ಕೊಂಡವಾಡಿ ಚಂದ್ರಶೇಖರ್ ಸದಸ್ಯತ್ವ ರದ್ದು

179

Get real time updates directly on you device, subscribe now.


ಮಧುಗಿರಿ: ತುಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅವರ ಕೊಂಡವಾಡಿ ಹಾಲು ಉತ್ಪಾದಕರ ಸದಸ್ಯತ್ವ ರದ್ದುಗೊಳಿಸಿ ಸಂಘದ ಅದ್ಯಕ್ಷ, ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಿ ಸಹಕಾರ ಸಂಘಗಳ ಸಹಾಯಕ ನಿಬಂದಕ ಸಣ್ಣಪಯ್ಯ ಆದೇಶ ಹೊರಡಿಸಿದ್ದಾರೆ.
ಕೊಂಡವಾಡಿ ಹಾಲು ಉತ್ಪಾದಕರ ಸಹಕಾರ ಸಂಘವು ಮಧುಗಿರಿ ತಾಲ್ಲೂಕಿನಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ರನ್ವಯ ನೋಂದಣಿಯಾಗಿರುವ ಸಹಕಾರ ಸಂಘವಾಗಿದ್ದು, ಕೊಂಡವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ನಿರ್ದೇಶಕರಾಗಿರುವ ಕೊಂಡವಾಡಿ ಚಂದ್ರಶೇಖರ್ ಅವರು ತುಮಕೂರು ನಗರ ವಾಸಿಯಾಗಿರುವುದು ತಿಳಿದು ಬಂದಿದೆ ಮತ್ತು 2023 ರ ಸಾರ್ವಜನಿಕ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ತಾಲೂಕಿನ ಕಸಬಾ ಹೋಬಳಿ, ಎಂ.ಬಸವನಹಳ್ಳಿ ಗ್ರಾಮದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಕಂಡು ಬಂದಿದೆ, ಈ ಹಿನ್ನೆಲೆಯಲ್ಲಿ 2023 ರ ಜುಲೈ 06 ರಂದು ಕಾರಣ ಕೇಳಿ ನೋಟೀಸ್ ನೀಡಲಾಗಿದ್ದು, ಈ ನೋಟೀಸ್ ಗೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಸದಸ್ಯತ್ವಕ್ಕೆ ಸ್ಪರ್ಧಿಸುವ ಉದ್ದೇಶದಿಂದ ನನ್ನ ಮತವನ್ನು ನನಗೆ ಚಲಾಯಿಸುವ ಆಕಾಂಕ್ಷೆಯಿಂದ ಮಧುಗಿರಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಎಂ.ಬಸವನಹಳ್ಳಿ ಗ್ರಾಮದಲ್ಲಿ ನನ್ನ ಸ್ವಯಾರ್ಜಿತ ಜಮೀನು ಇರುವುದರಿಂದ ಎಂ.ಬಸವನಹಳ್ಳಿ ಗ್ರಾಮಕ್ಕೆ ಮತದಾನದ ಹಕ್ಕನ್ನು ವರ್ಗಾಯಿಸಿರುತ್ತೇನೆ ಎಂದು ಕೊಂಡವಾಡಿ ಚಂದ್ರಶೇಖರ್ ಲಿಖಿತವಾಗಿ ತಿಳಿಸಿದ್ದು, ಹಾಗಾಗಿ ಇವರು ಎಂ.ಬಸವನಹಳ್ಳಿ ಗ್ರಾಮದ ವಾಸಿಯಾಗಿದ್ದು, ಕೊಂಡವಾಡಿ ಗ್ರಾಮದಲ್ಲಿ ವಾಸಿಸುತ್ತಿರುವುದಿಲ್ಲವೆಂದು ದೃಢಪಟ್ಟಿದೆ.

ಇದಲ್ಲದೇ ಇವರು ತುಮಕೂರಿನ ಗಂಗೋತ್ರಿ ನಗರದಲ್ಲಿ ವಾಸವಾಗಿದ್ದು, ಇದೇ ವಿಳಾಸ ನೀಡಿ ವಾಹನ ಚಾಲನಾ ಪರವಾನಗಿ ಪಡೆದಿದ್ದು, ಸಿಟಿ ಕ್ಲಬ್, ತುಮಕೂರು ಕ್ಲಬ್ ನಲ್ಲಿ ಈ ವಿಳಾಸ ನೀಡಿಯೇ ಸದಸ್ಯರಾಗಿರುತ್ತಾರೆ, ಆದ್ದರಿಂದ ಇವರು ಮಧುಗಿರಿ ತಾಲೂಕು ಕೊಂಡವಾಗಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಕಾರ್ಯವ್ಯಾಪ್ತಿಯಲ್ಲಿ ವಾಸಿಸದೆ ಸಂಘದ ನೋಂದಾಯಿತ ಉಪ ನಿಯಮ ಸಂಖ್ಯೆ 17ನ್ನು ಉಲ್ಲಂಸಿರುವುದು ಸ್ಪಷ್ಟವಾಗಿರುತ್ತದೆ, ಆದ್ದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 17(3) ಅನ್ವಯ ಕೊಂಡವಾಡಿ ಚಂದ್ರಶೇಖರ್ ಅವರ ಕೊಂಡವಾಡಿ ಹಾಲು ಉತ್ಪಾದಕರ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಿರುವುದಾಗಿ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಇವರ ತುಮುಲ್ ನಿರ್ದೇಶಕರ ಸ್ಥಾನವು ರದ್ದು ಗೊಂಡಿರುತ್ತದೆ.

Get real time updates directly on you device, subscribe now.

Comments are closed.

error: Content is protected !!