ಕುಣಿಗಲ್: ಹುಲಿ ಉಗರು ಪದಕವನ್ನು ಸ್ವಾಮಿಜಿ ಧರಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರವೂ ಅರಣ್ಯ ಇಲಾಖಾಧಿಕಾರಿಗಳು ಪಟ್ಟಣದ ಬಿದನಗೆರೆಯ ಬಸವೇಶ್ವರ ಮಠದ ಸತ್ಯಶನೇಶ್ಚರ ಸ್ವಾಮಿ ದೇವಾಲಯದ ಕಾರ್ಯಾಲಯ, ಅವರಣದಲ್ಲಿ ತಪಾಸಣೆ ನಡೆಸಿದರು.
ಮಂಗಳವಾರ ದೂರಿನ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ರಾತ್ರಿವರೆಗೂ ಪರಿಶೀಲನೆ ನಡೆಸಿ ಬರಿಗೈಯಲ್ಲಿ ವಾಪಸಾಗಿದ್ದರು. ಬುಧವಾರ ಬೆಳಗ್ಗೆ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ದೇವಾಲಯ ಕಛೇರಿಗೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. ಈವೇಳೆ ಹಾಜರಿದ್ದ ಸಮಿತಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್, ಅಧಿಕಾರಿಗಳಿಗೆ ತಾವು ಖರೀದಿಸಿದ್ದ ಹುಲಿ ಉಗುರು ಹೋಲುವ ರೀತಿಯ ಪೆಂಡೆಂಟ್ ನ್ನು ಅಧಿಕಾರಿಗಳಿಗೆ ನೀಡಿ ಇದರ ಬಗ್ಗೆ ತಮಗೆ ಮಾಹಿತಿ ಇಲ್ಲ, ಖರೀದಿ ಮಾಡಿದ್ದು ಎಂದು ಇಲಾಖೆ ವಶಕ್ಕೆ ನೀಡಿದರು. ಸಮಿತಿಯ ಪರವಾಗಿ ಮಾಹಿತಿ ನೀಡಿದ ಅವರು 2018ರಲ್ಲಿ ಭಕ್ತರೊಬ್ಬರು ಪೆಂಡೆಂಟ್ ನೀಡಿದ್ದರು. ಅದನ್ನು ಧನಂಜಯಸ್ವಾಮಿಜಿ ಧರಿಸಿದ್ದರು ಕಾಲಕ್ರಮೇಣ ನಕಲಿ ಆದ್ದರಿಂದ ಅದು ಕಪ್ಪುಬಣ್ಣಕ್ಕೆ ತಿರುಗಿದ್ದು ಅದನ್ನು ವಿಸರ್ಜಿಸಿದ್ದಾರೆ. ಅ ನಂತರ ಯಾವುದೇ ಪೆಂಡೆಂಟ್ ಧರಿಸಿಲ್ಲ. ದೇವಾಲಯದ ಅವರಣದಲ್ಲಿ ಯಾವುದೇ ಪೆಂಡೆಂಟ್ ಇಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ತನಿಖೆ ಇನ್ನು ಮುಂದುವರೆಯಲಿದೆ ಎಲ್ಲಾ ರೀತಿಯಲ್ಲೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಹುಲಿ ಉಗುರಿಗಾಗಿ ಹುಡುಕಾಟ; ಬರಿಗೈಯಲ್ಲಿ ವಾಪಸ್!
ಬಿದನಗೆರೆ ಸತ್ಯಶನೇಶ್ಚರ ಸ್ವಾಮಿ ದೇಗುಲದಲ್ಲಿ ಅರಣ್ಯಾಧಿಕಾರಿಗಳ ಶೋಧನೆ
Get real time updates directly on you device, subscribe now.
Prev Post
Comments are closed.