ಶೀಘ್ರ ಗೋಶಾಲೆ ಪ್ರಾರಂಭ ಮಾಡ್ತೇವೆ

ಹಿಂದೆ ತೆರೆದಿದ್ದ ಜಾಗದಲ್ಲೇ ಮತ್ತೆ ಆರಂಭ: ಸಚಿವ ರಾಜಣ್ಣ

126

Get real time updates directly on you device, subscribe now.


ಮಧುಗಿರಿ: ಕಳೆದ ಬಾರಿ ಕ್ಷೇತ್ರದಲ್ಲಿ ತೆರೆಯಲಾಗಿದ್ದ ಹೋಬಳಿಯ ಸ್ಥಳಗಳಲ್ಲಿಯೇ ಗೋಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಹಕಾರ ಖಾತೆ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಎನ್ ರಾಜಣ್ಣ ತಿಳಿಸಿದ್ದಾರೆ.
ಪಟ್ಟಣದ ತಾಪಂ ಕಚೇರಿಯ ಸಭಾಂಗಣಾದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದೊಡ್ಡೇರಿ ಹೋಬಳಿಯ ಬಡವನಹಳ್ಳಿ, ಕೊಡಿಗೇನಹಳ್ಳಿಯ ದೇವರ ತೋಪು, ಮಿಡಗೇಶಿಯ ಬೇಡತ್ತೂರು, ಐಡಿಹಳ್ಳಿಯ ಚಿಕ್ಕದಾಳವಟ್ಟ, ಕಸಬಾ ವ್ಯಾಪ್ತಿಯ ಮಲೆರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗೋಶಾಲೆ ತೆರೆಯಲಾಗುವುದು ಎಂದರು.

ಟಾಸ್ಕ್ ಫೋರ್ಸ್ ಮೂಲಕ 25 ಲಕ್ಷ ಹಣ ಬಿಡುಗಡೆಯಾಗಲಿದ್ದು ಅನುದಾನವನ್ನು ಕುಡಿಯುವ ಯೋಜನೆಗೆ ಬಳಕೆ ಮಾಡಿಕೊಳ್ಳಿ, ಗ್ರಾಮಗಳಲ್ಲಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು, ಚರಂಡಿಗಳಲ್ಲಿ ಹಾದು ಹೋಗಿರುವ ಮಾರ್ಗಗಳಲ್ಲಿ ಹೊಡೆದು ಹೋಗಿರುವ ಪೈಪ್ಲೈನ್ ಗಳನ್ನು ಸರಿಪಡಿಸುವುದು ವಾಟರ್ ಮ್ಯಾನ್ ಗಳು ಹಾಗೂ ಪಿಡಿಓಗಳ ಕರ್ತವ್ಯವಾಗಿದೆ ಎಂದರು.

ಪರೀಕ್ಷಾ ಸಮಯ ಹತ್ತಿರವಾಗುತ್ತಿರುವುದರಿಂದ ವಿದ್ಯುತ್ ವ್ಯತ್ಯವಾಗದಂತೆ ಕ್ರಮ ಕೈಗೊಳ್ಳಬೇಕು, ನಿರಂತರ ಜ್ಯೋತಿ ಯೋಜನೆಯ ಬಗ್ಗೆ ದೂರು ಬಾರದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ವಿದ್ಯುತ್ ಅವಶ್ಯವಿದ್ದರೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ ಮಂಜೂರು ಮಾಡಿಸಿ ಕೊಡಲಾಗುವುದು, ನೀರಾವರಿ ಸೌಕರ್ಯ ಹೊಂದಿರುವ ಗ್ರಾಪಂ ವ್ಯಾಪ್ತಿಯಲ್ಲಿನ 100 ಜನರಿಗೆ ಮೇವು ಬೀಜಗಳನ್ನು ವಿತರಿಸಲಾಗುತ್ತಿದ್ದು ಮೇವು ಬೆಳೆಯುವುದರ ಮೂಲಕ ಬರಗಾಲವನ್ನು ಸಮಗ್ರ ಎದುರಿಸುವಂತೆ ಸೂಚಿಸಿದರು.

ಹಾಸನ ನಗರ ಸಭೆ, ಅರಸೀಕೆರೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ವಿಚಾರವು ಸುಪ್ರೀಂ ಕೋರ್ಟಿನಲ್ಲಿದ್ದು ತೀರ್ಪಿನ ನಂತರ ಮುಂದಿನ ದಿನಗಳಲ್ಲಿ ಮೀಸಲಾತಿ ನಿಗದಿಯಾಗಲಿದ್ದು ಸದ್ಯಕ್ಕೆ ಆ ಸ್ಥಾನಗಳ ಚುನಾವಣೆ ನಡೆಯುವುದು ಅನುಮಾನವಾಗಿದ್ದು ಆಡಳಿತಾಧಿಕಾರಿಗಳಾದ ನೀವೆ ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸಿ ಎಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಗ್ಬತ್ ಉಲ್ಲಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಣ್, ಯೋಜನಾಧಿಕಾರಿ ಮಧುಸೂದನ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!