‘ಶಾಲಿನಿ ಪುರಸ್ಕಾರ’ ಕ್ಕೆ ಅರ್ಜಿ

88

Get real time updates directly on you device, subscribe now.


ತುಮಕೂರು: ತುಮಕೂರು ವಾರ್ತೆ ಪತ್ರಿಕೆಯು ಎಸ್.ಆರ್.ದೇವಪ್ರಕಾಶ್ ಸಹಯೋಗದೊಂದಿಗೆ ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದೆ.

ಈ ಬಾರಿ 2022 ನೇ ಸಾಲಿನಲ್ಲಿ ಚುಟುಕು ಸಾಹಿತ್ಯ ಬರೆದ ಲೇಖಕರಿಬ್ಬರಿಗೆ ‘ಶಾಲಿನಿ’ ಪುರಸ್ಕಾರ ನೀಡಿ ಗೌರವಿಸಲಿದೆ. ಪ್ರಶಸ್ತಿಯು 2 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ನೆನಪಿನ ಕಾಣಿಕೆಯೊಂದಿಗೆ ಇಬ್ಬರು ವಿಜೇತರಿಗೆ ಗೌರವಿಸಲಾಗುವುದು.

ಅರ್ಹ ಚುಟುಕು ಸಾಹಿತಿಗಳು ತಾವು ಪ್ರಕಟಿಸಿದ ಕೃತಿ ಮತ್ತು ಇತರೆ ವಿವರಗಳೊಂದಿಗೆ ನವೆಂಬರ್ 24ರೊಳಗೆ ‘ಶಾಲಿನಿ ಪುರಸ್ಕಾರ’, ತುಮಕೂರು ವಾರ್ತೆ, ದೇವಿಕಾ ನಿಲಯ, 1ನೇ ಮಹಡಿ, 6ನೇ ಕ್ರಾಸ್, ಅಶೋಕ ನಗರ, ತುಮಕೂರು-03 ಮೊ.9844076980 ಸಂಪರ್ಕಿಸಬಹುದಾಗಿದೆ.

Get real time updates directly on you device, subscribe now.

Comments are closed.

error: Content is protected !!