ತುಮಕೂರು: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಎ ಐ ಎಸ್ ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್ ಒತ್ತಾಯಿಸಿದರು.
ನಗರದ ಉಪ್ಪಾರಹಳ್ಳಿಯ ಟಿ.ಆರ್.ರೇವಣ್ಣ ಭವನದಲ್ಲಿ ಎ ಐ ಎಸ್ ಎಫ್ ಸಂಘಟನೆಯ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರಾಜ್ಯ ಶಿಕ್ಷಣ ನೀತಿ ರೂಪಿಸಿರುವ ಸರ್ಕಾರ ಎಸ್ ಇ ಪಿ ಯ ಅಧ್ಯಕ್ಷರನ್ನಾಗಿ ರಾಜ್ಯದವರನ್ನು ನೇಮಿಸಬೇಕು, ಪಠ್ಯಕ್ರಮವು ಎಲ್ಲರನ್ನು ಒಳಗೊಂಡ ಶಿಕ್ಷಣ ಜಾರಿಯಾಗಬೇಕು ಎಂದು ತಿಳಿಸಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಯುವಜನರನ್ನು ಪಾಲ್ಗೊಳ್ಳುವಂತೆ ಪ್ರೇರೆಪಿಸಲು 1936 ಆಗಸ್ಟ್ 12 ರಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಈ ದೇಶದ ಮೊಟ್ಟ ಮೊದಲ ವಿದ್ಯಾರ್ಥಿ ಸಂಘಟನೆಯಾಗಿ ಸ್ಥಾಪಿಸಲಾಯಿತು, ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳ ಆಶಯಗಳನ್ನು ಸಂಘಟನೆಯ ಸಿದ್ಧಾಂತವನ್ನಾಗಿ ಮಾಡಿಕೊಂಡು ಅಂದಿನ ಬ್ರಿಟಿಷರ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಶೋಷಣೆಯ ವಿರುದ್ಧ ಹೋರಾಡುತ್ತಾ ಧೀರೋತ್ತರ ಇತಿಹಾಸ ಹೊಂದಿದೆ, ಸ್ವಾಂತ್ರತ್ರ್ಯ ನಂತರವು ಸಮಾನ ಶಿಕ್ಷಣಕ್ಕಾಗಿ ಬಡ ಮಾಧ್ಯಮ ವರ್ಗದ ದಲಿತ, ಅಲ್ಪಸಂಖ್ಯಾತ ಹಾಗೂ ಶೋಷಿತ ವಿದ್ಯಾರ್ಥಿಗಳ ಪರವಾಗಿ ನಿರಂತರ ಹೋರಾಟ ಮಾಡುತ್ತ ದೇಶ ಕಟ್ಟುವಲ್ಲಿ ಪ್ರಯತ್ನಿಸುತ್ತಿದೆ, ನವ ಉದಾರವಾದಿ ಆರ್ಥಿಕ ನೀತಿ 90ರ ದಶಕದಲ್ಲಿ ಜಾರಿಯಾಗಿ ಈ ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಖಾಸಗೀಕರಣದತ್ತ ವಾಲಿದೆ ಎಂದು ತಿಳಿಸಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅಮ್ಜದ್ ಮಾತನಾಡಿ, ನಮ್ಮನ್ನು ಆಳುವ ಸರ್ಕಾರಗಳು ಸಾರ್ವತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳ ಹಿಂತೆಗೆದುಕೊಳ್ಳುವ ಮೂಲಕ ಬಂಡವಾಳಶಾಹಿ ಶಾಸಗಿ ಶಿಕ್ಷಣಕ್ಕೆ ಬೆಂಬಲವಾಗಿ ನಿಂತಿವೆ, ಇಂದು ಉನ್ನತ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತಿದೆ, ಶ್ರೀಮಂತರಿಗೆ ಮಾತ್ರವೇ ಉತ್ತಮ ಶಿಕ್ಷಣ ಕೈಗೆಟಕುವ ಮತ್ತು ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಳಪೆ ಮಟ್ಟದ ಅಸಮಾನ ಶೈಕ್ಷಣಿಕ ವ್ಯವಸ್ಥೆ ದೇಶದಲ್ಲಿ ಜಾರಿಯಾಗಿರುವುದು ನಮ್ಮ ಕಣ್ಣ ಮುಂದಿದೆ ಎಂದರು.
ಎಐಟಿಯುಸಿ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್ ಮಾತನಾಡಿ ಎಲ್ ಕೆ ಜಿ ಯಿಂದ ಪಿಜಿ ವರೆಗೂ ಸಂಪೂರ್ಣ ಉಚಿತ ಹಾಗೂ ವೈಜ್ಞಾನಿಕ ಶಿಕ್ಷಣಕ್ಕಾಗಿ ಉದ್ಯೋಗಾಧಾರಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ, ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಭ, ಶುಲ್ಕಗಳ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ವಿದ್ಯಾರ್ಥಿಗಳ ಮುಂದಿವೆ, ಕಟ್ಟಡ ನಿರ್ಮಾಣ ಕಾರ್ಯಾದಲ್ಲಿ ತೊಡಗಿರುವ ಕಾರ್ಮಿಕರ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸವಲತ್ತು ದೊರೆಯುತ್ತಿಲ್ಲ, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ನೀಡುವ ವಿದ್ಯಾರ್ಥಿ ವೇತನದ ಸಹಾಯ ಧನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಉಸ್ತುವಾರಿ ಡಾ.ಎ.ಜ್ಯೋತಿ, ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎ ಐ ಎಸ್ ಎಫ್ ಜಿಲ್ಲಾ ಉಸ್ತುವಾರಿ ಗೋವಿಂದರಾಜು, ಎ ಐ ಎಸ್ಎಫ್ ಐ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಗೌಡ ಮಾತನಾಡಿದರು. ಗೋವಿಂದರಾಜು, ದೊಡ್ಡತಿಮ್ಮಯ್ಯ, ರುದ್ರಪ್ಪ, ಬೋಜರಾಜು, ಅಭಿಲಾಷ್, ದೀಪಿಕ, ಎ ಐ ಎಸ್ ಎಫ್ ಜಿಲ್ಲಾ ಸಂಚಾಲಕ ಭಾರ್ಗವ್, ರಾಜ್ಯ ಸಹಕಾರ್ಯದರ್ಶಿ ತೇಜಸ್ವಿನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಲವಹಳ್ಳಿಕಾರ್ ಹಾಜರಿದ್ದರು.
Comments are closed.