ಶಿರಾ: ಮಕ್ಕಳು ಪರಿಣಾಮಕಾರಿಯಾಗಿ ಕಲಿಕೆಯಲು ಅವರು ಕಲಿಯುವ ವಾತಾವರಣವೂ ಬಹಳ ಮುಖ್ಯವಾಗಿರುತ್ತದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾಯಕವನ್ನು ಸಂಘಸಂಸ್ಥೆಗಳು ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ರೋಟರಿ ಬೆಂಗಳೂರು ರಾಜಾಜಿನಗರ ಕ್ಲಬ್ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ರೋಟರಿ ಬೆಂಗಳೂರು ರಾಜಾಜಿನಗರ ಕ್ಲಬ್ನ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಅಮಲಗೊಂದಿಯ ಚಿಗುರು ಯುವಜನ ಸಂಘ, ರೋಟರಿ ಬೆಂಗಳೂರು ಹಾಗೂ ಬೊಮ್ಮಲಿಂಗೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಚಿಗುರು ಸಂಪನ್ಮೂಲ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡತನ ಕುಟುಂಬಗಳಿಂದ ಕೂಡಿದ ಮಕ್ಕಳಲ್ಲಿ ಸಾಧನೆ ಮಾಡುವ ಸಾಕಷ್ಟು ಸಾಮರ್ಥ್ಯವಿರುತ್ತದೆ, ಆ ಮಕ್ಕಳಿಗೆ ನಾವುಗಳೆಲ್ಲಾ ಉತ್ತೇಜನ ನೀಡುವ ಮೂಲಕ ಅವರ ಸಾಧನೆಗೆ ಮೆಟ್ಟಿಲುಗಳಾಗಿ ನಿಲ್ಲಬೇಕಿದೆ, ಅದರ ಭಾಗವಾಗಿ ನಮ್ಮ ರೋಟರಿಯಿಂದ ಶಾಲೆಗೆ ಬಣ್ಣ ಬಳಿಯಲು ಮತ್ತು ಚಿತ್ರ ಬಿಡಿಸಲು ಕೈಲಾದ ಸಹಕಾರ ನೀಡಿದ್ದೇವೆ, ಈ ಸಹಕಾರವನ್ನು ಶಾಲೆಗೆ ಮುಂದಿನ ದಿನಗಳಲ್ಲೂ ಒದಗಿಸುವ ಪ್ರಯತ್ನವನ್ನು ಮಾಡುತ್ತೇವೆ, ಮಕ್ಕಳ ಸಮಗ್ರ ಕಲಿಕೆಗೆ ನಮ್ಮ ರೋಟರಿಯ ಸಂಪೂರ್ಣ ಸಹಕಾರವಿರುತ್ತದೆ ಎಂದರು.
ಯುವಜನ ಕಾರ್ಯಕರ್ತ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಶಾಲೆಯ ಭೌತಿಕ ಅಭಿವೃದ್ಧಿಯು ಮಕ್ಕಳ ಬೌದ್ಧಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ, ಶಾಲೆಗೆ ಬಣ್ಣ ಬಳಿಯುವುದೆಂದರೆ ಮಕ್ಕಳ ಭವಿಷ್ಯದ ಬದುಕನ್ನು ಸಿಂಗರಿಸಿದಂತೆಯೇ ಸರಿ, ಹಾಗಾಗಿ ಶಾಲೆಯ ಭೌತಿಕ ವಾತಾವರಣದ ಜೊತೆ ಮಕ್ಕಳಿಗೆ ಎಲ್ಲಾ ಆಯಾಮಗಳಲ್ಲಿ ಶಿಕ್ಷಣ ಒದಗಿಸಲು ಚಿಗುರು ಯುವಜನ ಸಂಘವು ಈ ಶಾಲೆಯಲ್ಲಿ ಚಿಗುರು ಸಂಪನ್ಮೂಲ ಕೇಂದ್ರ ಸ್ಥಾಪಿಸುವ ಮೂಲಕ ಪ್ರಯತ್ನ ಮಾಡುತ್ತಿದೆ, ಈ ಸಂಘವು ಪರಿಸರ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ವಯಂ ಸೇವೆಯಿಂದ ಹಲವು ವರ್ಷಗಳಿಂದ ಕಾರ್ಯ ಮಾಡುತ್ತಾ ಬರುತ್ತಿದೆ, ಅದರ ಭಾಗವಾಗಿ ಗ್ರಾಮೀಣ ಭಾಗದ ಯುವಜನರು ತಮ್ಮ ಗ್ರಾಮದ ಶಾಲೆಯ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.
