ್, ಕುಣಿಗಲ್ ಮುಖ್ಯಸ್ಥ ರೆ.ಸುಧೀರ್, ಸ್ಥಳೀಯ ಪೊಲೀಸರು ಗಮನಕ್ಕೆ ತಂದು ಮೃತ ದೇಹದೊಂದಿಗೆ ಧರಣಿಗೆ ಮುಂದಾದರು.

ಈ ವೇಳೆ ಮಾತನಾಡಿದ ಜೇಮ್ ಸ್, ಜಮೀನು 180 ವರ್ಷದಿಂದಲೂ ಪಾದ್ರಿ ಸಾಹೇಬರ ಬಂಗ್ಲೆ ಹೆಸರಲ್ಲಿದ್ದು ಮಾಲೀಕರಾಗಿ ಫಾದರ್ ಸ್ವಾಮಿ ಇದ್ದಾರೆ, ಈ ಬಗ್ಗೆ ಅಧಿಕೃತ ದಾಖಲೆ ಇದೆ, ಆದರೆ ಕೆಲವರು ಜಮೀನು ನಮ್ಮದೆಂದು ಈ ರೀತಿ ನಡೆದುಕೊಳ್ಳುತ್ತಿದ್ದಾರೆ, ನಾವು ನ್ಯಾಯಾಲಯ ಮೆಟ್ಟಿಲೇರಿದ್ದೇವೆ, ನಾವು ಶಾಂತಿ ಪ್ರಿಯರಾಗಿದ್ದು ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ ಎಂದರು.

ಸ್ಥಳಕ್ಕಾಗಮಿಸಿದ ಪೊಲೀಸರು ಸ್ಮಶಾನಕ್ಕೆ ಹೋಗಲು ವ್ಯವಸ್ಥೆಗೊಳಿಸಿ ಅಂತ್ಯ ಸಂಸ್ಕಾರ ಆಗುವವರೆಗೂ ಸ್ಥಳದಲ್ಲಿದ್ದು ಪ್ರಕರಣ ಸುಸೂತ್ರವಾಗಿ ಬಗೆಹರಿಸಿದರು, ಜಮೀನು ತಮ್ಮದೆಂದು ಪ್ರತಿಪಾದಿಸುತ್ತಿರುವ ಜಮೀನು ಮಾಲೀಕರ ವಂಶಸ್ಥ ಬರ್ಕ್ತ್, 1958 ರಿಂದಲೂ ನಮ್ಮ ಮುತ್ತಾತ ಕೋಟೆ ಖಲೀಲ್ ಉಳುಮೆ ಮಾಡುತ್ತಿದ್ದು, 1974 ರಲ್ಲಿ 9.20ಎಕರೆ ಜಮೀನು ಸರ್ಕಾರ ಸಾಗುವಳಿ ಮೂಲಕ ಮಂಜೂರು ಮಾಡಿದೆ, ನಾವೆ ಜಮೀನಿನ ಮಾಲೀಕರಾಗಿದ್ದು ಅದರಂತೆ ಜಮೀನು ಉಳುಮೆ ಮಾಡುತ್ತಿದ್ದೇವೆ, ಆದರೆ ಯಾರಿಗೂ ತೊಂದರೆ ನೀಡಿಲ್ಲ, ಅನಗತ್ಯವಾಗಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಸರಿಯಲ್ಲ, ಪ್ರಕರಣ ವಿವಿಧ ನ್ಯಾಯಾಲಯದಲ್ಲಿರುವ ಕಾರಣ ನ್ಯಾಯಾಲಯದ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ, ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದರು.

Get real time updates directly on you device, subscribe now.

Comments are closed.

error: Content is protected !!