ಹಾಸನಾಂಬೆ ದೇಗುಲ ಪ್ರಾರಂಭೋತ್ಸವಕ್ಕೆ ಸಚಿವರಿಗೆ ಆಹ್ವಾನ

97

Get real time updates directly on you device, subscribe now.


ತುಮಕೂರು: ಪ್ರತಿ ವರ್ಷ ಕಾರ್ತಿಕಮಾಸದಲ್ಲಿ ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆಯುವ ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಪ್ರಾರಂಭೋತ್ಸವಕ್ಕೆ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹಾಸನ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.

ನ.2 ರಿಂದ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಿದ್ದು, ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ತುಮಕೂರಿನ ನಿವಾಸಕ್ಕೆ ಹಾಸನ ಉಪ ವಿಭಾಗಾಧಿಕಾರಿ ಮಾರುತಿಗೌಡ ಆಗಮಿಸಿ ಸಚಿವ ರಾಜಣ್ಣ ಮತ್ತು ಶಾಂತಲಾ ರಾಜಣ್ಣ ದಂಪತಿಯನ್ನು ಹಾಸನಾಂಬೆ ದೇವಾಲಯ ಪೂಜಾ ವಿಧಿ ವಿಧಾನಗಳ ಪ್ರಾರಂಭೋತ್ಸವಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.

ನ.2 ರಿಂದ ನಾಡಿನ ಭಕ್ತರಿಗೆ ಹಾಸನಾಂಬೆಯ ದರ್ಶನ ಲಭ್ಯವಾಗಲಿದ್ದು, ಈ ಧಾರ್ಮಿಕ ಪೂಜಾ ಕಾರ್ಯಕ್ರಮ ಆರಂಭಿಸುವ ಸಲುವಾಗಿ ಹಮ್ಮಿಕೊಂಡಿರುವ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಹಾಸನ ಜಿಲ್ಲಾಡಳಿತದ ವತಿಯಿಂದ ಸಚಿವರನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!