ಕಳ್ಳತನದ ವೇಳೆ ಸಿಕ್ಕಿಬಿದ್ದ ಕಳ್ಳ

188

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಕೆ.ಜಿ.ಟೆಂಪಲ್ ನ ಲಕ್ಷ್ಮಿ ಚಿನ್ನದಂಗಡಿಯಲ್ಲಿ ಸೋಮವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಚಿನ್ನದ ಅಂಗಡಿಯ ಗೋಡೆ ಕೊರೆದು ಒಳ ನುಗ್ಗಲು ಯತ್ನಿಸಿ ವಿಫಲರಾಗಿದ್ದಾರೆ, ನಂತರ ಗ್ಯಾಸ್ ಕಟರ್ನಿಂದ ಬೀಗ ಮುರಿದು ಒಳ ನುಗ್ಗುವ ಸಂದರ್ಭದಲ್ಲಿ ಅಂಗಡಿಯಲ್ಲಿ ಅಳವಡಿಸಿದ್ದ ಸೆನ್ಸಾರ್ ಶಬ್ದದಿಂದ ಸ್ಥಳೀಯರಿಗೆ ಎಚ್ಚರವಾಗಿದೆ, ಕೂಡಲೇ ಅಂಗಡಿಯ ಬಳಿ ಬಂದಿದ್ದು ಸ್ಥಳೀಯರನ್ನು ಕಂಡ ಕಳ್ಳರು ಬುಲೆರೊ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ, ಸ್ಥಳೀಯರು ವಾಹನ ಬೆನ್ನಟ್ಟಿ ಒಬ್ಬ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ, ಜೊತೆಯಲ್ಲಿದ್ದ ಇಬ್ಬರು ತಪ್ಪಿಸಿಕೊಂಡಿದ್ದಾರೆ, ಕಳೆದ ಮೂರು ದಿನಗಳ ಹಿಂದೆ ಮತ್ತೊಂದು ಚಿನ್ನದಂಡಗಿಯಲ್ಲಿ ಕಳ್ಳತನವಾಗಿತ್ತು.

Get real time updates directly on you device, subscribe now.

Comments are closed.

error: Content is protected !!