ಮಧುಗಿರಿ: ಸುಮಾರು 7.5 ಲಕ್ಷ ರೂ. ಬೆಲೆ ಬಾಳುವ ಕ್ಯಾಂಟರ್ ಲಾರಿಯೊಂದನ್ನು ಅಪರಿಚಿತರು ಕಳ್ಳತನ ಮಾಡಿರುವ ಘಟನೆ ಮಧುಗಿರಿ ಪಟ್ಟಣದ ಪಾವಗಡ ವೃತ್ತದ ಬಳಿ ಬುಧವಾರ ರಾತ್ರಿ ನಡೆದಿದೆ.
ಪಟ್ಟಣದ ಜಾಮೀಯಾ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕೆಎ-17, ಬಿ-3703 ನೋಂದಣಿ ಸಂಖ್ಯೆಯ ಇಚರ್ ಕಂಪನಿಯ ಕ್ಯಾಂಟರ್ ನ್ನು ಪಕ್ಕದ ಗುಬ್ಬಿ ತಾಲೂಕಿನ ಗ್ರಾಮದ ಮಾಲೀಕರೊಬ್ಬರಿಂದ ಸುಮಾರು 1.5 ಲಕ್ಷ ರೂ. ಮುಂಗಡವಾಗಿ ಕೊಟ್ಟು ಹತ್ತು ದಿನಗಳಾಗಿದ್ದು ಪಟ್ಟಣದ 1ನೇ ವಾರ್ಡ್ನ ವಾಸಿ ಲಾರಿ ಚಾಲಕ ಮುಜೀರ್ ರೆಹಮಾನ್ ಖರೀದಿಸಿ ತಂದಿದ್ದರು, ಆದರೆ ಬುಧವಾರ ಮಧ್ಯ ರಾತ್ರಿಯ ಸಮಯದಲ್ಲಿ ಜಾಮೀಯಾ ಮಸೀದಿಯ ಕಾಂಪೌಂಡ್ ಗೆ ಹೊಂದಿ ಕೊಂಡಿರುವ ಮಧುಗಿರಿ ಗೌರಿಬಿದನೂರು ಮುಖ್ಯ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕ್ಯಾಂಟರ್ ನ್ನು ಕದ್ದು ಪರಾರಿಯಾಗಿದ್ದಾರೆ, ಮತ್ತೆರಡು ಲಾರಿಗಳನ್ನು ಕಳ್ಳತನ ಮಾಡಲು ಪ್ರಯತ್ನ ಪಟ್ಟಿದ್ದು ಆ ಲಾರಿಗಳ ಕೀ ಗಳನ್ನು ದ್ವಂಸ ಗೊಳಿಸಲಾಗಿದೆ, ಮಧುಗಿರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು ಕ್ಯಾಂಟರ್ ಲಾರಿ ಮತ್ತು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಎಚ್ಚರಿಕೆಯ ಘಂಟೆ: ಮಧುಗಿರಿ ಪಟ್ಟಣದ ಇತಿಹಾಸಿಕ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಇತ್ತೀಚೆಗೆ 15ಕ್ಕೂ ಹೆಚ್ಚು ಕಾರುಗಳನ್ನು ಹಗಲು ಮತ್ತು ರಾತ್ರಿ ವೇಳೆ ನಿಲ್ಲಿಸುತ್ತಿದ್ದು, ಈ ವಾಹನಗಳಿಗೆ ಯಾವುದೇ ರಕ್ಷಣೆ ಇರುವುದಿಲ್ಲ, ಈ ವಾಹನಗಳು ಕಳ್ಳತನವಾದರೆ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ, ಯಾಕೆಂದರೆ ದೇವಾಲಯಗಳಲ್ಲಿ ಯಾವುದೇ ಸಿಸಿ ಕ್ಯಾಮರಾ ಅಳವಡಿಸಿಲ್ಲ, ವಾಹನದ ಮಾಲೀಕರು ತಮ್ಮ ವಾಹನಗಳನ್ನು ತಮ್ಮ ಮನೆ ಮುಂಭಾಗ ನಿಲ್ಲಿಸಿಕೊಂಡರೆ ಒಳಿತು, ಇಲ್ಲವಾದರೆ ಕಳ್ಳತನವಾದರೆ ಯಾರು ಹೊಣೆ ಎಂಬುದು ಮೇಲಿನ ಘಟನೆ ಎಚ್ಚರಿಕೆಯ ಗಂಟೆಯಾಗಿದೆ.
Comments are closed.