ಸರಣಿ ಕಳವು- ಆರೋಪಿ ಬಂಧನ

129

Get real time updates directly on you device, subscribe now.


ವೈ.ಎನ್.ಹೊಸಕೋಟೆ: ದೊಡ್ಡಹಳ್ಳಿ ಪ್ರದೇಶದಲ್ಲಿ ಸರಣಿಗಳ್ಳತನ ಮಾಡಿದ್ದ ಆರೋಪಿ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಮೂಲದ ಮಲ್ಲೇಶಪ್ಪ (47) ಬಂಧಿತ ಆರೋಪಿ, ಈತನು ಗುರುವಾರ ರಾತ್ರಿ ದೊಡ್ಡಹಳ್ಳಿ ಗ್ರಾಮದ ಖಾಸಗಿ ಇಟ್ಟಿಗೆ ಕಾರ್ಖಾನೆ, ಮದ್ಯದಂಗಡಿ ಮತ್ತು ಮೆಡಿಕಲ್ ಸ್ಟೋರ್ ಗಳಲ್ಲಿ ಕಳತನ ನಡೆಸಿರುತ್ತಾನೆ, ಮೆಡಿಕಲ್ ಸ್ಟೋರ್ ನಲ್ಲಿ ಹನ್ನೆರಡು ಸಾವಿರ ರೂ. ನಗದು ಹಾಗೂ ಸುಮಾರು ಮೂರು ಸಾವಿರ ರೂ. ಚಿಲ್ಲರೆ ನಾಣ್ಯಗಳನ್ನು ಕದ್ದು ತನ್ನ ಗ್ರಾಮಕ್ಕೆ ತೆರಳಿ ಮನೆಯಲ್ಲಿ ನೋಟುಗಳನ್ನು ಕೊಟ್ಟು, ಉಳಿದಿದ್ದ ಚಿಲ್ಲರೆ ನಾಣ್ಯಗಳನ್ನು ಪುನಃ ದೊಡ್ಡಹಳ್ಳಿಗೆ ಬಂದು ಅಂಗಡಿಯೊಂದರಲ್ಲಿ ಬದಲಾವಣೆ ಮಾಡಿಕೊಳ್ಳುವ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

ಮದ್ಯದಂಗಡಿಯಲ್ಲಿ ಕಳ್ಳತನ ಮಾಡುವ ವೇಳೆ ಸಿಸಿ ಟಿವಿಯಲ್ಲಿ ಕಾಣಿಸಿಕೊಂಡಿದ್ದ ಈತನನ್ನು ಸ್ಥಳೀಯರು ಗುರ್ತಿಸಿರಿದ್ದರಿಂದ ಕಳ್ಳ ಸುಲಭವಾಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ, ಈ ಸಂಬಂಧ ವೈ.ಎನ್.ಹೊಸಕೋಟೆ ಪೊಲೀಸರು ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

ದೊಡ್ಡಹಳ್ಳಿ ಗ್ರಾಮವು ರಾಜ್ಯ ಹೆದ್ದಾರಿಯಲ್ಲಿದ್ದು, ಕೆಲವೇ ಕಿ.ಮೀ ಅಂತರದಲ್ಲಿ ಆಂಧ್ರಪ್ರದೇಶವಿದ್ದು ಅಲ್ಲಿನ ಜನತೆ ಮದ್ಯಕ್ಕಾಗಿ ಪ್ರತಿನಿತ್ಯ ಈ ಪ್ರದೇಶಕ್ಕೆ ಬರುತ್ತಿದ್ದಾರೆ, ಅವರಲ್ಲಿ ಕೆಲವರು ಇಂತಹ ಕಳ್ಳತನ ದರೋಡೆ ಕೊಲೆ ಇನ್ನಿತ್ಯಾದಿ ಕೃತ್ಯ ಮಾಡುತ್ತಿರುವುದು ಕಂಡು ಬರುತ್ತಿದೆ, ಇಂತಹ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಮತ್ತಷ್ಟು ಮದ್ಯದಂಗಡಿ ಮತ್ತು ರೆಸ್ಟೋರೆಂಟ್ ನಡೆಸಲು ಅನುಮತಿ ದೊರೆಯುತ್ತಿರುವುದು ಸಮಾಜ ಘಾತುಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತಿದೆ, ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆಯವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮೀಣ ಜನತೆ ಕೋರಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!