ಗುಬ್ಬಿ: ಸುಮಾರು ವರ್ಷಗಳಿಂದ ಶಾಂತವಾಗಿದ್ದ ಸಿ.ಎಸ್.ಪುರ ಮೂರು ವರ್ಷದಿಂದ ಆಶಾಂತಿಯ ವಾತಾವರಣ ಸೃಷ್ಟಿಗೆ ಈಗಿನ ಶಾಸಕರೇ ಕಾರಣ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಸಿ.ಎಸ್.ಪುರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜುಗಲ್ ಬಂದಿ ಪ್ರತಿಭಟನೆ ನಡೆಯಿತು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಎರಡು ಮೂರು ದಿನದ ಹಿಂದೆ ಇಡಗೂರು ಗ್ರಾಮದಲ್ಲಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು, ನಂತರ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದರು, ಇದರ ಮಧ್ಯದಲ್ಲಿ ಆನಂದ್ ಎಂಬ ನಮ್ಮ ಕಾರ್ಯಕರ್ತನ ಮೇಲೆ ಕೆಲವು ಪ್ರೊಫೆಶನಲ್ ಕಿಲ್ಲರ್ಸ್ ಚಾಕುವಿನಿಂದ ತಿವಿದಿದ್ದಾರೆ, ಅವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ, ಇವರನ್ನು ಬಂಧಿಸಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು, ಆದರೆ ಪೊಲೀಸರು ಅವರನ್ನು ಬಂಧಿಸಲಿಲ್ಲ, ಇದರ ನಡುವೆ ಶಾಸಕ ಮಸಾಲಾ ಜಯರಾಂ ಪುತ್ರನ ಮೇಲೆ ನಮ್ಮ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳುವ ಶಾಸಕ ಜಯರಾಂ ಹಿಂದಿನ ಕೃತ್ಯದ ವಿಚಾರದ ದಾರಿ ತಪ್ಪಿಸಲು ಬೇರೊಂದು ಕಥೆ ಸೃಷ್ಟಿ ಮಾಡಿ ನನ್ನ ಹೆಸರು ತಳುಕು ಹಾಕಲು ಮುಂದಾಗಿದ್ದಾರೆ, ತನ್ನ ಮಗನನ್ನು ಬಳಕೆ ಮಾಡಿಕೊಂಡು ಜೆಡಿಎಸ್ ಕಾರ್ಯಕರ್ತರು ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳುತ್ತಾರೆ, ನಮ್ಮ ಜೆಡಿಎಸ್ ಕಾರ್ಯಕರ್ತರನ್ನು ಹೊಡೆದಿರುವುದೆ ಶಾಸಕ ಹಾಗೂ ಅವರ ಕಡೆಯವರು, ಮಚ್ಚು, ಲಾಂಗು ಬಳಕೆ ಮಾಡಿರುವುದು ಅವರ ಕಡೆಯವರೆ ಹೊರತು ನಮ್ಮ ಕಡೆಯವರಲ್ಲ, ಹಾಗಾಗಿ ನಮ್ಮ ಕಾರ್ಯಕರ್ತ ಕೃಷ್ಣ ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಶಾಸಕ ಜಯಾರಾಂ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡಲಾಗಿದೆ, ಆದರು ಅವರನ್ನು ಅರೆಸ್ಟ್ ಮಾಡದೆ ಅವರನ್ನು ಓಡಾಡಲು ಪೊಲೀಸ್ ಇಲಾಖೆ ಬಿಟ್ಟಿದ್ದು ಅದರ ವಿರುದ್ಧ ಧರಣಿ ಮಾಡಲಾಗುತ್ತಿದೆ ಎಂದರು.
