ಪಾವಗಡ: ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ, ಜಿಲ್ಲಾ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಕೆ.ಎನ್.ರಾಜಣ್ಣ ತಂದಿದ್ದಾರೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ತಾಲೂಕಿನ ನಿಡಗಲ್ಲು ಹೋಬಳಿಯ ಮಂಗಳವಾಡ ಗ್ರಾಮದಲ್ಲಿ ವಿಎಸ್ಎಸ್ಎನ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, 1976 ರಲ್ಲಿ ಸ್ಥಾಪನೆಯಾದ ಮಂಗಳವಾಡ ವಿಎಸ್ಎಸ್ಎನ್ ಸಂಘವು ಜಿಲ್ಲೆಗೆ ಉತ್ತಮ ಹೆಸರು ಗಳಿಸಿದೆ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣನವರು ಸೊಸೈಟಿಗಳಲ್ಲಿ ಚುನಾವಣೆ ಇಲ್ಲದೆ ಅವಿರೋಧ ಆಯ್ಕೆಗೆ ಒತ್ತು ನೀಡಿರುವುದು ನಮ್ಮೆಲ್ಲ ಹಾಗೂ ಈ ಭಾಗದ ರೈತರ ಸೌಭಾಗ್ಯ, ಸಾಲ ಪಡೆದ ರೈತರು ಸಾಲ ಮರುಪಾವತಿ ಮಾಡಿ ಎಂದು ರೈತರಿಗೆ ಕರೆ ನೀಡಿದರು.
ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಿಸಲು ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಮಂಗಳವಾಡ ವಿಎಸ್ಎಸ್ಎನ್ ರಾಷ್ಟ್ರೀಕೃತ ಬ್ಯಾಂಕ್ಗಿಂತ ಏನು ಕಮ್ಮಿ ಇಲ್ಲ ಎಂದು ತೋರಿಸಿರುವ ಬ್ಯಾಂಕ್ 4 ಕೋಟಿಗೂ ಅಧಿಕ ಸಾಲ ಪಡೆದ ರೈತರಿಗೆ ಸಾಲ ಸೌಲಭ್ಯ ನೀಡಿದೆ, ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಎಂದರು.
ಸಂಸ್ಥಾಪಕ ಅಧ್ಯಕ್ಷ ಚಿಕ್ಕನಾಗಪ್ಪ, ವೆಂಕಟರವಣಪ್ಪ ಅವರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ವಿ.ವೆಂಕಟೇಶ್, ತಾಪಂ ಸದಸ್ಯ ಪುಟ್ಟಣ್ಣ, ಹನುಮಂತರಾಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ರಾಮಕೃಷ್ಣ ನಾಯ್ಕ , ಶ್ರೀಧರ್, ತಿಪ್ಪೇಸ್ವಾಮಿ, ಜಂಗಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ, ಮಂಗಳವಾಡ ವಿಎಸ್ಎಸ್ಎನ್ ಸಿಇಓ ವಿದ್ಯಾಶಂಕರ್, ಅಕೌಂಟೆಟ್ ಹನುಮಂತರಾಯಪ್ಪ ಇತರರು ಇದ್ದರು.
ಕೆಎನ್ಆರ್ ರಿಂದ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ
Get real time updates directly on you device, subscribe now.
Prev Post
Next Post
Comments are closed.