ರಾಮನಗರ ಜಿಲ್ಲೆಯ ಜಮೀನಿನ ಮೇಲೆ ಡಿಸಿಎಂ ಕಣ್ಣು

ಕನಕಪುರದ ಅಸ್ತಿ ಮೌಲ್ಯ ಹೆಚ್ಚಿಸಿಕೊಳ್ಳಲು ಡಿಕೆಶಿ ದಂಧೆ: ಎಚ್ ಡಿಕೆ ಆರೋಪ

69

Get real time updates directly on you device, subscribe now.


ಕುಣಿಗಲ್: ಕನಕಪುರ ಬಂಡೆಯನ್ನು ಮುಗಿಸಿದವರು ಇದೀಗ ರಾಮನಗರ ಜಿಲ್ಲೆಯ ಜಮೀನಿನ ಮೇಲೆ ಕಣ್ಣುಹಾಕಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಅಡಿಲೆಕ್ಕದಲ್ಲಿ ದುಡ್ಡು ಹೊಡೆಯಲು ರಾಮನಗರ ಜಿಲ್ಲೆ ಹೊಡೆಯಲು ಹೊರಟಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸಂಜೆ ವಿಜಯದಶಮಿ ಅಂಗವಾಗಿ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಕೆ.ಜಿ.ದೇವಪಟ್ಟಣ ಗ್ರಾಮದಲ್ಲಿನ ಹಂಗರಹಳ್ಳಿ ಶ್ರೀವಿದ್ಯಾಚೌಡೇಶ್ವರಿ ಮಠದಲ್ಲಿ ಹಮ್ಮಿಕೊಳ್ಳಲಾದ ಶತ ಚಂಡಿಹೋಮದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಗೆ ಐದು ಕೆಜಿ ತೂಕದ ರಜತ ಖಡ್ಗ ಸಮರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಭಿಮಾನಿಗಳು ನನ್ನ ಅರೋಗ್ಯ ರಕ್ಷಣೆಗೆ ಹರಕೆ ಹೊತ್ತಿದ್ದರು ಅದರಂತೆ ಹರಕೆ ತೀರಿಸಲು ಬಂದಿದ್ದು, ರಾಜ್ಯದ ರೈತರು ಕಷ್ಟ ನಿವಾರಣೆಗೆ, ತಮ್ಮ ತಂದೆ-ತಾಯಿಯವರು ಶತಾಯುಶಿಗಳಾಗುವಂತೆ, ರಾಜ್ಯ, ದೇಶ ಸುಭಿಕ್ಷೆವಾಗಿರಲೆಂದು ಸಂಕಲ್ಪಿಸಿ ಪೂಜೆ ಸಲ್ಲಿಸಿದ್ದೇನೆ. ದೇವಿಯ, ಜನರ ಅಶೀರ್ವಾದ ಇದ್ದಲ್ಲಿ ತಾವು ಪುನಃ ಮುಖ್ಯಮಂತ್ರಿಯಾಗುವುದರಲ್ಲಿ ಅನುಮಾನ ಬೇಡ. ರಾಜ್ಯದ ಡಿಸಿಎಂ ರಾಮನಗರ ಜಿಲ್ಲೆಯ ಭಾಗವಾಗಿರುವ ಕನಕಪುರವನ್ನು ಬೆಂಗಳುರಿಗೆ ಸೇರಿಸುತ್ತೇವೆ ಎನ್ನುತ್ತಾರೆ ಎಂದರು.

ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ದೇವೆಗೌಡರ ಕುಟುಂಬದ ಕೊಡುಗೆ ಏನೆಂದು ಜನತೆಗೆ ಗೊತ್ತಿದೆ. ಕಳೆದ ಹಲವಾರು ದಶಕಗಳಲ್ಲಿ ಸಮಗ್ರ ಅಭಿವೃದ್ದಿ ಮಾಡಿ, ಜನರ ತಲಾ ಅದಾಯ ಹೆಚ್ಚಿಸಿದ್ದುದ ಯಾರೆಂದೂ ಜನತೆಗೆ ಗೊತ್ತಿದೆ. ಕನಕಪುರದ ಬಂಡೆಮುಗಿಸಿದ ಇವರು ಇದೀಗ ಕನಕಪುರದಾದ್ಯಂತ ತಮ್ಮ ಅಸ್ತಿ ಮೌಲ್ಯ ವೃದ್ದಿಸಲು, ರಿಯಲ್ ಎಸ್ಟೇಟ್ ದಂಧೆ ಮಾಡಿ ಜನರ ಲೂಟಿ ಮಾಡಲು ಹೊರಟಿದ್ದಾರೆ. ಇವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸುತ್ತಾರೆ. ಡಿಸಿಎಂ ಕನಪುರ ಪ್ರತಿನಿಧಿಸುತ್ತದ್ದಾರೋ, ರಾಮನಗರ ಪ್ರತಿನಿಧಿಸುತ್ತಿದ್ದಾರೋ ಅವರೆ ಹೇಳುವಂತೆ ಭಕ್ತನಿಗೂ ದೇವರಿಗೂ ವ್ಯವಹಾರ ಇದೆ ಎಂದು ಅದಾವ ರೀತಿ ವ್ಯವಹಾರ ಎಂದು ಅವರೆ ಹೇಳಲಿ.