ಇನ್ನೊಂದು ಬದಿಯಲ್ಲಿ ಶಾಸಕ ಮಸಾಲೆ ಜಯರಾಂ ಮಾತನಾಡಿ, ರೌಡಿಸಂ ಮಾಡಿಯೇ ಕೃಷ್ಣಪ್ಪ ತಾಲೂಕಿನ ಹಲವು ಕಡೆ ಒದೆ ತಿಂದಿದ್ದರು, ಇನ್ನೂ ಅವನಿಗೆ ಬುದ್ಧಿ ಬಂದಿಲ್ಲ, ರಾಜಕೀಯ ಮಾಡಬೇಕು ಎಂದರೆ ನೇರವಾಗಿ ಮಾಡಲಿ, ಅದನ್ನು ಬಿಟ್ಟು ಏನು ತಿಳಿಯದ ನನ್ನ ಮಗನ ಮೇಲೆ ಹಲ್ಲೆ ಮಾಡುವುದಕ್ಕೆ ಇವನ ಚೇಲವನ್ನು ಬಿಟ್ಟಿರುವುದು ನೋಡಿದರೆ ನಾಚಿಕೆಯಾಗಬೇಕು, ಮೀರ್ಸಾಧಿಕ್ ರಾಜಕಾರಣ ಬಿಟ್ಟು ನೇರವಾಗಿ ರಾಜಕೀಯ ಮಾಡಲಿ ಅದು ಬಿಟ್ಟು ಈ ರೀತಿಯ ರೌಡಿಸಂ ರಾಜಕೀಯ ಮಾಡಬಾರದು, ನಿಜವಾದ ಗುಂಡ ಯಾರು ಎಂಬುದು ಕ್ಷೇತ್ರದ ಜನರಿಗೆ ಗೊತ್ತಾದ ಮೇಲೆಯೇ ನನ್ನನ್ನು ಆಯ್ಕೆ ಮಾಡಿದ್ದಾರೆ, ಸೋಲಿನಿಂದ ಕಂಗೆಟ್ಟ ಮಾಜಿ ಶಾಸಕ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗುಂಡತನದ ವಾಮಾಮಾರ್ಗ ಅನುಸರಿಸುತ್ತಿದ್ದಾನೆ, ಇದು ಇಲ್ಲಿ ನಡೆಯಲ್ಲ, ಜನ ನಮ್ಮ ಜೊತೆ ಇದ್ದಾರೆ ಎಂಬುದನ್ನು ಅವನು ತಿಳಿಯಲಿ ಎಂದು ತೀವ್ರ ವಾಗ್ಧಾಳಿ ನಡೆಸಿದರು.
ವಿಎಸ್ಎಸ್ಎನ್ ಅಧ್ಯಕ್ಷ ನಾಗರಾಜು ಮಾತನಾಡಿ, ಶಾಸಕ ಮಸಾಲ ಜಯರಾಮ್ ಅವರ ಪುತ್ರ ತೇಜು ಸ್ವಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಹೆಬ್ಬೂರಿನಿಂದ ಬರುವ ಸಂದರ್ಭದಲ್ಲಿ ಕೃಷ್ಣಪ್ಪ ಅವರ ಬೆಂಬಲಿಗರು ಮಚ್ಚು, ಲಾಂಗ್ನಿಂದ ಹಲ್ಲೆ ಮಾಡಲು ಮುಂದಾದ ಸಂದರ್ಭದಲ್ಲಿ ತೇಜು ವೀಡಿಯೋ ಮಾಡಿ ಗ್ರಾಮಸ್ಥರಿಗೆ ಕಳುಹಿಸಿ ಕೊಟ್ಟಿದ್ದರು, ಆ ಸಮಯದಲ್ಲಿ ಇದನ್ನು ಕಂಡಂತಹ ಗ್ರಾಮಸ್ಥರು ಕಿಡಿಗೇಡಿಗಳ ಕಾರನ್ನು ತಡೆದು ತೇಜುವನ್ನು ರಕ್ಷಿಸಿ ಕಿಡಿಗೇಡಿಗಳಿಗೆ ಬಡಿದಿರಬಹುದು, ಅಂತಹ ಕಿಡಿಗೇಡಿಗಳನ್ನು ಪೂಜೆ ಮಾಡಬೇಕಿತ್ತಾ, ಅಂತಹವರ ಪರವಾಗಿ ನಿಲ್ಲುವ ಮಾಜಿ ಶಾಸಕ ಕೃಷ್ಣಪ್ಪ ಎಂತಹ ಸಂಸ್ಕೃತಿ ಹೊಂದಿದ್ದಾರೆ ಎಂಬುದನ್ನು ಅರ್ಥ ಮಾಡಿಕೋಳ್ಳಬೇಕಿದೆ, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಶಾಸಕರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡುವ ಮಟ್ಟಕ್ಕೆ ಕೀಳು ರಾಜಕರಣ ಮಾಡುತ್ತಿದ್ದಾರೆ, ಮಕ್ಕಳನ್ನು ಬಲಿ ಕೊಟ್ಟು ರಾಜಕೀಯ ಮಾಡಬೇಕು ಎಂಬ ಕೆಟ್ಟ ಮನಸು ನಮಗ್ಯಾರಿಗೂ ಇಲ್ಲ, ಇವರ ರೌಡಿ ರಾಜಕೀಯವನ್ನು ಬಿಡಬೇಕು, ನಮ್ಮ ಶಾಸಕರು ಸಾಕಷ್ಟು ಶಾಂತಿಯಿಂದ ಇದ್ದು ಪೊಲೀಸರಿಗೆ ಮಾಹಿತಿ ನೀಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ವಂಶಿಕೃಷ್ಣ ಮಾತನಾಡಿ, ಶಾಸಕ ಹಾಗೂ ಮಗನ ಮೇಲೆ ಕೇಸು ದಾಖಲು ಮಾಡಲಾಗಿದೆ, ಇಬ್ಬರ ಕಡೆಯಿಂದಲೂ ಇಬ್ಬರನ್ನು ಬಂಧಿಸಿದ್ದು ಇದಕ್ಕೆ ಸಂಬಂಧ ಪಟ್ಟಂತೆ ಇನ್ನೂ ಸಾಕ್ಷಿ ಕಲೆ ಹಾಕಲಾಗುತ್ತಿದೆ, ನಂತರ ಕ್ರಮ ಕೈಗೊಳ್ಳಲಾಗುತ್ತದೆ, ಪ್ರತಿಭಟನೆ ಮಾಡಬಾರದು ಎಂದು ಇಬ್ಬರಿಗೂ ಹೇಳಲಾಗಿತ್ತು, ಆದರೂ ಪ್ರತಿಭಟನೆ ಮಾಡಲು ಬಂದಿದ್ದರು, 144 ಇರುವುದರಿಂದ ಮಾಡುವ ಆಗಿಲ್ಲ ಎಂದು ತಿಳಿಸಿದ ಮೇಲೆ ಎರಡು ಕಡೆಯವರು ಮನವಿ ಕೊಟ್ಟು ತೆರಳಿದ್ದಾರೆ, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಸಿ.ಎಸ್.ಪುರ ಗ್ರಾಮದ ವೃತ್ತದಲ್ಲಿ ಪೊಲೀಸರು ಸುತ್ತುವರಿದ ಪರಿಣಾಮ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತ ರೀತಿಯಿಂದ ಪ್ರತಿಭಟನೆ ಕೈ ಬಿಡಲಾಯಿತು.
ಸಿ.ಎಸ್.ಪುರದಲ್ಲಿ ಮಾಜಿ, ಹಾಲಿ ಶಾಸಕರ ಫೈಟ್- ಪ್ರತಿಭಟನೆ ನಡೆಸಿ ಪರಸ್ಪರ ವಾಗ್ದಾಳಿ
ಎಂಟಿಕೆ ವಿರುದ್ಧ ಖಾರವಾದ ಮಸಾಲೆ
Get real time updates directly on you device, subscribe now.
Comments are closed.