ಪಾವಗಡ: ಪಾಮುಗೊಂಡ, ಪಾಗೊಂಡೆನ್ನುವ ಬೆಟ್ಟ ಇನ್ನು ಕೆಲವೆ ದಿನಗಳಲ್ಲಿ ನಮಗೆ ನೋಡಲು ಸಿಗುವುದಿಲ್ಲವಾ? ಹಾವಿನ ಹೆಡೆ ಆಕಾರದ ಬೆಟ್ಟದಿಂದ ಪಾವಗಡ ಹೆಸರು ಬಂದಿದೆ, ಇಂಥ ಬೆಟ್ಟದ ಬುಡದಲ್ಲೇ ಲೇಔಟ್ ಕಾಮಗಾರಿ ನಡೆಯುತ್ತಿದ್ದು, ಬೆಟ್ಟ ನಾಶವಾಗುವ ಭೀತಿ ಎದುರಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಹಿಂಭಾಗದ ಸರ್ವೆ ನಂ.144 ರಲ್ಲಿನ ಸರ್ಕಾರಿ ಜಮೀನಲ್ಲಿ ಏಕಾಏಕಿ ತಲೆ ಎತ್ತಿರುವ ಲೇಔಟ್ ಕಾಮಗಾರಿಗಾಗಿ ಬೆಟ್ಟದ ಬುಡವನ್ನೆಲ್ಲಾ ಇನ್ನಿಲ್ಲದಂತೆ ಜೆಸಿಬಿಯಿಂದ ಬಗೆದಿದ್ದಾರೆ.
ದಲಿತ ಸಂಘಟನೆಗಳ ಒಕ್ಕೂಟಗಳ ಮುಖಂಡರು ಕಾಮಗಾರಿ ತಡೆದು ತಹಶೀಲ್ದಾರ್ ಡಿ.ವರದರಾಜು ಅವರಿಗೆ ಮೊಬೈಲ್ ನಲ್ಲಿ ಮಾಹಿತಿ ತಿಳಿಸಿದರು, ತಪ್ಪಿತಸ್ಥ ಲೇಔಟ್ ಮಾಲೀಕರು ಹಾಗೂ ಕಾಂಗಾರಿ ಮಾಡುತ್ತಿರುವ ಜೆಸಿಬಿ ಮತ್ತು ಹಿಟಾಚಿ ಮತ್ತು ಲಾರಿ ಮಾಲೀಕರು ವಿರುದ್ಧ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ವರೆಗೂ ಇಲಿಂದ ಕದಲುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು, ಇದಾದ 2 ಘಂಟೆಗಳ ನಂತರ ಸ್ಥಳಕ್ಕೆ ಕಸಬಾ ಆರ್ ಐ ರಾಜಗೋಪಾಲ್ ಮತ್ತು ಪಾವಗಡದ ಗ್ರಾಮ ಆಡಳಿತಾಧಿಕಾರಿ ರಾಜೇಶ್ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.
ಈ ಬಗ್ಗೆ ದಲಿತ ಮುಖಂಡ ಎಸ್.ಹನುಮಂತರಾಯಪ್ಪ ಮಾತನಾಡಿ, ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿ ಲೇಔಟ್ ನಿರ್ಮಾಣ ಮಾಡುತ್ತಿದ್ದು, ಈ ಕೂಡಲೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಪಾವಗಡದ ಸರ್ವೇ ನಂ.144 ಕ್ಕೆ ಸೇರಿದ ಜಮೀನಾಗಿದ್ದು, ನಮ್ಮ ಪೂರ್ವಿಕರಿಗೆ ಸೇರಿದ ಜಮೀನಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ಕಾಮಗಾರಿ ಮಾಡುತ್ತಿದ್ದು, ನೀವೇಶನ ಮಾಡುತ್ತಿದ್ದು, ಈ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ನರಸಿಂಹಪ್ಪ ಎನ್ನುವರಿಗೆ ಸೇರಿದ್ದು, ಅನಧಿಕೃತವಾಗಿ ಈ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಈ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದಲಿತ ಮುಖಂಡ ಕಡಪಲಕೆರೆ ಹನುಮಂತರಾಯ, ತಮಟೆ ಸುಬ್ಬರಾಯಪ್ಪ, ಹಾಬ್ಬಂಡೆ ಗೋಪಾಲ್, ಪಳವಳ್ಳಿ ನರಸಿಂಹ ಮತ್ತಿತರ ದಲಿತ ಮಖಂಡರು ಮಾತನಾಡಿ, ಇದು ಖಾಸಗಿ ಜಮೀನ ಅಥವಾ ಸರ್ಕಾರಿ ಜಮಿನು ಎಂಬುದನ್ನು ಸರ್ವೆ ನಡೆಸಿ ಈ ಕಾಮಗಾರಿ ಕೈಗೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೇಂದು ಆಗ್ರಹಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಕಸಬಾ ಆರ್ ಐ ರಾಜಗೋಪಾಲ್ ಮತ್ತು ಪಾವಗಡದ ಗ್ರಾಮ ಆಡಳಿತಾಧಿಕಾರಿ ರಾಜೇಶ್, ಸ್ಥಳಕ್ಕಾಗಮಿಸಿ ದಲಿತ ಮುಖಂಡರ ಜೊತೆಯಲ್ಲಿ ಚರ್ಚೆ ನಡೆಸಿದರು, ಇದಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕನೆಂದು ಹೇಳಿಕೊಂಡು ರಮೇಶ್ ಎಂಬುವವರು ಆಗಮಿಸಿ ದಾಖಲೆ ತೋರಿಸಿದಾಗ ದಲಿತ ಮುಖಂಡರು ಒಪ್ಪಲಿಲ್ಲ, ನಂತರ ಕಂದಾಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರು.
ಈ ವೇಳೆ ಕಂದಾಯಾಧಿಕಾರಿ ರಾಜಗೋಪಾಲ್ ಮಾತನಾಡಿ, ಈ ಬಗ್ಗೆ ಸಂಬಂಧಿಸಿದಂತೆ ತಹಶೀಲ್ದಾರ್ ಗೆ ವರದಿ ಸಲ್ಲಿಸಿ, ಸರ್ವೆ ಇಲಾಖೆಯಿಂದ ಸರ್ವೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಟ್ಟಣದ ಡಾಬಾವೊಂದರ ಮಾಲೀಕ ತಿಪ್ಪೇಸ್ವಾಮಿ ಎನ್ನುವರು ಕಾಮಗಾರಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Comments are closed.