ಇಸ್ರೇಲ್, ಹಮಾಸ್ ಸಂಘರ್ಷ ಕೊನೆಗೊಳಿಸಿ

67

Get real time updates directly on you device, subscribe now.


ತುಮಕೂರು: ಇಸ್ರೇಲ್ ತಾನೆ ಹುಟ್ಟು ಹಾಕಿರುವ ಹಮಾಸ್ ಹಾಗೂ ಇಸ್ರೇಲ್ ದೇಶಗಳ ನಡುವಿನ ದಾಳಿ ಹಾಗೂ ಪ್ರತಿದಾಳಿ ಖಂಡಿಸಿ ಪ್ರಗತಿ ಪರ ಸಂಘಟನೆಗಳ ಒಕ್ಕೂಟ, ತುಮಕೂರು ಮತ್ತು ಶಾಂತಿ ಪ್ರಿಯರು ಹಾಗೂ ಸಿಪಿಐಎಂ ಪಕ್ಷ ಜಂಟಿಯಾಗಿ ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ಈ ಮೃಗೀಯ ಅಮಾನವಿಯ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಚಿಂತಕ ಸಿ.ಯತಿರಾಜು ಮಾತನಾಡಿ, ಎರಡು ದೇಶಗಳ ಹಲವು ಸಾವಿರ ನಾಗರಿಕರು, ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ ಹಾಗೂ ಆಸ್ತಿ ಪಾಸ್ತಿ, ಜೀವನಾಶಕ್ಕೆ ಈ ದಾಳಿಗಳು ಕಾರಣವಾಗುತ್ತಿವೆ, ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನಿರ್ಣಯಗಳನ್ನು ನಿರಂತರವಾಗಿ ಉಲ್ಲಂಸುತ್ತಿರುವ ಇಸ್ರೇಲ್ ದೇಶ ಪ್ಯಾಲೆಸ್ತೇನಿಯರ ನೆಲಗಳನ್ನು ಬೇಕಾಬಿಟ್ಟಿಯಾಗಿ ಆಕ್ರಮಿಸಿಕೊಂಡಿರುವುದು ಮತ್ತು ಪಶ್ಚಿಮ ದಂಡೆಯಲ್ಲಿ ಯಹೂದಿ ವಸಾಹತು ಶಾಹಿ ಸ್ಥಾಪನೆಗೆ ಕ್ರಮ ವಹಿಸುತ್ತಿದೆ, ಬೆಳೆಯುತ್ತಿರುವ ಜನಾಂಗೀಯ ದ್ವೇಷ ಮತ್ತು ಮತೀಯ ಮೂಲಭೂತವಾದ ಪ್ರಪಂಚದ ಜನತೆಯ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು.

ದಲಿತ ಸಂಘಟನೆ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಗೆ ಪರಿಣಾಮಕಾರಿಯಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡುವಂತೆ ಆಗ್ರಹಿಸಿದರು.
ಹೋರಾಟಗಾರ ಪಂಡಿತ್ ಜವಾಹರ್ ಮಾತನಾಡಿ, ಯುದ್ಧದಿಂದ ಸರ್ವ ನಾಶವೆ ಹೊರತು ಪ್ರಗತಿ ಮುನ್ನೆಡೆಗೆ ಹಾದಿಯಲ್ಲ, ಶಾಂತಿ- ಪ್ರೀತಿಯ ಸ್ಥಾಪನೆಗೆ ಮಾತುಕತೆಯೇ ಜಗತ್ತಿನ ಜೀವ ಪರರ ಮಂತ್ರ ಆಗಬೇಕೆಂದರು.
ಸಾಮಾಜಿಕ ಹೋರಾಟಗಾರ ಸೈಯದ್ ತಾಜುದ್ಧೀನ್ ಮಾತನಾಡಿ, ತಾನೆ ಪ್ಯಾಲೆಸ್ತೇನ್ ವಿರುದ್ಧ ಸೃಷ್ಟಿಸಿದ ಹಮಾಸ್ ವಿರುದ್ಧ ಇಸ್ತೇಲ್ ಹೋರಾಟ ಮಾಡುವಂತಾಗಿದೆ, ಬಹುಪಾಲು ಮಾಧ್ಯಮಗಳು ನಿಜ ಸ್ಥಿತಿ ತಿಳಿಸುತ್ತಿಲ್ಲ, ಬದಲಿಗೆ ಜನತೆಯಲ್ಲಿ ದ್ವೇಷ ಹರಡುತ್ತಿವೆ, ಪ್ಯಾಲೆಸ್ತೇನ್ ಮೂಲ ನಿವಾಸಿಗಳಿಗೆ ಜಾಗ ಇಲ್ಲದಂತೆ ಇಸ್ರೇಲ್ ವರ್ತಿಸುತ್ತಿದೆ ಎಂದರು.

ಸಿಪಿಐಎಂನ ಸೈಯದ್ ಮುಜೀಬ್ ಮಾತನಾಡಿ, ಈ ಯುದ್ಧದ ಬಗ್ಗೆ ಬಹಳಷ್ಟು ಸುಳ್ಳುಗಳನ್ನು ಸಾಮ್ರಾಜ್ಯಶಾಹಿ ಮಾಧ್ಯಮಗಳು ಹರಡುತ್ತಿವೆ, ಜೀವ ರಕ್ಷಕ ಆಸ್ಪತ್ರೆ, ಜನವಸತಿ ಪ್ರದೇಶಗಳ ಮೇಲಿನ ದಾಳಿಯು ಮಕ್ಕಳು ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಹಿಂಸೆ, ದ್ವೇಷ ಸಮರ್ಥಿಸುವ ನಡೆ ಮತ್ತು ಪ್ರವೃತ್ತಿ ಮನುಷ್ಯ ವಿರೋಧಿಯಾಗಿದೆ, ಇದನ್ನು ಜನಾಂಗಿಯ ದ್ವೇಷ ಮತ್ತು ರಾಜಕೀಯ ಲಾಭಕ್ಕೆ ನಡೆಸಲಾಗುತ್ತಿದೆ ಎಂದರು.

ಪ್ರಗತಿಪರ ಸಂಘಟನೆಗಳ ಸಂಚಾಲಕ ಬಿ.ಉಮೇಶ್, ಎಂ.ಎಸ್.ಎಸ್.ಕಲ್ಯಾಣಿ, ಎಐಟಿಯುಸಿ ಗಿರೀಶ್, ಸಿಐಟಿಯುನ ಎನ್.ಕೆ.ಸುಬ್ರಮಣ್ಯ, ಯುವ ಮುಖಂಡ ಸೈಯದ್ ಮುದಸಿರ್, ಇನ್ಸಾಪ್ ಸಂಘಟನೆ ರಫಿಕ್, ಜನವಾದಿ ಮಹಿಳಾ ಸಂಘದ ಕಲ್ಪನಾ, ವಿದ್ಯಾರ್ಥಿ ಸಂಘಟನೆ ಅಶ್ಚಿನಿ, ಸಮುದಾಯದ ಅಶ್ವಥಯ್ಯ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆರುಣ್, ಆಟೋ ಯೂನಿಯನ್ ನ ಇಂತಿಯಾಜ್ ಪಾಷ, ರೈತ ಸಂಘಟನೆ ಎಸ್.ಎನ್.ಸ್ವಾಮಿ, ಅಜ್ಜಲ್ ಷರೀಫ್, ತಮೀಜ್ ಉದ್ದಿನ್, ಮೌಲಾನ ಯುಸೂಫ್, ಉಮರ್ ಫಾರುಕ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!