ಮುಖ್ಯಮಂತ್ರಿ, ಗೃಹಮಂತ್ರಿ ವೆಸ್ಟ್ಎಂಡ್ ಹೋಟೆಲ್ ನ ವಾಸ್ತವ್ಯ ಎಂದು ನನ್ನಬಗ್ಗೆ ಹಗುರವಾಗಿ ಮಾತನಾಡುವುದು ಬಿಡಲಿ, ತಾವು ರಷ್ಯದ ಕ್ರೆಮ್ಲಿನ್ ಅರಮನೆಯಲ್ಲೂ ಮಲಗಿದ್ದೇನೆ ಬಡ ರೈತರ, ಪೌರಕಾರ್ಮಿಕರ ಮನೆಯಲ್ಲೂ ಮಲಗಿದ್ದೇನೆ, ಈಗಿನ ಮುಖ್ಯಮಂತ್ರಿಗಳು ಸಂಜೆ ಆರುಗಂಟೆ ಮೇಲೆ ಎಲ್ಲಿ ವ್ಯವಹಾರ ಮಾಡುತ್ತಾರೆ ಎಂಬುದು ಅವರೆ ಹೇಳಲಿ. ಕಾಂಗ್ರೆಸ್ ನ ಮುಖಂಡರು ಬೇರೆ ಬೇರೆ ಪಕ್ಷದವರನ್ನು ತಮ್ಮ ಕಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಮೊದಲು ಅವರ ಮನೆಯಲ್ಲಿರುವ ಗೊಂದಲ, ಗುಂಪು ಜಗಳ ಬಗೆಹರಿಸಿಕೊಳ್ಳಲಿ. ವಿದ್ಯುತ್ ಕೊರತೆ ಎಂದು ಗೊತ್ತಿದ್ದರೂ ಕಲ್ಲಿದ್ದಲು ಸಂಗ್ರಹಿಸಲು ಮುಂಗಡ ಹಣ ಕೊಡದ ಸರ್ಕಾರ ಇದೀಗ ವಿದ್ಯುತ್ ಕೊರತೆ ನೆಪದಲ್ಲಿ ಲೂಟಿ ಹೊಡೆಯಲು ನಿಂತಿದೆ.ಇವರು ಅಡಳಿತ ವೈಫಲ್ಯವನ್ನು ಜನತೆ ಮುಂದಿಡಲಿ ಅದು ಬಿಟ್ಟು ವಿರೋಧ ಪಕ್ಷಗಳ ನಾಯಕರ ಬಗ್ಗೆ ಹಗುರವಾಗಿ, ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಬಿಜೆಪಿ ಜೊತೆ ಮೈತ್ರಿ ಬಗ್ಗೆ ಪಂಚರಾಜ್ಯಗಳ ಚುನಾವಣೆ ಇರುವುದರಿಂದ ಮುಗಿದ ನಂತರ ಅ ಬಗ್ಗೆ ಚರ್ಚೆ ಎಂದರು.

ಮಠಾಧೀಶರಾದ ಬಾಲಮಂಜುನಾಥಸ್ವಾಮಿ ಮಾತನಾಡಿ, ಇಡೀ ದೇಶದಲ್ಲಿ ದಸರಾ ಹಬ್ಬಾಚರಣೆ ಮಾಡುತ್ತಿದ್ದಾರೆ. ನಾಡದೇಬವತೆ ಹಬ್ಬವಾಗಿದ್ದು ತಾಯಿಭಾರತಿಗೆ ಯಾವುದೇ ತೊಂದರೆಯಾಗದಿರಲೆಂದು ಇಡೀ ರಾಜ್ಯ, ದೇಶ ಸುಭದ್ರವಾಗಿರಲೆಂದು ಸಂಕಲ್ಪಿಸಿ ಲೋಕಲ್ಯಾಣಾರ್ಥವಾಗಿ ಶತಚಂಡಿಹೋಮ ಮಾಡಲಾಗಿದೆ. ಮಾಜಿ ಸಿಎಂ ಅಭಿಮಾನಿಗಳು ಹರಕ ಹೊತ್ತಿದ್ದರಿಂದ ಮಾಜಿಸಿಎಂ ಪೂಜೆ ಸಲ್ಲಿಸಲು ಬಂದಿದ್ದಾರೆ. ಅವರು ರೈತಪರ, ಧರ್ಮಪರ, ರಾಜ್ಯ ದೇಶ ಪರ ಚಿಂತಕರು ಹೀಗಾಗಿ ಅವರು ಅಗಮಿಸಿ ಸಂಕಲ್ಪಿಸಿ ಪೂಜೆ ಸಲ್ಲಿಸಿದ್ದಾರೆ. ಕ್ಷೇತ್ರಕ್ಕೆ ಬಂದು ಸಂಕಲ್ಪಿಸಿದ ಎಲ್ಲರಿಗೂ ಒಳ್ಳಯದೆ ಅಗಿದೆ ಹಾಗೇಯ ಅವರಿಗೂ ಒಳ್ಳೆಯದಾಗುತ್ತೆ ಎಂದರು.

ಡಿಸಿಪಿ ರಾಹುಲ್ ಕುಮಾರ್ ಶಹಪೂರ್, ಮಾಜಿ ಸಚಿವ ಡಿ.ನಾಗರಾಜಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಪ್ರಮುಖ ಕೆ.ಎಲ್.ಹರೀಶ್, ವೆಂಕಟೇಶ್, ಬಾಬು, ನಾಗರಾಜು, ಎಡೆಯೂರುದೀಪು, ಮನೋಜ್, ನಿಖಿಲ್ ಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!