ತುಮಕೂರು: ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್, ತುಮಕೂರು ಇವರು ನವೆಂಬರ್ 26 ಮತ್ತು 27 ರಂದು ತುಮಕೂರು ವಿವಿಯ ಡಾ.ಶಿವಕುಮಾರ ಸ್ವಾಮೀಜಿಗಳ ಸಭಾಂಗಣದಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ ಹೆಸರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ ಪೋಸ್ಟರ್ ನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕರಾಟೆ ತರಬೇತುದಾರರಾದ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಕರ್ನಾಟಕವಲ್ಲದೆ ರಾಷ್ಟ್ರದ ವಿವಿಧ ಭಾಗಗಳಿಂದ ಸುಮಾರು 1500 ಜನ ಕರಾಟೆ ಪಟುಗಳು ಭಾಗವಹಿಸುತಿದ್ದು, ಇವರೆಲ್ಲರಿಗೂ ಊಟ, ವಸತಿ ವ್ಯವಸ್ಥೆಯನ್ನು ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇ ಷನ್ ಮಾಡುತ್ತಿದ್ದು, ಇವರಿಗೆ ಕ್ರೀಡಾ ಪೋತ್ಸಾಹಕರಾದ ಧನಿಯಕುಮಾರ್ ಮತ್ತು ನೇತಾಜಿ ಶ್ರೀಧರ್ ಸಹಕಾರ ನೀಡುತ್ತಿದ್ದಾರೆ, ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ ಎಂದರು.
ಕರಾಟೆ ಒಂದು ಆತ್ಮರಕ್ಷಣೆಯ ಕಲೆ, ಇತ್ತೀಚಿನ ದಿನಗಳಲ್ಲಿ ಬಹಳ ಪ್ರಾಮುಖ್ಯತೆಗೆ ಬರುತ್ತಿದೆ, ಹೆಚ್ಚಿನ ರೀತಿಯಲ್ಲಿ ಹೆಣ್ಣು ಮಕ್ಕಳು ಈ ಕಲೆಯತ್ತ ಗಮನ ಹರಿಸುತ್ತಿರುವುದು ಸಂತೋಷದ ವಿಚಾರ, ನಮ್ಮ ಸರಕಾರ ಸಹ ಕ್ರೀಡೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರಿ ಉದ್ಯೋಗ, ಉನ್ನತ ಶಿಕ್ಷಣದ ಪ್ರವೇಶಗಳಲ್ಲಿ ಶೇ.2 ರಷ್ಟು ಮೀಸಲಾತಿ ಕ್ರೀಡಾಪಟುಗಳಿಗೆ ಘೋಷಿಸಿದೆ, ಇದರ ಸದುಪಯೋಗ ಪಡೆದುಕೊಂಡು ಮಕ್ಕಳು ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳಲಿ ಎಂದರು.
ಕನ್ನಡಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ನಗರದ ತುಮಕೂರು ವಿವಿ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ 2023ರ ನವೆಂಬರ್ 26 ಮತ್ತು 27 ರಂದು ನಡೆಯುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳಲ್ಲದೆ, ನೆರೆಯ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ಉತ್ತರಾಖಂಡ ಸೇರಿದಂತೆ 14 ರಾಜ್ಯಗಳ 1500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಹೊರ ರಾಜ್ಯಗಳಿಂದ ಬರುವ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೆಸರಿನಲ್ಲಿ ಕೆಎನ್ ಆರ್ ಕಪ್ ಎಂದೇ ಕ್ರೀಡಾಕೂಟ ನಡೆಯುತ್ತಿದ್ದು, ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ ಎಂದರು.
ಲಯನ್ ಮಾರ್ಷಲ್ ಆರ್ಟ್ಸ್ ನ ಪ್ರಕಾಶ್ ಮಾತನಾಡಿ, ನಮ್ಮ ಸಂಸ್ಥೆಯಿಂದ ನಡೆಸುತ್ತಿರುವ 7ನೇ ರಾಷ್ಟ್ರೀಯ ಕ್ರೀಡಾಕೂಟ ಇದಾಗಿದೆ, ಕ್ರೀಡಾಕೂಟದಲ್ಲಿ ವಯಸ್ಸು ಮತ್ತು ದೇಹ ತೂಕ ಗಮನದಲ್ಲಿಟ್ಟುಕೊಂಡು ವಿಭಾಗಗಳನ್ನು ರಚಿಸಿದ್ದು, ಎಲ್ಲಾ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ಎರಡು ತೃತೀಯ ಬಹುಮಾನ ನೀಡಲಾಗುತ್ತಿದೆ, ಅಲ್ಲದೆ ಭಾಗವಹಿಸಿದ ಎಲ್ಲಾ ಕರಾಟೆ ಪಟುಗಳಿಗೆ ಪ್ರಸಂಶನಾ ಪತ್ರ ಸಹ ನೀಡಲಾಗುತ್ತಿದೆ, ಜನತೆ ಕ್ರೀಡಾಕೂಟ ವೀಕ್ಷಿಸಿ ಪೋತ್ಸಾಹಿಸುವಂತೆ ಕೋರಿದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಸಹಕಾರಿ ಧುರೀಣ ಪಿ.ಮೂರ್ತಿ, ನೇತಾಜಿ ಶ್ರೀಧರ್, ಕೆ.ಎಸ್.ಸಂತೋಷ್, ಲಯನ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ನ ರವಿತೇಜ, ದಶರತ್, ಕಾರ್ತಿಕ್, ಸುಮುಖ, ವಿಜಯ್, ಗ್ರೀತೇಯು, ಖುಷಿ, ಪರಿಣಿಕ್, ವಂಶಿ, ಫಾತಿಮಾ ಮತ್ತಿತರರು ಇದ್ದರು.
Comments are closed.