ರೋಟರಿ ಬೆಂಗಳೂರು ರಾಜಾಜಿನಗರ ಕ್ಲಬ್ನ ಸಲಹೆಗಾರ ಶೇಖರ್ಬಾಬು ಮಾತನಾಡಿ, ರೋಟರಿ ಕ್ಲಬ್ 1905 ರಲ್ಲಿ ಚಿಕಾಗೋದಲ್ಲಿ ಸ್ಥಾಪನೆಯಾಗಿ ಇಂದು ಸಾಮಾಜಿಕ ಕಾರ್ಯಗಳಲ್ಲಿ ಸರ್ವ ವ್ಯಾಪ್ತಿಯಾಗಿ ತನ್ನ ಸೇವೆ ಸಲ್ಲಿಸುತ್ತಿದೆ, ಸಮುದಾಯ ಸೇವೆ, ಆರೋಗ್ಯ ಸೇವೆ, ಶಿಕ್ಷಣ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ, ದೇಶದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಅಡಿಪಾಯವಾಗಿದ್ದು, ಅಂತಹ ಶಿಕ್ಷಣ ಕ್ಷೇತ್ರಕ್ಕೆ ಸಮಾಜದ ಪ್ರತಿಯೊಬ್ಬರು ಕೊಡುಗೆ ನೀಡುವುದು ಬಹುಮುಖ್ಯ ಜವಬ್ದಾರಿಯಾಗಿದೆ, ಜೊತೆಗೆ ಶಿಕ್ಷಣ ಕಲಿಯುತ್ತಿರುವ ಮಕ್ಕಳು ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬಹುದಾಗಿದೆ, ಇದರೊಂದಿಗೆ ತಾನು ಬದುಕುವ ಸಮಾಜದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಧ್ಯಯ ಮರಡಿರಂಗಯ್ಯ ಮಾತನಾಡಿ, ನಮ್ಮ ಶಾಲೆ ಈ ಹಿಂದೆ ಬಹಳ ಸವಾಲುಗಳಿಂದ ನಡೆಸಿಕೊಂಡು ಬಂದಿದ್ದೇವೆ, ಪ್ರಸ್ತುತವಾಗಿ ಮಕ್ಕಳ ಕಲಿಕೆಗೆ ಮೂಲಭೂತ ಸೌಲಭ್ಯ ಒದಗಿಸಲು ಅನೇಕರು ಸಹಕರಿಸುತ್ತಿದ್ದಾರೆ, ರೋಟರಿ ರಾಜಾಜಿನಗರ ಕ್ಲಬ್ನಿಂದ ಶಾಲೆಗೆ ಒಂದು ಹೊಸ ರೂಪ ನೀಡಿರುವುದು ನಮ್ಮೆಲ್ಲರಿಗೆ ಸಂತಸದ ವಿಷಯವಾಗಿದೆ, ಗ್ರಾಮೀಣ ಭಾಗದ ಶಿಕ್ಷಣಕ್ಕೆ ಹೊತ್ತು ನೀಡಿದ ಕ್ಲಬ್ಗೆ ಮತ್ತು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದ ಚಿಗುರು ಯುವಜನ ಸಂಘಕ್ಕೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನಿಂದ ಮಕ್ಕಳಿಗೆ ನಿಗಂಟುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ ಅಮಲಗೊಂದಿ, ಶಾಲೆಯ ಶಿಕ್ಷಕ ವಸಂತಕುಮಾರ್, ಶಾಲೆಯ ಭೂದಾನಿಗಳಾದ ವೀರಬೊಮ್ಮಯ್ಯ, ಚಿಗುರು ಯುವಜನ ಸಂಘದ ಕಾರ್ಯದರ್ಶಿ ಮಂಜುನಾಥ್ ಆಲದಮರ, ಸಂಘದ ಸದಸ್ಯರಾದ ಮಧು, ಅಂಬಿಕಾ, ಪ್ರಜ್ವಲ್, ತಿಮ್ಮೇಗೌಡ, ರೋಟರಿ ಬೆಂಗಳೂರು ರಾಜಾಜಿನಗರ ಕ್ಲಬ್ನ ರಾಮಕೃಷ್ಣ, ನಾರಾಯಣ, ಮಾಲಾಮೂರ್ತಿ, ಶಿರಾ ಯುವಜನ ಒಕ್ಕೂಟದ ಸದಸ್ಯರು, ಶಾಲೆಯ ಶಿಕ್ಷಕರು, ಶಾಲೆಯ ಮಕ್ಕಳು ಹಾಜರಿದ್ದರು.
ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಮುಖ್ಯ: ನರಸಿಂಹಮೂರ್ತಿ
Get real time updates directly on you device, subscribe now.
Prev Post
Comments are closed.